ಚಾಮರಾಜನಗರ ಜಿಲ್ಲೆಯಲ್ಲಿ ಅತಿಸಾರಕ್ಕೆ 6 ಜನರ ಬಲಿ
ಮೈಸೂರು : ಚಾಮರಾಜನಗರ ಜಿಲ್ಲೆಯ ಬೇಡಮೂಡ್ಲು ಗ್ರಾಮದಲ್ಲಿ ಕಾಣಿಸಿಕೊಂಡಿರುವ ಅತಿಸಾರ ಭೇದಿಗೆ ಆರು ಮಂದಿ ಬಲಿಯಾಗಿದ್ದಾರೆ. ಇವರಲ್ಲಿ ಎರಡು ಮಕ್ಕಳೂ ಸೇರಿವೆ. ಕಾಯಿಲೆಯಿಂದ ತೀವ್ರ ಅಸ್ವಸ್ಥರಾಗಿರುವ 30ಕ್ಕೂ ಹೆಚ್ಚು ಜನರು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಜಿಲ್ಲೆಯಲ್ಲಿ ಎರಡು ಮಕ್ಕಳೂ ಸೇರಿದಂತೆ 6 ಜೀವಗಳನ್ನು ಬಲಿತೆಗೆದುಕೊಂಡಿರುವ ಇದು ಅತಿಸಾರ ಭೇಧಿಯೋ ಅಥವಾ ಬೇರೆ ಕಾಯಿಲೆಯೋ ಎಂಬುದು ತಿಳಿದುಬಂದಿಲ್ಲ. ಸ್ಥಳೀಯ ವೈದ್ಯರ ಪ್ರಕಾರ ಇದೊಂದು ಹೊಸ ವ್ಯಾಧಿ.
ಈ ಹೊಸ ಕಾಯಿಲೆ ಯಾವುದು ಎಂಬುದು ಇನ್ನೂ ಪತ್ತೆಯಾಗಿಲ್ಲ. ಈ ಮಧ್ಯೆ ಗ್ರಾಮಕ್ಕೆ ಭೇಟಿ ನೀಡಿದ್ದ ಜಿಲ್ಲಾ ಪ್ರಭಾರ ಆರೋಗ್ಯಾಧಿಕಾರಿ ಬಸವರಾಜ್ ಅವರು, ಗ್ರಾಮದಲ್ಲಿ ನೀರಿನ ಟ್ಯಾಂಕ್ ಒಡೆದು, ನೀರು ಕಲುಷಿತಗೊಂಡಿರುವುದರಿಂದ ಕಾಯಿಲೆ ತೀವ್ರತರವಾಗಿ ಹಬ್ಬಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಗ್ರಾಮಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ನೀರಿನ ಟ್ಯಾಂಕ್ ಅನ್ನು ಕಳೆದ ಐದಾರು ತಿಂಗಳಿನಿಂದಲೂ ಸ್ವಚ್ಛಗೊಳಿಸಿಲ್ಲ ಎಂದು ಗ್ರಾಮಸ್ಥರೂ ದೂರಿದ್ದರೆ, ಗ್ರಾಮದಲ್ಲಿ ಅತಿಸಾರ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಗ್ರಾಮಪಂಚಾಯಿತಿಯು ಟ್ಯಾಂಕನ್ನು ಸ್ವಚ್ಛಗೊಳಿಸುತ್ತಿದೆ.
(ಮೈಸೂರು ಪ್ರತಿನಿಧಿಯಿಂದ)












Click it and Unblock the Notifications