ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೆಲ್ಲಿಕುಂಜೆ ಜುಮಾ ಮಸೀದಿಯಲ್ಲಿ 11 ದಿನಗಳ ಉಪ್ಪಾಪ್ಪ ಉರೂಸ್‌

By Staff
|
Google Oneindia Kannada News

ಮಂಗಳೂರು : ಕಾಸರಗೋಡಿನ ನೆಲ್ಲಿಕುಂಜೆ ಮುಹಿಯುದ್ದೀನ್‌ ಜುಮಾಮಸೀದಿಯಲ್ಲಿ ಡಿಸೆಂಬರ್‌ 26ರಿಂದ ಹನ್ನೊಂದು ದಿನಗಳ ಕಾಲ ತಙಳ್‌ ಉಪ್ಪಾಪ್ಪ ಉರೂಸ್‌ ನಡೆಯಲಿದೆ.

ಅತಿಮಾನವ ಸಿದ್ಧಿಗಳಿಂದ ಅಲೌಕಿಕ ಶಕ್ತಿ ಸಂಪಾದಿಸಿದ್ದ ಉಪ್ಪಾಪ್ಪ ಅವರ ಪುಣ್ಯ ಸ್ಮರಣೆಗಾಗಿ ಆಚರಿಸುವ ಈ ಉರೂಸ್‌ ಮುಸ್ಲಿಂ ಜನಾಂಗದವರಿಗೆ ದೊಡ್ಡ ಜಾತ್ರೆ. ಪ್ರತಿ ಎರಡು ವರ್ಷಗಳಿಗೊಮ್ಮೆ ನೆಲ್ಲಿಕುಂಜೆಯಲ್ಲಿ ನಡೆವ ಈ ಉರೂಸ್‌ ಕರಾವಳಿಯ ಮುಸಲ್ಮಾನರನ್ನು ಒಂದೆಡೆ ಸೇರಿಸುತ್ತದೆ. ಇದು ಮಲಬಾರಿನ ಮಹತ್ವ ಆಚರಣೆ ಎಂದು ಜುಮಾಮಸೀದಿ ಸಮಿತಿಯ ಅಧ್ಯಕ್ಷ ಪೂನಾ ಅಬ್ದುಲ್‌ ರಹಿಮಾನ್‌ ಅವರ ಪ್ರಕಟಣೆ ತಿಳಿಸಿದೆ.

ಮಲಬಾರ್‌, ದಕ್ಷಿಣ ಕನ್ನಡ, ಕೊಡಗು, ಬೆಂಗಳೂರು, ಹೈದರಾಬಾದ್‌ ಪ್ರದೇಶಗಳಿಂದ ಮಾತ್ರವಲ್ಲದೆ ಗಲ್ಫ್‌ ರಾಷ್ಟ್ರದಿಂದಲೂ ಈ ಉರೂಸ್‌ಗಾಗಿ ಭಕ್ತರು ಆಗಮಿಸುತ್ತಾರೆ. ಉರೂಸ್‌ ಪ್ರಯುಕ್ತ ಜನವರಿ 6ರಂದು ಲಕ್ಷಾಂತರ ಜನರಿಗೆ ತುಪ್ಪದ ಅನ್ನದ ಪೊಟ್ಟಣಗಳನ್ನು ವಿತರಿಸುವ ಮೂಲಕ ಉರೂ ಸ್‌ ಕೊನೆಗೊಳ್ಳುತ್ತದೆ.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X