ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೀಡಾಡಿ ದನ ಕಟ್ಟಲು ಹೋದ ಪೊಲೀಸ್‌ ಪೇದೆಗೆ ಒದೆತ

By Staff
|
Google Oneindia Kannada News

ಬೆಂಗಳೂರು: ನಗರ ಪೊಲೀಸ್‌ ಕಮೀಷನರ್‌ ಎಚ್‌.ಟಿ.ಸಾಂಗ್ಲಿಯಾನ ಆದೇಶದ ಮೇರೆಗೆ ಜಾನುವಾರುಗಳನ್ನು ಹಿಡಿಯುವ ಪೊಲೀಸರ ಕೆಲಸ ಪ್ರಗತಿಯಲ್ಲಿರುವಂತೆಯೇ- ಜಾನುವಾರುಗಳನ್ನು ಹಿಡಿಯುವ ಹೆಚ್ಚುವರಿ ಕೆಲಸದ ಬಗ್ಗೆ ಪೊಲೀಸರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಸಾಂಗ್ಲಿಯಾನ ನಿಲುವಿಗೆ ಗೋಮಾಲೀಕರ ಪ್ರತಿಭಟನೆಯೂ ವ್ಯಕ್ತವಾಗಿದೆ. ಪೊಲೀಸ್‌ ಪೇದೆಯಾಬ್ಬ ದನದ ಒದೆತದಿಂದ ಗಾಯಗೊಂಡಿರುವುದು ಇನ್ನೊಂದು ವಿಶೇಷ.

ಬೀದಿಗಳಲ್ಲಿ ಸಂಚರಿಸುತ್ತಿದ್ದ 300 ಕ್ಕೂ ಹೆಚ್ಚು ಜಾನುವಾರುಗಳನ್ನು ಪೊಲೀಸರು ಬಂಧಿಸಿದ್ದು , ಇದರಿಂದಾಗಿ ಬೆಂಗಳೂರು ಮಹಾನಗರ ಪಾಲಿಕೆಗೆ 10 ಸಾವಿರ ರುಪಾಯಿಗೂ ಹೆಚ್ಚು ಆದಾಯ ಸಂಗ್ರಹವಾಗಿದೆ. ಈ ನಡುವೆ ಕೋರಮಂಗಲ ಪೊಲೀಸರು ದನಗಳನ್ನು ಹಿಡಿದಿದ್ದರಿಂದ ದನಗಳ ಮಾಲಿಕರು ಪೊಲೀಸ್‌ ಠಾಣೆಯ ಎದುರು ಧರಣಿ ನಡೆಸಿದ ಘಟನೆಯೂ ವರದಿಯಾಗಿದೆ.

ಸಂಚಾರಕ್ಕೆ ಅಡ್ಡಿ ಮಾಡುತ್ತಿದ್ದ ಕೆಲವು ದನಗಳನ್ನು ಆಡುಗೋಡಿ ಪೊಲೀಸರು ಹಿಡಿದಿದ್ದು , ಈ ದನಗಳನ್ನು ಕಟ್ಟಿ ಹಾಕುವಾಗ, ದನವೊಂದು ಕಾಲಿನಿಂದ ಜಾಡಿಸಿದ್ದರಿಂದ ಪೊಲೀಸ್‌ ಪೇದೆಯಾಬ್ಬರು ಗಾಯಗೊಂಡಿದ್ದಾರೆ.

(ಇನ್ಫೋ ವಾರ್ತೆ)

ವಾರ್ತಾ ಸಂಚಯ
ಮುಖಪುಟ / ಸಾಂಗ್ಲಿಯಾನ ವಾಚ್‌

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X