ಬೆಂಗಳೂರು ಐಟಿ.ಕಾಂ ನಂತರ ಮುಂದೇನು?ನಡೆಯಿರಿ ಮೈಸೂರಿಗೆ..
ಬೆಂಗಳೂರು : ರಾಜ್ಯದ ನಂಬರ್ ಟೂ ನಗರಿ ಎಂದೇ ಗುರ್ತಿಸಿಕೊಂಡಿರುವ ಸಾಂಸ್ಕೃತಿಕ ರಾಜಧಾನಿ ಮೈಸೂರು, ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲೂ ಬೆಂಗಳೂರಿನ ನಂತರ ಎರಡನೇ ಸ್ಥಾನದಲ್ಲಿ ಗುರ್ತಿಸಿಕೊಂಡಿದೆ. ರಾಜ್ಯದ ವಾರ್ಷಿಕ ಐಟಿ ಹಬ್ಬ ಬೆಂಗಳೂರು ಐಟಿ.ಕಾಂ ಮಾದರಿಯಲ್ಲೇ ಮೈಸೂರು ಐಟಿ.ಕಾಂ ಕೂಡ ಮೂರು ವರ್ಷದಿಂದ ನಡೆಯುತ್ತಿರುವುದು ಸರಿಯಷ್ಟೇ. ಈ ವರ್ಷ ಕೂಡ ಬೆಂಗಳೂರು ಐಟಿ.ಕಾಂ ಬೆನ್ನಿಗೇ ಮೈಸೂರಿನಲ್ಲಿ ಐಟಿ ಗಮಲು ಹರಡಿದೆ.
ನವಂಬರ್ 22 ರಿಂದ 25 ರವರೆಗೆ ಮೈಸೂರು ಐಟಿಕಾಂ ಮೇಳ ಮೈಸೂರಿನ ನಜರಾಬಾದ್ನಲ್ಲಿರುವ ಚಾಮುಂಡಿ ವಿಹಾರ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಮಾಹಿತಿ ತಂತ್ರಜ್ಞಾನ ನಿರ್ದೇಶಕ ಇ.ವಿ.ರಮಣ ರೆಡ್ಡಿ ಮತ್ತು ಮೈಸೂರು ಡೀಲರ್ಸ್ ಆಫ್ ಐಟಿಯ ಎಸ್.ವಿ.ವೆಂಕಟೇಶ್ ಜಂಟಿ ಸುದ್ದಿಗೋಷ್ಠಿಯಲ್ಲಿ ಶನಿವಾರ ಸುದ್ದಿಗಾರರಿಗೆ ತಿಳಿಸಿದರು.
ಮೈಸೂರು ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಐಟಿ ಮಾರುಕಟ್ಟೆಯನ್ನು ವಿಸ್ತರಿಸುವುದು ಹಾಗೂ ಐಟಿ ಬಂಡವಾಳ ಹೂಡಿಕೆದಾರರು ಹಾಗೂ ರಫ್ತುದಾರರು ಒಂದೆಡೆ ಕಲೆಯಲು ವೇದಿಕೆಯನ್ನು ಕಲ್ಪಿಸುವುದು ಮೈಸೂರು ಐಟಿಕಾಂ ಮೇಳದ ಪ್ರಮುಖ ಉದ್ದೇಶವಾಗಿದೆ.
ಸಾಫ್ಟ್ವೇರ್ ಕಂಪನಿಗಳು, ಹಾರ್ಡ್ವೇರ್ ಉದ್ದಿಮೆದಾರರು, ಮಲ್ಟಿಮೀಡಿಯಾ ಪಬ್ಲಿಷರ್ಗಳು, ಐಟಿ ತರಬೇತಿ ಸಂಸ್ಥೆಗಳು, ಇನ್ನಿತರ ಸಂಸ್ಥೆಗಳ ಮೈಸೂರು ಐಟಿ.ಕಾಂ ಷೋಕೇಸ್ ಆಗಲಿದೆ ಎಂದು ವೆಂಕಟೇಶ್ ತಿಳಿಸಿದರು.
(ಇನ್ಫೋ ವಾರ್ತೆ)
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications