Get Updates
Get notified of breaking news, exclusive insights, and must-see stories!

ದೆಹಲಿ : ಸಾವಿರಾರು ದಲಿತರು ಬೌದ್ಧ ಧರ್ಮಕ್ಕೆ ಮತಾಂತರ

ನವದೆಹಲಿ : ಇಲ್ಲಿನ ಅಂಬೇಡ್ಕರ್‌ ಭವನದಲ್ಲಿ ಭಾನುವಾರ ಜರುಗಿದ ಸಮಾರಂಭದಲ್ಲಿ ಸಾವಿರಾರು ದಲಿತರು ಬೌದ್ಧ ಧರ್ಮಕ್ಕೆ ಮತಾಂತರ ಹೊಂದಿದರು.

ಪೂರ್ವ ನಿಶ್ಚಯದಂತೆ ರಾಮಲೀಲಾ ಮೈದಾನದಲ್ಲಿ ಆಯೋಜಿಸಲಾಗಿದ್ದ ದಲಿತರ ರ್ಯಾಲಿ ಆಯೋಜಿಸಲಾಗಿದ್ದರೂ, ಪೊಲೀಸರು ಅನುಮತಿ ನಿರಾಕರಿಸಿದ್ದರಿಂದ ಅಂಬೇಡ್ಕರ್‌ ಭವನದಲ್ಲಿ ಪುಟ್ಟದಾಗಿ ಜರುಗಿತು. 1 ಲಕ್ಷಕ್ಕೂ ಹೆಚ್ಚು ಮಂದಿ ದಲಿತರು ಬೌದ್ಧ ಧರ್ಮಕ್ಕೆ ಪರಿವರ್ತನೆ ಹೊಂದುವರೆನ್ನುವ ಕಾರ್ಯಕ್ರಮದ ಸಂಘಟಕರು ಈ ಮುನ್ನ ಹೇಳಿಕೆ ನೀಡಿದ್ದು , ಈ ಕುರಿತು ಹಿಂದೂ ಸಂಘಟನೆಗಳಿಂದ ಪ್ರತಿಭಟನೆ ವ್ಯಕ್ತವಾಗಿತ್ತು.

ರಾಜಧಾನಿಯ ವಿವಿಧ ಭಾಗಗಳಿಂದ ರಾಮಲೀಲಾ ಮೈದಾನಕ್ಕೆ ಆಗಮಿಸಲು ಯತ್ನಿಸಿದ ಸಾವಿರಾರು ದಲಿತರನ್ನು ಪೊಲೀಸರು ತಡೆಗಟ್ಟಿದರು. ಮೈದಾನತ್ತ ಧಾವಿಸಿದವರನ್ನು ನಾವು ತಡೆದಿದ್ದೇವೆ. ಆದರೂ ಅಂಬೇಡ್ಕರ್‌ ಭವನದಲ್ಲಿ ಕಾರ್ಯಕ್ರಮ ನಡೆದಿದೆ ಎಂದು ಜಂಟಿ ಪೊಲೀಸ್‌ ಕಮೀಷನರ್‌ ಅಜಯ್‌ ಚಡ್ಡಾ ಪಿಟಿಐಗೆ ತಿಳಿಸಿದ್ದಾರೆ. ಅಂಬೇಡ್ಕರ್‌ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಖಿಲ ಭಾರತ ಎಸ್‌ಸಿ/ಎಸ್‌ಟಿ ಸಂಘಟನೆಗಳ ಮುಖಂಡ ರಾಮರಾಜ್‌ ಮಾತನಾಡಿದರು.

(ಪಿಟಿಐ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+