ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಷ್ಕರ್‌ ಎ ತೋಯಿಬಾ, ಜೈಶ್‌ ಎ ಮೊಹಮದ್‌ನಿಷೇಧ: ಭಾರತ ಸ್ವಾಗತ

By Super
|
Google Oneindia Kannada News

ನವದೆಹಲಿ : ಅಮೆರಿಕವು ಪಾಕಿಸ್ತಾನ ಮೂಲದ ಲಷ್ಕರ್‌ ಎ ತೋಯಿಬಾ ಮತ್ತು ಜೈಶ್‌ ಎ ಮೊಹಮ್ಮದ್‌ಗಳನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ, ನಿಷೇಧಿಸಿರುವುದನ್ನು ಭಾರತ ಸರಕಾರ ಸ್ವಾಗತಿಸಿದೆ. ಇದರೊಂದಿಗೆ ಭಾರತದ ಬಹುದಿನಗಳ ಒತ್ತಾಯಕ್ಕೆ ಮನ್ನಣೆ ಸಿಕ್ಕಂತಾಗಿದೆ.

ಈ ನಿರ್ಧಾರವನ್ನು ಅಮೆರಿಕ ಕೊಂಚ ತಡವಾಗಿ ತೆಗೆದುಕೊಂಡಿದೆ. ಆದಾಗ್ಯೂ ನಾವು ಅಮೆರಿಕದ ಈ ನಿರ್ಧಾರವನ್ನು ಸ್ವಾಗತಿಸುತ್ತೇವೆ ಎಂದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಐ.ಡಿ. ಸ್ವಾಮಿ ಹೇಳಿದ್ದಾರೆ. ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದ ಅವರು, ಪಾಕ್‌ ಮೂಲದ ಈ ಭಯೋತ್ಪಾದಕ ಸಂಘಟನೆಗಳನ್ನು ನಿಷೇಧಿಸುವ ಮಹತ್ವದ ತೀರ್ಮಾನ ಕೈಗೊಂಡಿದ್ದಕ್ಕೆ ನಾವು ಅಮೆರಿಕವನ್ನು ಅಭಿನಂದಿಸುತ್ತೇವೆ ಎಂದರು.

ಈ ಎರಡು ಸಂಘಟನೆಗಳು ಕಾಶ್ಮೀರ ಕಣಿವೆಯಲ್ಲಿ ಗಡಿಯಾಚೆಯ ಭಯೋತ್ಪಾದನೆಯಲ್ಲಿ ತೊಡಗಿ, ಹಲವು ಮುಗ್ಧ ಭಾರತೀಯರು ಹಾಗೂ ಯೋಧರನ್ನು ಬಲಿ ತೆಗೆದುಕೊಂಡಿದ್ದವು ಎಂದು ಸ್ವಾಮಿ ಆರೋಪಿಸಿದರು.

ಇದಕ್ಕೂ ಮುನ್ನ ಅಮೆರಿಕದ ಜಾರಿ ನಿರ್ದೇಶನಾಲಯವು ವಿಶ್ವಾದ್ಯಂತ ಭಯೋತ್ಪಾದಕ ಚಟುವಟಿಕೆಯಲ್ಲಿ ತೊಡಗಿರುವ ಲಷ್ಕರ್‌ ಎ ತೋಯಿಬಾ, ಜೈಶ್‌ ಎ ಮೊಹಮ್ಮದ್‌ ಸೇರಿದಂತೆ ಒಟ್ಟು 48 ಸಂಘಟನೆಗಳನ್ನು ನಿಷೇಧಿಸುವಂತೆ ಸಂಸತ್‌ಗೆ ಶಿಫಾರಸು ಮಾಡಿತ್ತು. ಈ ಶಿಫಾರಿಸಿನನ್ವಯ ಅಮೆರಿಕ ಸರಕಾರವು ಲಷ್ಕರ್‌ ಹಾಗೂ ಜೈಶ್‌ ಮೊಹಮ್ಮದ್‌ ಮೇಲೆ ನಿಷೇಧ ಹೇರಿದೆ.(ಸುದ್ಧಿಸಂಸ್ಥೆಗಳು)

English summary
Indian government welcomes US decision to ban Laskhar-e-Tayiba and Jaish-e-mohammed
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X