ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಂತಿದೋ ಕನ್ನಡ ಮಾಸ! ವಾಟಾಳರಿಗೋ ಕೈತುಂಬಾ ಕೆಲಸ!

By Staff
|
Google Oneindia Kannada News

ಬೆಂಗಳೂರು: ಕನ್ನಡ ಚಳವಳಿಗಾಗಿ ಬೆಳ್ಳಿಗದೆ ಪಡೆದ ಖ್ಯಾತಿಯ ವಾಟಾಳ್‌ ನಾಗರಾಜ್‌ ಅವರಲ್ಲಿ 2001 ನೇ ಸಾಲಿನ ನವಂಬರ್‌ ಕೂಡ ಕನ್ನಡ ಪರ ಕಾಳಜಿಯನ್ನು ಉಕ್ಕಿಸಿದೆ. ಅವರು, ನವಂಬರ್‌ 1 ರಿಂದ ರಾಜ್ಯಕ್ಕೆ ಪರಭಾಷಿಗರ ವಲಸೆಯನ್ನು ತಡೆಗಟ್ಟುವ ಹೋರಾಟ ನಡೆಸಲಿದ್ದಾರೆ.

ಕನ್ನಡ ಚಳವಳಿ ಪಕ್ಷ ದ ಮೂಲಕ ಚಳವಳಿ ನಡೆಸಲಾಗುವುದು ಎಂದು ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ವಾಟಾಳ್‌ ಹೇಳಿದರು. ಚಳವಳಿಯ ಮೊದಲ ಅಂಗವಾಗಿ- ಕನ್ನವಡಲ್ಲದ ನಾಮಫಲಕಗಳಿಗೆ ವಾಟಾಳ್‌ ಟಾರ್‌ ಬಳಿಯುತ್ತಾರೆ ಹಾಗೂ ನಾಮಫಲಕಗಳನ್ನು ಕಿತ್ತು ಎಸೆಯಲಿದ್ದಾರೆ.

ಕರ್ನಾಟಕದಲ್ಲಿ ಕನ್ನಡಿಗರು ಅಲ್ಪಸಂಖ್ಯಾತರಾಗುತ್ತಿರುವ ಬಗೆಗೆ ವಾಟಾಳ್‌ ತೀವ್ರ ಆತಂಕ ವ್ಯಕ್ತಪಡಿಸಿದರು. ಅವರ ಆತಂಕವನ್ನು ಅವರ ಮಾತುಗಳಲ್ಲೇ ಹೇಳುವುದಾದರೆ-

  • ಆಡಳಿತ ಭಾಷೆಯಾಗಿ ಕನ್ನಡ ನೆಪಮಾತ್ರ. ಸರ್ಕಾರಿ ಸಮಾರಂಭಗಳು ಇಂಗ್ಲೀಷಿನಲ್ಲಿಯೇ ನಡೆಯುತ್ತವೆ. ಸರೋಜಿನಿ ಮಹಿಷಿ ವರದಿಯನ್ನು ಸರ್ಕಾರ ಮೂಲೆಗುಂಪು ಮಾಡಿದೆ.
  • ಪರಭಾಷಿಗರ ವಲಸೆ ತಡೆಗಟ್ಟುವಲ್ಲಿ ಏಕೀಕರಣ ನಂತರ ಅಧಿಕಾರಕ್ಕೆ ಬಂದ ಎಲ್ಲ ಸರ್ಕಾರಗಳೂ ವಿಫಲವಾಗಿವೆ.
  • ಇನ್ನೈದು ವರ್ಷಗಳಲ್ಲಿ ಕರ್ನಾಟಕದಲ್ಲಿ ಕನ್ನಡಿಗರೇ ಅಲ್ಪಸಂಖ್ಯಾತರಾದರೆ ಆಶ್ಚರ್ಯವಿಲ್ಲ . ಕನಿಷ್ಠ 1 ಕೋಟಿಗೂ ಹೆಚ್ಚು ಪರಭಾಷಿಗರು ಕರ್ನಾಟಕದಲ್ಲಿದ್ದಾರೆ.
  • ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪ್ರತಿಶತ 70 ರಷ್ಟು ಪರಭಾಷಿಕರು ಆಯ್ಕೆಯಾಗುವ ಸಾಧ್ಯತೆಯಿದೆ. ಇದನ್ನು ತಡೆಗಟ್ಟಬೇಕು. ತಡೆಗಟ್ಟಲೆಂದೇ ಕನ್ನಡ ಚಳವಳಿ ಪಕ್ಷ 6 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.
(ಇನ್ಫೋ ವಾರ್ತೆ)

ವಾಟಾಳ್‌ ಅವರ ಕನ್ನಡ ಕಾಳಜಿಯ ಬಗ್ಗೆ ನೀವೇನಂತೀರಿ?

ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X