Get Updates
Get notified of breaking news, exclusive insights, and must-see stories!

ಮುಷರ್ರಫ್‌ ಪದಚ್ಯುತಿ ಸಂಭವ: ಸೌದಿ ರಾಜಕುಮಾರನ ಆತಂಕ

ರಂಜಾನ್‌ ಪವಿತ್ರ ಮಾಸಾಚರಣೆ ಸಂದರ್ಭದಲ್ಲೂ ಆಪ್ಘಾನಿಸ್ತಾನದ ಮೇಲೆ ಬಾಂಬ್‌ ದಾಳಿ ಮುಂದುವರಿದಲ್ಲಿ ಪಾಕಿಸ್ತಾನದ ಅಧ್ಯಕ್ಷ ಜನರಲ್‌ ಪರ್ವೇಜ್‌ ಅವರು ಪದಚ್ಯುತರಾಗುವ ಸಾಧ್ಯತೆಗಳಿವೆ ಎಂದು ಸೌದಿ ರಾಜಕುಮಾರ ಟರ್ಕಿ ಅಸ್‌-ಸುದೈರಿ ಆತಂಕ ವ್ಯಕ್ತಪಡಿಸಿದ್ದಾರೆ.

ರಂಜಾನ್‌ ತಿಂಗಳು ಬಹಳ ಮುಖ್ಯವಾದುದು. ಈ ಸಂದರ್ಭದಲ್ಲಿ ಜನರಲ್ಲಿನ ಭಾವೋದ್ರೇಕವೂ ಹೆಚ್ಚು . ಆ ಕಾರಣದಿಂದಾಗಿ ಇಸ್ಲಾಮಿಕ್‌ ಸಂಘಟನೆಗಳಿಗೆ ಹೆಚ್ಚಿನ ಬೆಂಬಲ ದೊರೆಯಲಿದ್ದು , ಕೆಲವು ಸರ್ಕಾರಗಳು ತಲೆಕೆಳಗಾಗುವ ಸಾಧ್ಯತೆಯಿದೆ ಎಂದು ರಾಜಕುಮಾರ ಟರ್ಕಿ ಹೇಳಿದ್ದಾರೆ.

ಪಾಕಿಸ್ತಾನ ಮಾತ್ರವಲ್ಲದೆ ಇಂಡೋನೇಷ್ಯಾದಲ್ಲೂ ಆಂತರಿಕ ಬದಲಾವಣೆಗಳು ಸಂಭವಿಸಬಹುದು. ಪಾಕಿಸ್ತಾನದಲ್ಲಿನ ಸಂಭವನೀಯ ನಾಗರಿಕ ಸಮರದ ಬಗೆಗೆ ನಾವು ಆತಂಕ ಹೊಂದಿದ್ದೇವೆ. ಈ ಬೆಳವಣಿಗೆಗಳು ಅತ್ಯಂತ ನಾಟಕೀಯವಾಗಿರುತ್ತವೆ ಎಂದು ಟರ್ಕಿ ತಿಳಿಸಿದ್ದಾರೆ.

(ಏಜೆನ್ಸೀಸ್‌)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+