Get Updates
Get notified of breaking news, exclusive insights, and must-see stories!

ವಾಜಪೇಯಿ ಅವರಲ್ಲಿ ಭಿಕ್ಷೆ ಬೇಡಲು ನಾನು ಸಿದ್ಧನಿಲ್ಲ- ಮುಷರ್ರಫ್‌

ಇಸ್ಲಮಾಬಾದ್‌ : 54 ವರ್ಷಗಳಿಂದ ಇತ್ಯರ್ಥವಾಗದೆ ಉಳಿದಿರುವ ಕಾಶ್ಮೀರ ವಿಷಯ ಕುರಿತು ಚರ್ಚಿಸಲು ಭಾರತದ ಪ್ರಧಾನಿ ವಾಜಪೇಯಿ ಅವರನ್ನು ಭೇಟಿಯಾಗಲು ನಾನು ಆಸಕ್ತಿ ಹೊಂದಿದ್ದೇನೆ. ಆದರೆ, ಅದಕ್ಕಾಗಿ ಭಿಕ್ಷೆ ಬೇಡಲಾರೆ ಎಂದು ಪಾಕಿಸ್ತಾನದ ಅಧ್ಯಕ್ಷ ಪರ್ವೇಜ್‌ ಮುಷರ್ರಫ್‌ ಹೇಳಿದ್ದಾರೆ.

ನ್ಯೂಯಾರ್ಕ್‌ನಲ್ಲಿ ತಮ್ಮನ್ನು ಭೇಟಿಯಾಗುವಂತೆ ಕಳುಹಿಸಿದ ಆಹ್ವಾನವನ್ನು ವಾಜಪೇಯಿ ನಿರಾಕರಿಸಿದ ಕುರಿತು ರಾಯ್ಟರ್ಸ್‌ ಟೆಲಿವಿಷನ್‌ಗೆ ನೀಡಿರುವ ಸಂದರ್ಶನದಲ್ಲಿ ಮುಷರ್ರಫ್‌ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ತಮ್ಮನ್ನು ನ್ಯೂಯಾರ್ಕ್‌ನಲ್ಲಿ ಭೇಟಿಯಾಗಲು ವಾಜಪೇಯಿ ನಿರಾಕರಿಸಿರುವುದರಿಂದ ತಾವು ನಿರಾಶರಾಗಿಲ್ಲ . ವಾಜಪೇಯಿ ಅವರ ಭೇಟಿಯ ಬಗೆಗೆ ನಾನು ಆಶಾವಾದಿಯಾಗಿದ್ದೇನೆ . ಆದರೆ, ನನ್ನನ್ನು ಭೇಟಿಯಾಗುವಂತೆ ಅವರ ಬಳಿ ಭಿಕ್ಷೆ ಬೇಡಲು ನಾನು ಸಿದ್ಧನಿಲ್ಲ . ವಾಜಪೇಯಿ ನನ್ನನ್ನು ಭೇಟಿ ಮಾಡಲು ಇಷ್ಟಪಡದಿದ್ದಲ್ಲಿ, ನಾನು ಅವರನ್ನು ಭೇಟಿ ಮಾಡಲು ಆಸಕ್ತನಾಗಿರುವ ಕೊನೆಯ ವ್ಯಕ್ತಿ ಎಂದು ಮುಷರ್ರಫ್‌ ಮಾರ್ಮಿಕವಾಗಿ ಉತ್ತರಿಸಿದ್ದಾರೆ.

ನವಂಬರ್‌ ತಿಂಗಳಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಅಧಿವೇಶನ ನ್ಯೂಯಾರ್ಕ್‌ನಲ್ಲಿ ನಡೆಯುತ್ತಿದ್ದು, ಈ ಅಧಿವೇಶನದಲ್ಲಿ ಮುಷರ್ರಫ್‌ ಹಾಗೂ ವಾಜಪೇಯಿ ಇಬ್ಬರೂ ಭಾಗವಹಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ತಮ್ಮನ್ನು ಭೇಟಿಯಾಗುವಂತೆ ವಾಜಪೇಯಿ ಅವರಿಗೆ ಮುಷರ್ರಫ್‌ ಆಹ್ವಾನ ಕಳಿಸಿದ್ದುದನ್ನೂ, ವಾಜಪೇಯಿ ಆ ಆಹ್ವಾನವನ್ನು ತಿರಸ್ಕರಿಸಿದ್ದನ್ನೂ ಇಲ್ಲಿ ಸ್ಮರಿಸಬಹುದು.

(ಏಜೆನ್ಸೀಸ್‌)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+