ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೊಬೈಲ್‌ ಪೋನ್‌ ಜಾಲಕ್ಕೆ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆ

By Staff
|
Google Oneindia Kannada News

ಉಡುಪಿ: ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಿಗೆ 2002 ನೇ ಇಸವಿಯ ಫೆಬ್ರವರಿಯಾಳಗೆ ಮೊಬೈಲ್‌ ಪೋನ್‌ ಸೇವಾ ಸೌಲಭ್ಯ ಕಲ್ಪಿಸಲಾಗುವುದು ಎಂದು ದಕ್ಷಿಣಕನ್ನಡ ಟೆಲಿಕಾಂ, ಮಂಗಳೂರು ಜನರಲ್‌ ಮೇನೇಜರ್‌ ಕೆ.ಜೆ.ಚಾಕೊ ಹೇಳಿದ್ದಾರೆ.

ಉಡುಪಿಗೆ 18 ಕಿಮೀ ದೂರದ ಹಿರಿಯಡ್ಕದಲ್ಲಿ 3.5 ಕೋಟಿ ರುಪಾಯಿ ವೆಚ್ಚದಲ್ಲಿ ರೂಪಿಸಲಾಗಿರುವ ನೂತನ 1000-lines C-DoT RSU ಎಕ್ಸ್‌ಚೇಂಜ್‌ ಉದ್ಘಾಟಿಸಿ ಮಂಗಳವಾರ ಅವರು ಮಾತನಾಡುತ್ತಿದ್ದರು. 2002 ನೇ ಇಸವಿಯ ಮಾರ್ಚ್‌ ಒಳಗೆ ನೀಡಲು ಉದ್ದೇಶಿಸಿರುವ 2.30 ಲಕ್ಷ ದೂರವಾಣಿ ಸಂಪರ್ಕಗಳ ಜೊತೆಗೆ, ಹೆಚ್ಚುವರಿಯಾಗಿ 70 ಸಾವಿರ ಸಂಪರ್ಕಗಳನ್ನು ಕಲ್ಪಿಸಲು ಇಲಾಖೆ ಉದ್ದೇಶಿಸಿದೆ ಎಂದು ಅವರು ಹೇಳಿದರು.

ಪ್ರಸಕ್ತ ವಿತ್ತ ವರ್ಷದಲ್ಲಿ ಇಲಾಖೆ 50 ಸಾವಿರ ಸಂಪರ್ಕಗಳನ್ನು ಕಲ್ಪಿಸಿದ್ದು , ಇತರ 40 ಸಾವಿರ ಗ್ರಾಹಕರು ಸಂಪರ್ಕ ನಿರೀಕ್ಷಣಾ ಪಟ್ಟಿಯಲ್ಲಿದ್ದಾರೆ. ಟೆಲಿಕಾಂ ಜಿಲ್ಲೆಯಲ್ಲಿನ 224 ಎಕ್ಸ್‌ಚೇಂಜ್‌ಗಳಲ್ಲಿ , 202 ಎಕ್ಸ್‌ಚೇಂಜ್‌ಗಳು ಆಪ್ಟಿಕ್‌ ಫೈಬರ್‌ ಕೇಬಲ್‌( ಓಎಫ್‌ಸಿ) ಸಂಪರ್ಕ ಹೊಂದಿವೆ. ಪ್ರಸಕ್ತ ವಿತ್ತ ವರ್ಷದಲ್ಲೇ ಉಳಿದ ಎಕ್ಸ್‌ಚೇಂಜ್‌ಗಳನ್ನು ಕೂಡ ಓಎಫ್‌ಸಿ ಸಂಪರ್ಕಜಾಲಕ್ಕೆ ಅಳವಡಿಸಲಾಗುವುದು ಎಂದು ಚಾಕೊ ಹೇಳಿದರು.

(ಪಿಟಿಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X