ಬರೀ ನಗರಿಯಲ್ಲ ಬೆಂಗಳೂರು, ಕೋಲಾದಂತೆ ಬ್ರಾಂಡ್ ನೇಮು-ಕೃಷ್ಣ
ಬೆಂಗಳೂರು : ನಮ್ಮೂರು, ಬೆಂಗಳೂರು ಬರೀ ನಗರಿಯಲ್ಲ. ಸೋನಿ, ಮರ್ಸಿಡಿಸ್ ಬೆಂಜ್, ಮಾರುತಿಯಂತೆ, ಕೋಲಾ- ಪೆಪ್ಸಿಯಂತೆ ಈಗ ಬ್ರಾಂಡ್ ನೇಮ್. ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಜೋಷ್‌ಭರಿತರಾಗಿದ್ದರು. ಸಂದರ್ಭ : ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ 17ನೇ ಪುಣ್ಯ ತಿಥಿ ದಿನಾಚರಣೆ (ಬುಧವಾರ) ಹಾಗೂ ಪಕ್ಷದ 100 ಅಭ್ಯರ್ಥಿಗಳ ಸಮ್ಮುಖದಲ್ಲಿ ಮಹಾನಗರ ಪಾಲಿಕೆ ಚುನಾವಣೆ ಪ್ರಚಾರಕ್ಕೆ ಚಾಲನೆ.
1999ರ ಅಕ್ಟೋಬರ್‌ವರೆಗೆ ಕರ್ನಾಟಕದತ್ತ ಯಾರೂ ತಿರುಗಿ ನೋಡುತ್ತಿರಲಿಲ್ಲ. ನಮ್ಮ ಸರ್ಕಾರ ಬಂತು ನೋಡಿ, ಬೆಂಗಳೂರಿಗೆ ಹೊಸ ಚರಿಷ್ಮಾ ಬಂತು. ಹಿಂದಿನ ಸನ್ನಿವೇಶ ಬದಲಾಯಿಸಿದ್ದೇ ಇದಕ್ಕೆ ಕಾರಣ. ಏಷ್ಯಾದ ಆರ್ಥಿಕ ದೈತ್ಯ ರಾಷ್ಟ್ರ ಜಪಾನಿನ ಪ್ರಧಾನಿ ಬೆಂಗಳೂರಿಗೆ ಬರುತ್ತಾರೆ. ಇದಕ್ಕೆ ಏನು ಕಾರಣ? ಜರ್ಮನಿಯ ಚಾನ್ಸಲರ್ ಬಂದದ್ದು ಎಸ್.ಎಂ.ಕೃಷ್ಣನ ಮುಖ ನೋಡಿಕೊಂಡೆ? ಬೆಂಗಳೂರು ಬ್ರಾಂಡ್ ನೇಮ್ ಆಗಿರುವುದೇ ಇದಕ್ಕೆ ಕಾರಣ. ಈ ಗುರುತರ ಬದಲಾವಣೆಗೆ ನಿಜವಾದ ಕಾರಣಗಳೇನು ಎಂಬುದನ್ನು ಜನತೆಗೆ ತಿಳಿಸಬೇಕು. ಮಹಾನಗರ ಪಾಲಿಕೆಯಲ್ಲೂ ನಮ್ಮ ಪಕ್ಷಕ್ಕೇ ಅಧಿಕಾರದ ಚುಕ್ಕಾಣಿ ಕೊಟ್ಟರೆ ಇನ್ನಷ್ಟು ಸಾಧನೆ ಸಾಧ್ಯ ಎಂದು ಅಕ್ಷರಶಃ ರಾಜಕಾರಣಿಯಾಗಿ ಕೇಳಿಕೊಂಡರು ಕೃಷ್ಣ.
ಬೆಂಗಳೂರು, ಅಭಿವೃದ್ಧಿ ಹಾಗೂ ಕಾರ್ಯಪಡೆ : ಸರ್ಕಾರ ಹಾಗೂ ಬೆಂಗಳೂರು ಮಹಾನಗರ ಪಾಲಿಕೆ ನಡುವಣ ಒಪ್ಪಂದದಿಂದ ಮುಂದಿನ ಮೂರ್ನಾಲ್ಕು ವರ್ಷದ ಅವಧಿಯಲ್ಲಿ ಬೆಂಗಳೂರಿಗೆ 1 ಕೋಟಿ ರುಪಾಯಿ ವೆಚ್ಚದಲ್ಲಿ ಮೂಲಭೂತ ಸೌಕರ್ಯ ಹೆಚ್ಚಿಸಲಾಗುವುದು. ನವೆಂಬರ್ 28ರಂದು ಮೈಸೂರಲ್ಲಿ ನಗರಾಭಿವೃದ್ಧಿಯ ನಿಟ್ಟಿನಲ್ಲಿ ಕಾರ್ಯಪಡೆ ಸಭೆ ನಡೆಸುತ್ತೇವೆ. ಸಣ್ಣಪುಟ್ಟ ನಗರಗಳಲ್ಲೂ ಖಾಸಗಿಯವರ ಹಾಗೂ ಸಾರ್ವಜನಿಕರ ನೆರವಿನಿಂದ ಕಾರ್ಯಪಡೆಗಳನ್ನು ರಚಿಸಲಾಗುವುದು ಎಂದರು.
ಇಂದಿರಾ ಗಾಂಧಿಯವರನ್ನು ಬಾಯಿತುಂಬಾ ಹೊಗಳಿದ ಕೃಷ್ಣ, ಅವರ ನಿಧನದಿಂದ ನಾಯಕತ್ವ ಶೂನ್ಯತೆ ಉಂಟಾಯಿತು ಎಂದು ಹೇಳಿದರು. ಬೆಂಗಳೂರು ನಗರ ಎಲ್ಲರ ಗಮನ ಸೆಳೆಯಲು ಕಾರಣವೇನು ಎಂಬುದನ್ನು ಬಿಜೆಪಿಯವರನ್ನೇ ಕೇಳೋಣ ಎಂದು ಕಟಕಿಯಾಡಿದರು. ಗೃಹ ಸಚಿವ ಮಲ್ಲಿಕಾರ್ಜು ಖರ್ಗೆ, ಕೆಪಿಸಿಸಿ(ಐ) ಅಧ್ಯಕ್ಷ ಅಲ್ಲಂ ವೀರಭದ್ರಪ್ಪ, ಸಚಿವರುಗಳಾದ ಎಚ್.ವಿಶ್ವನಾಥ್, ಡಿ.ಕೆ.ಶಿವಕುಮಾರ್ ಮೊದಲಾದವರು ಕೃಷ್ಣ ಅವರೊಟ್ಟಿಗಿದ್ದರು.
(ಇನ್ಫೋ ವಾರ್ತೆ)
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications