ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈಸೂರಿನಲ್ಲಿ ಆ್ಯಂಥ್ರಾಕ್ಸ್‌ ರೋಗಾಣು ತಪಾಸಣಾ ಘಟಕ ಸ್ಥಾಪನೆ

By Staff
|
Google Oneindia Kannada News

ಮೈಸೂರು : ಜಾಗತಿಕ ಪಿಡುಗಾಗಿ ಕಾಡುತ್ತಿರುವ ಆ್ಯಂಥ್ರಾಕ್ಸ್‌ ಮಾರಿಯ ಜಾಡುಗಳು ರಾಜ್ಯದಲ್ಲೂ ಕಾಣಿಸುತ್ತಿರುವ ಹಿನ್ನೆಲೆಯಲ್ಲಿ , ನಗರ ಪೊಲೀಸ್‌ ಹಾಗೂ ವೈದ್ಯಕೀಯ ಕಾಲೇಜು ಆ್ಯಂಥ್ರಾಕ್ಸ್‌ ತಪಾಸಣಾ ಘಟಕವನ್ನು ಸಂಯುಕ್ತವಾಗಿ ರಚಿಸಿವೆ.

ನಗರದ ವೈದ್ಯಕೀಯ ಕಾಲೇಜಿನಲ್ಲಿ ಆ್ಯಂಥ್ರಾಕ್ಸ್‌ ಪರೀಕ್ಷಾ ಘಟಕವನ್ನು ಸ್ಥಾಪಿಸಲಾಗಿದ್ದು , ಇಲ್ಲಿನ ರೋಗಾಣು ವಿಶ್ಲೇಷಣಾ ಘಟಕದಲ್ಲಿ ಆ್ಯಂಥ್ರಾಕ್ಸ್‌ ಬಗೆಗಿನ ದೂರುಗಳನ್ನು ಪರಿಶೀಲಿಸಲಾಗುವುದು. ಪೊಲೀಸ್‌ ಇಲಾಖೆ ಅಥವಾ ಡಾ.ಚಿದಾನಂದ್‌ ಅವರನ್ನು ಸಂಪರ್ಕಿಸಬಹುದು.

ಇತ್ತೀಚೆಗಷ್ಟೇ ನಗರದ ನಿವಾಸಿ ನಿವೃತ್ತ ಸೈನ್ಯಾಧಿಕಾರಿ ದರ್ಶನ್‌ಸಿಂಗ್‌ ಅವರ ವಿಳಾಸಕ್ಕೆ ಬಂದ, ಒಳಪುಟದಲ್ಲಿ ಬಿಳಿಪುಡಿ ಹೊಂದಿದ್ದ ಇಂಗ್ಲೀಷ್‌ ಪತ್ರಿಕೆ ನಗರದಲ್ಲಿ ಆ್ಯಂಥ್ರಾಕ್ಸ್‌ ಶಂಕೆಯನ್ನು ಉಂಟು ಮಾಡಿತ್ತು .

(ಇನ್ಫೋ ವಾರ್ತೆ)

ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X