Get Updates
Get notified of breaking news, exclusive insights, and must-see stories!

ಬುದ್ಧನ ಜನ್ಮಸ್ಥಳದಲ್ಲಿ ವಿಶ್ವದ ಅತಿ ಎತ್ತರದ ಶಾಂತಿ ಪಗೋಡಾ

ಕಠ್ಮಂಡು: ಪಶ್ಚಿಮ ನೇಪಾಳದಲ್ಲಿರುವ ಬುದ್ಧನ ಜನ್ಮಸ್ಥಳದಲ್ಲಿ ವಿಶ್ವದ ಅತಿ ಎತ್ತರದ ಶಾಂತಿ ಪಗೋಡದ ನಿರ್ಮಾಣ ಪೂರ್ಣಗೊಂಡಿದೆ. 41.5 ಮೀಟರ್‌ ಎತ್ತರದ ಲುಂಬಿನಿ ಪೀಸ್‌ ಪಗೋಡಾ ಈಗ- ಬುದ್ಧ ಭಕ್ತರನ್ನೂ, ಕುತೂಹಲಿಗಳನ್ನೂ ಸೆಳೆಯುತ್ತಿದೆ.

ರಾಜಸ್ಥಾನದಿಂದ ವಿಶೇಷವಾಗಿ ತರಿಸಲಾದ ಅಮೃತಶಿಲೆಯಲ್ಲಿ ರೂಪಿಸಲಾದ ಶಾಂತಿ ಪಗೋಡಾ 59 ಮೀಟರ್‌ ವ್ಯಾಸ ಹೊಂದಿದ್ದು, ಅದರ ತಯಾರಿಕೆಗೆ 900 ಮೆಟ್ರಿಕ್‌ ಟನ್‌ ಸಿಮೆಂಟ್‌ ಹಾಗೂ 411 ಮೆಟ್ರಿಕ್‌ ಟನ್‌ ಸ್ಟೀಲ್‌ ಬಳಕೆಯಾಗಿದೆ. ಜಪಾನ್‌ನ ನಿಪ್ಪೊಂಝನ್‌ ಮಯ್‌ಹೋದಿ ಬೌದ್ಧರ ಸಂಘಟನೆ ತಯಾರಿಸಿರುವ 73 ಶಾಂತಿ ಪಗೋಡಾಗಳಲ್ಲಿ ಒಂದಾಗಿರುವ, ಲುಂಬಿನಿ ಪೀಸ್‌ ಪಗೋಡಾ ನಿರ್ಮಾಣಕ್ಕೆ 7 ವರ್ಷಗಳು ಹಿಡಿದಿವೆ.

ಪಗೋಡಾದ ನಾಲ್ಕೂ ದಿಕ್ಕುಗಳಲ್ಲಿ ಬುದ್ಧನ ಬಂಗಾರ ಲೇಪಿತ ಕಂಚಿನ ಪ್ರತಿಮೆಗಳಿವೆ. ಜನನ, ಜ್ಞಾನೋದಯ, ಮೊದಲ ಬೋಧನೆ ಹಾಗೂ ನಿರ್ವಾಣ ಹಂತಗಳನ್ನು ಈ ನಾಲ್ಕೂ ಪ್ರತಿಗೆಳು ಸೂಚಿಸುತ್ತಿವೆ.

ನವಂಬರ್‌ 3 ರಂದು ನಡೆಯುವ ವಿಶೇಷ ಕಾರ್ಯಕ್ರಮದಲ್ಲಿ ನೇಪಾಳದ ಮಾಜಿ ಪ್ರಧಾನಿ ಗಿರಿಜಾ ಪ್ರಸಾದ್‌ ಕೊಯಿರಾಲ ಪಗೋಡಾವನ್ನು ಉದ್ಘಾಟಿಸುವರು, ಭಾರತ, ಜಪಾನ್‌, ಥೈಲ್ಯಾಂಡ್‌, ಅಮೇರಿಕಾ ಸೇರಿದಂತೆ ವಿಶ್ವದ ವಿವಿಧ ಭಾಗಗಳ ಬೌದ್ಧ ಧರ್ಮೀಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಈ ನಡುವೆ, ಅಕ್ಟೋಬರ್‌ 8 ರಂದು ಕಠ್ಮಂಡುವಿಗೆ 6 ಕಿಮೀ ದೂರದ ಪಟನಾದಿಂದ ಪ್ರಾರಂಭವಾದ ವಿಶ್ವ ಶಾಂತಿ ಜಾಥಾ, 440 ಕಿಮೀ ಕ್ರಮಿಸಿದ ನಂತರ ನವಂಬರ್‌ 1 ರಂದು ಲುಂಬಿನಿಗೆ ತಲುಪಲಿದೆ.

(ಪಿಟಿಐ)

ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+