ಹುಬ್ಬಳ್ಳಿ ಕಾಲೇಜಿನಲ್ಲಿ ನಿಮಿಷಕ್ಕೆಂಟು ಗರಂ ಗರಂ ರೊಟ್ಟಿ ರೆಡಿ !
ಹುಬ್ಬಳ್ಳಿ : ರೊಟ್ಟಿ ಮಾಡುವುದಕ್ಕೆ ಹೆಚ್ಚು ಟಾೖಂ ಬೇಕಾಗುತ್ತೆ ಅಂತ ಇನ್ನು ಮೇಲೆ ಬೇಜಾರು ಮಾಡಿಕೊಳ್ಳಬೇಕಾಗಿಲ್ಲ. ಹುಬ್ಬಳ್ಳಿಯ ಬಿವಿಬಿ ತಾಂತ್ರಿಕ ಮತ್ತು ಇಂಜಿನಿಯರಿಂಗ್ ಕಾಲೇಜಿನ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳು ರೊಟ್ಟಿ ಮಾಡುವ ಯಂತ್ರವೊಂದನ್ನು ಕಂಡು ಹಿಡಿದಿದ್ದಾರೆ.
‘ಮೆಕೆನೈಸ್ಡ್ ಫುಡ್ ಪ್ರೊಸೆಸಿಂಗ್ ಮೆಷಿನ್’ ತಯಾರಿಸಲು ಈ ಸೃಜನಶೀಲ ವಿದ್ಯಾರ್ಥಿತಂಡಕ್ಕೆ ತಗುಲಿದ ಖರ್ಚು 18 ಸಾವಿರ ರೂಪಾಯಿ. ಈ ಯಂತ್ರ ರೊಟ್ಟಿ, ಹೋಳಿಗೆ, ಪುಳ್ಕ, ಚಪಾತಿಗಳನ್ನು ರೆಡಿ ಮಾಡ ಬಲ್ಲದು. ವಿದ್ಯಾರ್ಥಿ ತಂಡದ ಹೇಳುವುದು ನಿಮಿಷಕ್ಕ ಎಂಟು ರೊಟ್ಟಿ ರೆಡಿಯಾಗುತ್ತದೆ ಅಂತ. ಅಂಗೈಯಷ್ಟಗಲದ್ದೇನಲ್ಲ. 10 ಸೆಂಟಿ ಮೀಟರ್ ವ್ಯಾಸದ ಎಂಟು ರೊಟ್ಟಿಗಳು ಫಟಾಫಟ್ ತಯಾರು. ಗುಣಮಟ್ಟವೂ ಚೆನ್ನಾಗಿರುತ್ತದಂತೆ.
ವಿಧಾನದ ಬಗ್ಗೆ ವಿದ್ಯಾರ್ಥಿಗಳೇ ಹೇಳುತ್ತಾರೆ- ಚಪಾತಿ ಅಥವಾ ರೊಟ್ಟಿಯ ಹಿಟ್ಟು ರೆಡಿಮಾಡಿಟ್ಟುಕೊಳ್ಳಿ. ಯಂತ್ರವು ಎಂಟು ರೊಟ್ಟಿಯುಂಡೆಗಳನ್ನು ತಟ್ಟಿ ಕಾಯಿಸಿ ಕೊಡುತ್ತದೆ. ಆದರೆ, ಹಿಟ್ಟಿನ ಉಂಡೆಗಳು ಚಕಚಕನೇ ಯಂತ್ರಕ್ಕೆ ಕೊಡುವ ಕೌಶಲವೂ ಬೇಕು. ಒತ್ತುವ ಯಂತ್ರಕ್ಕೆ ಹೊಂದಿಕೊಂಡೇ ಹೀಟರ್ ಇರುವುದರಿಂದ ಗರಿ ಮುರಿ ರೊಟ್ಟಿ ನಿಮ್ಮ ಕೈಯಲ್ಲಿ.
ಬಿವಿಬಿ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿಗಳಾದ ಪ್ರಶಾಂತ್ ಮುಳಗುಂದ ಮಠ್, ಮಹೇಶ್ ಗುಡಾಲ್, ಬಾಲಚಂದ್ರ ಪಾಠಕ್, ಅನೂಪ್ ಒಟಗೇರಿ, ಆನಂದ್ ಸುಗಂಧಿ, ಗಿರಿಶ್ ಕುಲಕರ್ಣಿ, ಮೊಹಮ್ಮದಾಲಿ ನೂರ್ ಖಾನ್, ಮತ್ತು ಮಹಮ್ಮದ್ ಓಲಿ ಯಂತ್ರ ತಯಾರಿಕಾ ತಂಡದ ಸದಸ್ಯರು.
(ಇನ್ಫೋ ವಾರ್ತೆ)
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications