ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

600 ಕೋಟಿ ರು. ವೆಚ್ಚದ ಆರ್‌ ಅಂಡ್‌ ಡಿ ಕೇಂದ್ರ ಸ್ಥಾಪನೆಗೆ ಸಿಸ್ಕೋ ಮುಂದು

By Staff
|
Google Oneindia Kannada News

ಬೆಂಗಳೂರು : ಅಮೆರಿಕಾದ ಸಾಫ್ಟ್‌ವೇರ್‌ ದಿಗ್ಗಜ ಸಿಸ್ಕೋ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರ ಸ್ಥಾಪಿಸಲು ನಗರದ ಹಳೆ ಮದ್ರಾಸು ರಸ್ತೆಯಲ್ಲಿ 29 ಎಕರೆ ಜಾಗೆ ಖರೀದಿಸಿದೆ.

ಈ ಬೃಹತ್‌ ಅಧ್ಯಯನ ಮತ್ತು ಅಭಿವೃದ್ಧಿ ಪ್ರಯೋಗಾಲಯ ಹಾಗೂ ತಂತ್ರಾಂಶ ಸೌಲಭ್ಯ ಯೋಜನೆಗೆ ಸುಮಾರು 600 ಕೋಟಿ ರೂಪಾಯಿ ವೆಚ್ಚವಾಗಲಿದೆ. ಅಲ್ಲದೆ, ಮೊದಲ ಮೂರು ವರ್ಷಗಳಲ್ಲಿ ಸುಮಾರು ಐದು ಸಾವಿರ ಮಂದಿಗೆ ಉದ್ಯೋಗ ಕೊಡಲಿದೆ ಎಂದು ರಾಜ್ಯ ಐಟಿ ಕಾರ್ಯದರ್ಶಿ ವಿವೇಕ ಕುಲಕರ್ಣಿ ಹೇಳಿದ್ದಾರೆ.

ಇದು ಭಾರತದಲ್ಲಿ ಸಿಸ್ಕೋ ಸ್ಥಾಪಿಸುತ್ತಿರುವ ಪ್ರಥಮ ಸಂಶೋಧನಾ ಕೇಂದ್ರವಾಗಲಿದೆ. ಇಂಟೆಲ್‌ ಮಾತ್ರವಲ್ಲದೆ, ಸಿಸ್ಕೋ ಮತ್ತು ಐಬಿಎಂ ನಗರದಲ್ಲಿ ಈಗಾಗಲೇ ಒಂದರೆಡು ಪ್ರಯೋಗಾಲಯಗಳನ್ನು ಸ್ಥಾಪಿಸಿದೆ. ಅಮೆರಿಕಾದ ಇನ್ನೂ ಕೆಲವು ಕಂಪೆನಿಗಳು ನಗರದಲ್ಲಿ ಪ್ರಯೋಗಾಲಯಗಳನ್ನು ಸ್ಥಾಪಿಸುವ ಕುರಿತು ಮಾತುಕತೆ ನಡೆಸಲು ಮುಂದಾಗಿವೆ. ಈ ವರ್ಷದ ಐಟಿ.ಕಾಮ್‌ ಮೇಳದಲ್ಲಿ ಈ ಮಾತುಕತೆಗಳು ಫಲಪ್ರದವಾಗುವ ನಿರೀಕ್ಷೆ ಇದೆ ಎಂದು ಕುಲಕರ್ಣಿ ಹೇಳಿದರು.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X