ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಮಾನ ಅಪಹಣದ ಬೆದರಿಕೆ ಇಟ್ಟ ಈ ಕಾದಂಬರಿಕಾರ ಈಗ ಜೈಲಿನಲ್ಲಿ

By Staff
|
Google Oneindia Kannada News

ಮಂಗಳೂರು : ಬಜ್ಪೆ ವಿಮಾನ ನಿಲ್ದಾಣದಲ್ಲಿ ವಿಮಾನ ಅಪಹರಣ ನಡೆಸುವುದಾಗಿ ಹುಸಿ ಬೆದರಿಕೆ ಪತ್ರ ಬರೆದ ಆರೋಪಿಯನ್ನು ದಕ್ಷಿಣ ಕನ್ನಡ ಮತ್ತು ಉಡುಪಿ ಪೊಲೀಸರ ತಂಡ ಬಂಧಿಸಿದೆ.

ಅಕ್ಟೋಬರ್‌ 23ರಂದು ವಿಮಾನ ಅಪಹಣ ಅಪಹರಿಸುವುದಾಗಿ ಬೆದರಿಕೆ ಪತ್ರ ಬರೆದಿದ್ದ ಮೂವತ್ತು ವರ್ಷ ಪ್ರಾಯದ ಸುಬ್ರಮಣಿ ಎಂಬ ಆರೋಪಿ ಪದವೀಧರ ಯುವಕ. ಉಡುಪಿ ಮೂಲದ ಸುಬ್ರಮಣಿ ಬಜ್ಪೆಯಿಂದ ಹೊರಡಲಿರುವ ವಿಮಾನವನ್ನು ವಿಧಾನ ಸೌಧಕ್ಕೆ ಡಿಕ್ಕಿ ಹೊಡೆಯಲು ಯೋಜನೆ ರೂಪಿಸಲಾಗಿದೆ ಎಂದು ನಿಲ್ದಾಣದ ನಿರ್ದೇಶಕರಿಗೆ ರೆಜಿಸ್ಟರ್ಡ್‌ ಪತ್ರ ಬರೆದಿದ್ದ.

ಪ್ರಸ್ತುತ ನಡೆಯುತ್ತಿರುವ ಅಮೆರಿಕಾ ದಾಳಿಗೆ ಭಾರತ ಬೆಂಬಲಿಸುತ್ತಿರುವುದನ್ನು ವಿರೋಧಿಸಿ ಲಷ್ಕರ್‌- ಇ- ತೋಯ್ಬಾ ಮತ್ತು ಜೈಶ್‌- ಇ- ಮೊಹಮ್ಮದ್‌ ಸಂಘಟನೆಯ ಉಗ್ರಗಾಮಿಗಳು ವಿಮಾನ ಹೈಜಾಕ್‌ ಮಾಡಲಿರುವುದಾಗಿ ಪತ್ರದಲ್ಲಿ ವಿವರಿಸಲಾಗಿತ್ತು. ಅನಾಮಿಕ ಪತ್ರದ ಹಿನ್ನೆಲೆಯ ಪತ್ತೆ ಹಚ್ಚಲು ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲೆಯ ಪೊಲೀಸ್‌ ತಂಡ ಶೋಧ ನಡೆಸಿ ಚೇಷ್ಟೆಗಾಗಿ ಪತ್ರ ಬರೆದಿದ್ದ ಉದ್ಯಾವರದ ಯುವಕ ಸುಬ್ರಮಣಿಯನ್ನು ಬಂಧಿಸಿದ್ದಾರೆ.

ರಾಜ್ಯದಲ್ಲಿ ಮೊದಲ ಬಾರಿಗೆ ವಿಮಾನ ಅಪಹರಣದ ಬೆದರಿಕೆ ಬಂದಿತ್ತು. ಬಂದಿತ ಆರೋಪಿಯ ಮನೆಯಲ್ಲಿ ಬಹಳಷ್ಟು ದಿನ ಪತ್ರಿಕೆಗಳು, ಪುಸ್ತಕಗಳ ಜೊತೆಗೆ ಭಯೋತ್ಪಾದನೆ ಸಮಸ್ಯೆಯ ಬಗ್ಗೆ ಆತನೇ ಬರೆದಿರುವ ಕಾದಂಬರಿಯೂ ಪತ್ತೆಯಾಗಿರುವುದಾಗಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸೀಮಂತ್‌ ಕುಮಾರ್‌ ತಿಳಿಸಿದ್ದಾರೆ.

(ಇನ್ಫೋ ವಾರ್ತೆ)

ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X