Get Updates
Get notified of breaking news, exclusive insights, and must-see stories!

ತುಸು ಬಡಕಲು,ಉಳಿದಂತೆ ಸರ್ವಾಂಗ ಸುಂದರ- ಇದು ಕೃಷ್ಣರಾಜಸಾಗರ!

ಅದ್ದೂರಿ ದಸರಾ ಆಚರಿಸಿ ಯಾವ ಕಾಲವಾಯಿತು? ಪ್ರತಿ ವರ್ಷವೂ ಒಂದಲ್ಲಾ ಒಂದರ ಹಾವಳಿ, ಪರಿಣಾಮವಾಗಿ ದಸರಾ ವೈಭವಕ್ಕೆ ಕುಂದು. ಕಳೆದ ಬಾರಿ ರಾಜ್‌ ಅಪಹರಣದಿಂದಾಗಿ ದಸರಾ ಕಳೆಗುಂದಿದರೆ, ಈ ಬಾರಿ ದಸರಾಕ್ಕೆ ಬರದ ಬರೆ. ಇದೇ ಬರದ ಛಾಯೆ ಕನ್ನಂಬಾಡಿಯಲ್ಲೂ ಕಾಣಿಸಿಕೊಂಡಿದೆ.

ಕನ್ನಂಬಾಡಿಯ ಗರಿಷ್ಠ ಜಲ ಸಂಗ್ರಹಣಾ ಸಾಮರ್ಥ್ಯ 124.80 ಅಡಿಗಳು. ಸಾಮಾನ್ಯವಾಗಿ ಪ್ರತಿವರ್ಷವೂ ಕನ್ನಂಬಾಡಿ ತುಂಬುವುದೂ, ಉಕ್ಕಿಹರಿವ ಗಂಗಮ್ಮನಿಗೆ ಮುಖ್ಯಮಂತ್ರಿಗಳು ಬಾಗಿನ ನೀಡುವುದೂ ಸಂಪ್ರದಾಯ. ಆದರೆ ಈ ಬಾರಿ ಕನ್ನಂಬಾಡಿ ತುಂಬಲಿಲ್ಲ , ಮುಖ್ಯಮಂತ್ರಿಗಳು ಸಪತ್ನೀಕರಾಗಿ ಪೂಜೆ ಮಾಡಲಿಲ್ಲ . ಅಂದಹಾಗೆ, ಪ್ರಸ್ತುತ ಜಲಾಶಯದಲ್ಲಿರುವ ನೀರಿನ ಮಟ್ಟ, 119.45 ಅಡಿಗಳು.

ದಸರೆಯೆಂದರೆ ಮೈಸೂರಿಗೆ ಪ್ರವಾಸಿಗಳ ಹಿಂಡು. ದೇಶದ ವಿವಿಧ ಭಾಗಗಳಿಂದ ಮಾತ್ರವಲ್ಲದೆ, ವಿದೇಶಿ ಕುತೂಹಲಿಗಳು ದಸರೆಗೆ ಆಗಮಿಸುವುದುಂಟು. ಮೈಸೂರಿಗೆ ಬಂದವರು ಕನ್ನಂಬಾಡಿಗೆ ಬರದಿರುತ್ತಾರೆಯೇ!? ಬಂದೇ ಬಂದಾರು, ಸುಂದರ ಸಂಜೆಯಾಂದನ್ನು ಕಣ್ಣು ತುಂಬಿಕೊಂಡಾರು. ಅದಕ್ಕೆಂದೇ ಕನ್ನಂಬಾಡಿಗೀಗ ವಿಶೇಷ ದೀಪಾಲಂಕಾರ. ಕನ್ನಂಬಾಡಿ ಮದುಮಗಳಂತೆ ಶೃಂಗರಿಸಿಕೊಂಡು ನಿಂತಿದ್ದಾಳೆ. ತುಸು ಬಡಕಲಾಗಿದ್ದಾಳೆ ಅನ್ನುವುದನ್ನು ಬಿಟ್ಟರೆ ಸರ್ವಾಂಗ ಸುಂದರಿ.

ಕನ್ನಂಬಾಡಿ ಜನಪ್ರಿಯತೆಯನ್ನು ಕಳೆದುಕೊಳ್ಳುತ್ತಿದೆಯೇ?

ಕನ್ನಡ ಚಿತ್ರಗಳನ್ನು ನೋಡುವ ಅಭ್ಯಾಸ ನಿಮಗಿದ್ದರೆ ಒಂದು ವ್ಯತ್ಯಾಸವನ್ನು ಗಮನಿಸಿಯೇ ಇರುತ್ತೀರಿ. ಹಳೆಯ ಚಿತ್ರಗಳ ಪ್ರೇಮಿಗಳೆಲ್ಲ ಬೃಂದಾವನ ಉದ್ಯಾನದಲ್ಲಿ ಡುಯೆಟ್‌ ಹಾಡಿದರೆ, ಈಚಿನ ಚಿತ್ರಗಳ ಪ್ರೇಮಿಗಳು ಸಿಂಗಪುರ, ನ್ಯೂಜಿಲೆಂಡ್‌, ಮಲೇಷಿಯಾಗಳಲ್ಲಿ ಕುಣಿಯುತ್ತಾರೆ. ಇದು ಕೇವಲ ಸಿನಿಮಾಕ್ಕೆ ಮಾತ್ರ ಸೀಮಿತವಲ್ಲ . ಈ ಮುನ್ನ ಪ್ರೇಮದ ವಯಸ್ಸಿನವರೆಲ್ಲ ಬೃಂದಾವನ ವಿಹಾರಿಗಳಾದರೆ, ಇವತ್ತಿನವರು ಬೃಂದಾವನದ ಕನಸನ್ನೂ ಕಾಣುವುದಿಲ್ಲ. ಅಂದರೆ, ಕನ್ನಂಬಾಡಿ ಜನಪ್ರಿಯತೆ ಮಾಸುತ್ತಿದೆಯೇ?

ಕನ್ನಂಬಾಡಿ ಜನಪ್ರಿಯತೆ ಕಳೆದುಕೊಳ್ಳುತ್ತಿದೆಯೋ ಇಲ್ಲವೋ ಅಂಕಿಅಂಶಗಳಲ್ಲಿ ಹೇಳುವುದು ಕಷ್ಟ . ಆದರೆ, ನೋಡುವ ಕಣ್ಣುಗಳಿಂದ ಕನ್ನಂಬಾಡಿ ದೂರವಾಗುತ್ತಿರುವುದಕ್ಕೆ ಹಲವು ಸಮರ್ಥನೆಗಳನ್ನು ನೀಡಬಹುದು. ಈಚಿನ ವರ್ಷಗಳಲ್ಲಿ ಅನಿಯಮಿತವಾದ ಮಳೆಯಿಂದ ಕನ್ನಂಬಾಡಿ ನೀರಿನ ಕೊರತೆ ಅನುಭವಿಸುವುದು ಇವುಗಳಲ್ಲಿ ಒಂದು ಕಾರಣವಾದರೆ, ಇನ್ನೊಂದು- ಸರ್ಕಾರದ ಅಸಡ್ಡೆ.

ಕನ್ನಂಬಾಡಿಯ ನಿರ್ವಹಣೆ ಎಷ್ಟು ಕಳಪೆಯಾಗಿದೆ ಅನ್ನುವುದನ್ನು ನೋಡಿಯೇ ತೀರಬೇಕು. ಈ ಕಾರಣದಿಂದಾಗಿಯೇ ಕನ್ನಂಬಾಡಿಯ ನಿರ್ವಹಣೆಯನ್ನು ಖಾಸಗಿಯವರ ಸುಪರ್ದಿಗೆ ವಹಿಸಿಕೊಡಲು ಸರ್ಕಾರ ಯೋಚಿಸಿತ್ತು . ಇನ್ನೊಮ್ಮೆ ಡಿಸ್ನಿಲ್ಯಾಂಡ್‌ ಮಾದರಿಯಲ್ಲಿ ಕನ್ನಂಬಾಡಿಯನ್ನು ಅಮ್ಯೂಸ್‌ಮೆಂಟ್‌ ಪಾರ್ಕ್‌ ಆಗಿ ಅಭಿವೃದ್ಧಿಪಡಿಸಲೂ ಸರ್ಕಾರ ಉದ್ದೇಶಿಸಿತ್ತು . ಆದರೆ, ಈ ಪ್ರಸ್ತಾವನೆಗಳೆಲ್ಲ ಕಾಗದದ ಮೇಲೆಯೇ ಉಳಿದಿವೆ. ನಿಂತಲ್ಲೆ ನಿಂತಿರುವ ಜೋಗದ ಅಭಿವೃದ್ಧಿಯಂತೆಯೇ ಕನ್ನಂಬಾಡಿಯ ಪ್ರಗತಿಯ ಕಥೆಯೂ ಮಡುಗಟ್ಟಿದೆ.

ಮನೆಬಾಗಿಲಿಗೇ ಬಂದಿರುವ ಅಂತರರಾಷ್ಟ್ರೀಯ ಭಯೋತ್ಪಾದಕತೆ ಕೂಡ ಕನ್ನಂಬಾಡಿ ಖ್ಯಾತಿಗೆ ಕುತ್ತಾಗಿ ಪರಿಣಮಿಸಿದೆ. ಉಗ್ರರ ಬೆದರಿಕೆಯ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಕನ್ನಂಬಾಡಿಯ ಬಾಗಿಲು ಮುಚ್ಚಿದ ಉದಾಹರಣೆಗಳು ಒಂದೆರಡಲ್ಲ . ಕನ್ನಂಬಾಡಿ ನೋಡಲು ಹೋಗುವವರು, ಪ್ರವೇಶಕ್ಕೆ ಅನುಮತಿ ಇದೆಯೋ ಇಲ್ಲವೋ ಅನ್ನುವುದನ್ನು ಖಚಿತಪಡಿಸಿಕೊಂಡು ಹೋಗುವಂತಾಗಿದೆ. ಹೀಗಿರುವಾಗ ‘ನೋಡು ಬಾರಾ ಕನ್ನಂಬಾಡಿಯಾ’ ಅಂದರೆ ಯಾರು ಬಂದಾರು!?

ಕನ್ನಂಬಾಡಿಗೆ ಈಗ ಹೋಗಬಹುದು

ದಸರಾ ಹಬ್ಬದ ಅಂಗವಾಗಿ, ಅ.24 ರಿಂದ 28 ರವರೆಗೂ ಕನ್ನಂಬಾಡಿಗೆ ವಿಶೇಷ ದೀಪಾಲಂಕಾರದ ಸೊಬಗುಂಟು. ಸಂಜೆ 6.30 ರಿಂದ 9.30 ರವರೆಗೆ ಉದ್ಯಾನದಲ್ಲಿ ಬೆಳಕಿನ ಹೊಳೆ. ಕೃಷ್ಣರಾಜಸಾಗರ ಕಾರ್ಯ ನಿರ್ವಾಹಕ ಅಭಿಯಂತರರು ತಿಳಿಸಿರುವ ಈ ವಿಷಯವನ್ನು ನಿಮ್ಮ ಗಮನಕ್ಕೆ ತಂದಿದ್ದೀವೆ. ಹೋಗುತ್ತೀರಿ ತಾನೆ?

Record your impressions of KR Sagar

ವಾರ್ತಾ ಸಂಚಯ
ಗುಡಿಯ ನೋಡಿರಣ್ಣ, ಕನ್ನಂಬಾಡಿಯ ಗುಡಿಯ ನೋಡಿರಣ್ಣ..
ಬೃಂದಾವನದ (ಕೆ.ಆರ್‌.ಎಸ್‌) ದೀಪಾಲಂಕಾರ ವೇಳೆ ಬದಲು

ಮುಖಪುಟ / ಲೋಕೋಭಿನ್ನರುಚಿ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+