ಪಾಕ್‌ನಲ್ಲಿ ಅಮೆರಿಕಾ ವಿರೋಧಿ ಪ್ರತಿಭಟನೆ: 58ಮಂದಿ ಬಂಧನ
ಜಾಕೋಬಾಬಾದ್ (ಪಾಕಿಸ್ತಾನ): ಪಾಕಿಸ್ತಾನದ ಜಾಕೋಬಾಬಾದ್‌ನಲ್ಲಿ ಅಮೆರಿಕಾ ವಿರೋಧಿ ಪ್ರತಿಭಟನೆ ಇನ್ನಷ್ಟು ತೀವ್ರಗೊಂಡಿದೆ. ಅಮೆರಿಕವು ಬಳಸುತ್ತಿರುವ ವಾಯುನೆಲೆಯ ಬಳಿ ಮಂಗಳವಾರ ಪ್ರತಿಭಟನೆ ನಡೆಸುವ ಪ್ರಯತ್ನವೂ ನಡೆಯಿತು. ಈ ಹಂತದಲ್ಲಿ ಪಾಕ್ ಪೊಲೀಸರು ಪ್ರತಿಭಟನಾಕಾರರ ಮೇಲೆ ಬೆತ್ತ ಪ್ರಹಾರ ನಡೆಸಿದ್ದಲ್ಲದೆ, ಸುಮಾರು 58 ಜನರನ್ನು ತಮ್ಮ ವಶಕ್ಕೆ ತೆಗೆದುಕೊಂಡರು.
ಈ ಪ್ರದೇಶದಲ್ಲಿ ಮುಂಜಾಗರೂಕತಾ ಕ್ರಮವಾಗಿ 3 ಸಾವಿರ ಪ್ಯಾರಾ ಮಿಲಿಟರಿ ಪಡೆ ಹಾಗೂ ಪೊಲೀಸರನ್ನು ನಿಯೋಜಿಸಲಾಗಿದೆ. ದಿನದಿಂದ ದಿನಕ್ಕೆ ಈ ಪ್ರದೇಶದಲ್ಲಿ ಅಮೆರಿಕಾ ವಿರೋಧಿ ಅಲೆ ತೀವ್ರವಾಗುತ್ತಿದ್ದು, ಹಿಂಸಾ ಮಾರ್ಗ ಹಿಡಿಯುತ್ತಿದೆ. ಇಲ್ಲಿನ ವಾಯುನೆಲೆಗೆ ಪ್ರತಿಭಟನಾಕಾರರು ಮುತ್ತಿಗೆ ಹಾಕಬಹುದು ಎಂಬ ಶಂಕೆಯ ಹಿನ್ನೆಲೆಯಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿದೆ. ಜಮಾತೆ ಇ ಇಸ್ಲಾಮಿ ಸಂಘಟನೆ ಈ ಪ್ರತಿಭಟನೆಯ ಮುಂದಾಳತ್ವ ವಹಿಸಿದೆ. ಬೃಹತ್ ರ್ಯಾಲಿಗೂ ಅದು ಕರೆ ನೀಡಿದೆ.
ಈ ಪ್ರದೇಶದಲ್ಲಿ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದು, ಪ್ಯಾರಾ ಮಿಲಿಟರಿ ಪಡೆ ನಾಗರಿಕರಿಗೆ ಸ್ಥೈರ್ಯ ತುಂಬಲು, ರಸ್ತೆಗಳಲ್ಲಿ ಪಥ ಸಂಚಲನ ನಡೆಸಿತು. ಬಿನ್ ಲಾಡೆನ್ ವಿರುದ್ಧ ಹಾಗೂ ತಾಲಿಬಾನ್ ಆಡಳಿತದ ವಿರುದ್ಧ ಅಮೆರಿಕಾ ಸಾರಿರುವ ಯುದ್ಧಕ್ಕೆ ನೆರವು ನೀಡುತ್ತಿರುವ ಪಾಕಿಸ್ತಾನ ಆಡಳಿತದ ವಿರುದ್ಧ ಜಾಕೋಬಾಬಾದ್‌ನಲ್ಲಿ ಪ್ರತಿಭಟನೆ ನಡೆಯುತ್ತಿದೆ.
ಚಾರಿಕಾರ್ (ಆಫ್ಘಾನಿಸ್ತಾನ) ವರದಿ: ಮಿಲಿಟರಿ ಆಡಳಿತ ತಾಲಿಬಾನ್‌ನ ಬಿಗಿ ಹಿಡಿತ ಇರುವ ಕಂದಹಾರ್‌ನ ಮೇಲೆ ಮಂಗಳವಾರ ಅಮೆರಿಕಾ ಜೆಟ್ ವಿಮಾನಗಳು ದಾಳಿ ಮುಂದುವರಿಸಿದ್ದು, ತೈಲ ಸಂಗ್ರಹಾಗಾರವನ್ನು ಧ್ವಂಸ ಮಾಡಿವೆ. ಕಾಬೂಲ್ ನಗರದ ಮೇಲೂ ಬೆಳಗ್ಗಿನಿಂದಲೇ ಬಾಂಬ್ ದಾಳಿ ನಡೆಯುತ್ತಿದೆ.
ಈ ಮಧ್ಯೆ ಕಾಬೂಲ್ ಉತ್ತರ ಭಾಗದಲ್ಲಿ ಮಂಗಳವಾರ ನಡೆದ ರಾಕೆಟ್ ಪ್ರತಿದಾಳಿಯಲ್ಲಿ ಇಬ್ಬರು ನಾಗರಿಕರು ಸಾವನ್ನಪ್ಪಿದ್ದು, ಕನಿಷ್ಠ 10 ಮಂದಿ ಗಾಯಗೊಂಡಿದ್ದಾರೆ. ಮಂಗಳವಾರ ಬೆಳಗ್ಗೆ 11.30ರಲ್ಲಿ ಸಿಡಿದ ಎರಡು ರಾಕೆಟ್‌ಗಳ ಪೈಕಿ ಒಂದು ರಾಕೆಟ್ ಜನನಿಬಿಡ ಮಾರುಕಟ್ಟೆ ಬೀದಿಯಲ್ಲಿ ತರಕಾರಿ ವ್ಯಾಪಾರಿ ಮೊಹಮ್ಮದ್ ಹಸೂಲ್ (55) ಹಾಗೂ ಮತ್ತೊಬ್ಬ ಅಪರಿಚಿತನನ್ನು ಬಲಿ ತೆಗೆದುಕೊಂಡಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
(ಎಎಫ್‌ಪಿ)
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications