Get Updates
Get notified of breaking news, exclusive insights, and must-see stories!

.. .. ಜಾತಿ ದೇಗುಲದೊಳಗೊ !

ಹೊಲೆ ಮಾದಿಗರ ಹಾಡು ಬರೆದಂಥಾ ಡಾ.ಸಿದ್ಧಲಿಂಗಯ್ಯ ಗ್ರಾಮದೇವತೆಗಳು ಎನ್ನುವ ಪುಸ್ತಕವೊಂದನ್ನು ಬರೆದಿದ್ದಾರೆ ಎನ್ನುವುದು ನಿಮಗೆ ಗೊತ್ತಾ ? ಗ್ರಾಮದೇವತೆಗಳು ಪಿಎಚ್‌ಡಿಗಾಗಿ ಸಲ್ಲಿಸಿದ ಮಹಾ ಪ್ರಬಂಧ. ಗ್ರಾಮದೇವತೆಗಳ ಬಗ್ಗೆ ಅಂಥ ಇನ್ನೊಂದು ಕೃತಿ ಕನ್ನಡದಲ್ಲಿಲ್ಲ ಅನ್ನುವುದು ಕೃತಿಯ ಅಗ್ಗಳಿಕೆ. ಬಹಳ ದಿನಗಳ ನಂತರ ಸಿದ್ಧಲಿಂಗಯ್ಯ ದೇವರು ಹಾಗೂ ಆತನ ಪರಿಸರದತ್ತ ಕಣ್ಣು ಹಾಯಿಸಿದ್ದಾರೆ. ಪಂಕ್ತಿಭೇದದ ಮೂಲಕ ಜಾತಿ ಪದ್ಧತಿಯ ಜೀವಂತವಾಗಿಡುವ ದೇವಸ್ಥಾನಗಳತ್ತ ಕಿಡಿ ಕಾರಿದ್ದಾರೆ.

ಸಿದ್ಧಲಿಂಗಯ್ಯನವರ ಕೋಪ , ಮೊದಲ ಪಂಕ್ತಿ ಭೋಜನವನ್ನು ಮೇಲ್ಜಾತಿಯವರಿಗೆ ಮೀಸಲಿಡುತ್ತಿರುವ ಮುಜರಾಯಿ ದೇವಸ್ಥಾನಗಳ ಬಗೆಗೆ. ಇಂಥ ದೇವಸ್ಥಾನಗಳಿಗೆ ಹಣ ಕೊಡುವ ಬದಲು ಸರಕಾರ ಬೀಗ ಹಾಕಬೇಕು ಎನ್ನುವುದು ಅವರ ಆಗ್ರಹ. ರಾಜ್ಯ ಪರಿಶಿಷ್ಟ ಜಾತಿ ಮತ್ತು ವರ್ಗಗಳ ಅಭಿವೃದ್ಧಿ ನಿಗಮ ಆಯೋಜಿಸಿದ್ದ ‘ಅಮಾನವೀಯ ಆಚರಣೆಗಳು’ ಎಂಬ ವಿಚಾರ ಸಂಕಿರಣದಲ್ಲಿ ಸಿದ್ಧಲಿಂಗಯ್ಯ ಮಾತನಾಡುತ್ತಿದ್ದರು.

ಸರಕಾರದಿಂದ ಅನುದಾನ ಪಡೆಯುತ್ತಿರುವ ದೇವಸ್ಥಾನಗಳಲ್ಲಿ , ಊಟದ ಮೊದಲ ಪಂಕ್ತಿಯಲ್ಲಿ ಮೇಲ್ಜಾತಿಯವರನ್ನೇ ಕುಳ್ಳಿರಿಸುತ್ತಾರೆ. ಇಂತಹ ಅಕ್ರಮ ಹಾಗೂ ಸಂವಿಧಾನ ಬಾಹಿರ ಪದ್ಧತಿಯನ್ನು ನಿಲ್ಲಿಸಲು ಸರಕಾರ ಸರಿಯಾದ ಕ್ರಮ ತೆಗೆದುಕೊಳ್ಳಬೇಕು ಅಥವಾ ಅಂತಹ ದೇವಸ್ಥಾನಗಳಿಗೆ ಆರ್ಥಿಕ ನೆರವು ನೀಡುವುದನ್ನು ನಿಲ್ಲಿಸಿ, ಬೀಗ ಹಾಕಬೇಕು ಎಂದು ಅವರು ಸಲಹೆ ಮಾಡಿದರು.

ಕಣ್ಣಿದ್ದೂ ಕುರುಡರು, ಆದ್ದರಿಂದಲೇ ರಾಜಕಾರಣಿಗಳಾದರು

ಮೇಲ್ವರ್ಗದವರು ಕೇವಲ ಪ್ರತಿಷ್ಠೆಗಾಗಿ ಅನುಸರಿಸುತ್ತಿರುವ ಈ ಅಮಾನವೀಯ ಕ್ರಮದ ವಿರುದ್ಧ ಜನಾಂದೋಲನ ರೂಪುಗೊಳ್ಳಬೇಕು ಎಂದ ಸಿದ್ಧಲಿಂಗಯ್ಯ, ಅಮಾನವೀಯ ಪದ್ಧತಿಗಳ ಬಗ್ಗೆ ರಾಜಕಾರಣಿಗಳು ತಿಳಿದೂ ತಿಳಿಯದವರಂತೆ ನಟಿಸುತ್ತಿದ್ದಾರೆ ಎಂದು ರಾಜಕಾರಣಿಗಳ ವರ್ತನೆಯನ್ನು ತರಾಟೆಗೆ ತೆಗೆದುಕೊಂಡರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಮಾಜ ಕಲ್ಯಾಣ ಸಚಿವ ಕಾಗೋಡು ತಿಮ್ಮಪ್ಪ , ರಾಜ್ಯದಲ್ಲಿ ಆಚರಣೆಯಲ್ಲಿರುವ ಅಮಾನವೀಯ ಆಚರಣೆಗಳನ್ನು ನಿಲ್ಲಿಸಲು ಅಗತ್ಯ ಬಿದ್ದರೆ ಕಾನೂನು ಜಾರಿಗೊಳಿಸಲಾಗುವುದು. ಅದಕ್ಕೂ ಮುನ್ನ ಆಚರಣೆಗಳ ವಿರುದ್ಧ ಜನ ಜಾಗೃತಿ ಮೂಡಿಸುವುದು ಅಗತ್ಯ ಎಂದು ಅಭಿಪ್ರಾಯಪಟ್ಟರು.

ಬಹುಕಾಲದಿಂದ ನಡೆದುಕೊಂಡು ಬಂದಿರುವ ಇಂತಹ ಅಮಾನವೀಯ ಆಚರಣೆಗಳು ಕೆಳವರ್ಗದವರ ಜೀವನ ವಿನ್ಯಾಸವಾಗಿದೆ. ಆದ್ದರಿಂದ ಇವುಗಳನ್ನು ಇಡಿಯಾಗಿ ನೋಡಬೇಕೇ ಹೊರತು ಬಿಡಿಬಿಡಿಯಾಗಿ ನೋಡಿದರೆ ಸಮಸ್ಯೆ ಸಿಕ್ಕುಸಿಕ್ಕಾಗುತ್ತದೆ ಎಂದು ಸಾಹಿತಿ ಚಂದ್ರಶೇಖರ ಪಾಟೀಲ ಹೇಳಿದರು.

ಬಾಲಂಗೋಚಿ : ಸಿದ್ಧಲಿಂಗಯ್ಯನವರು ಏಕಾಏಕಿ ಭೋಜನ ಪಂಕ್ತಿಭೇದವನ್ನು ಏಕೆ ನೆನಪಿಸಿಕೊಂಡರು? ಅವರೇನಾದರೂ ಇತ್ತೀಚೆಗೆ ಉಡುಪಿ, ಮಂತ್ರಾಲಯ ಪ್ರವಾಸ ಕೈಗೊಂಡಿದ್ದರಾ?

(ಇನ್ಫೋ ವಾರ್ತೆ)

What do you think about this story ?

ವಾರ್ತಾ ಸಂಚಯ
ಬಡವರ ನಗುವಿನ ಶಕ್ತಿ

ಮುಖಪುಟ / ಲೋಕೋಭಿನ್ನರುಚಿ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+