ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರೋಡ್‌ಪತಿಯಲ್ಲಿ 12.5 ಲಕ್ಷ ರುಪಾಯಿ ಗೆದ್ದ‘ಮಂಡ್ಯದ ಗಂಡು’

By Staff
|
Google Oneindia Kannada News

ಬೆಂಗಳೂರು : ಸ್ಟಾರ್‌ ಪ್ಲಸ್‌ನಲ್ಲಿ ಪ್ರಸಾರವಾಗುವ ಜನಪ್ರಿಯ ಕೌನ್‌ಬನೇಗಾ ಕರೋಡ್‌ಪತಿ (ಕೆ.ಬಿ.ಸಿ)ಯಲ್ಲಿ ಮಂಡ್ಯ ಜಿಲ್ಲೆಯ ನಾಗಮಂಗಲದ ಮೆಹಬೂಬ್‌ ಪಾಶಾ ಅವರು 12.5 ಲಕ್ಷ ರುಪಾಯಿ ಗೆದ್ದಿದ್ದಾರೆ. ಅಮಿತಾಬ್‌ ಬಚ್ಚನ್‌ ನಡೆಸಿಕೊಡುವ ಈ ಗೇಮ್‌ ಶೋನಲ್ಲಿ ಸೋಮವಾರ ಅವರಿಗೆ ಲಕ್ಷ್ಮಿ ಒಲಿದಳು.

ಬೆಂಗಳೂರು ಸಮೀಪದ ವರ್ತೂರಿನಲ್ಲಿ ವೈದ್ಯಕೀಯ ಪರಿವೀಕ್ಷಕರಾಗಿರುವ ಮೆಹಬೂಬ್‌ ಪಾಶ, ಅಮಿತಾಬ್‌ ಬಚ್ಚನ್‌ ಕೇಳಿದ 12 ಪ್ರಶ್ನೆಗಳಿಗೆ ಎರಡು ಲೈಫ್‌ಲೈನ್‌ಗಳ ನೆರವಿನಿಂದ ಸರಿ ಉತ್ತರ ಕೊಟ್ಟರು. 12.5 ಲಕ್ಷ ರುಪಾಯಿ ಜಯಿಸಿದರು. ಈ ಕಾರ್ಯಕ್ರಮ ಅಕ್ಟೋಬರ್‌ 22ರ ಸೋಮವಾರ ರಾತ್ರಿ ಪ್ರಸಾರವಾಯಿತು.

ಪಾಶಾ, ರೋಲ್‌ ಓವರ್‌ ಸ್ಪರ್ಧಿಯಾಗಿದ್ದು, ಮಂಗಳವಾರ ಸಹ ಕೆಬಿಸಿಯ ಹಾಟ್‌ ಸೀಟ್‌ನಲ್ಲಿ ಅವರು ಪ್ರತ್ಯಕ್ಷವಾಗಲಿದ್ದಾರೆ. ಆದರೆ, ಪಾಶಾ ಅವರು 25 ಲಕ್ಷ ರುಪಾಯಿ ಪ್ರಶ್ನೆಗೆ ಉತ್ತರಿಸದೆ ಸ್ಪರ್ಧೆಯಿಂದ ಹಿಂದೆಸರಿದು, 12.5 ಲಕ್ಷಕ್ಕೇ ತೃಪ್ತಿ ಪಟ್ಟಿದ್ದಾರೆ ಎಂದು ಮೂಲಗಳು ಹೇಳಿವೆ.

(ಇನ್‌ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X