Get Updates
Get notified of breaking news, exclusive insights, and must-see stories!

ಆಫ್ಘನ್‌ ಬುಡಕಟ್ಟು ಜನರ ಪಂಜರದಲ್ಲಿ 30 ವಿದೇಶೀ ಪತ್ರಕರ್ತರು

ಇಸ್ಲಾಮಾಬಾದ್‌ : ಆಫ್ಘಾನಿಸ್ತಾನದ ಮೇಲೆ ಅಮೆರಿಕಾ ನಡೆಸುತ್ತಿರುವ ಯುದ್ಧವನ್ನು ವರದಿ ಮಾಡಲು ರಹಸ್ಯವಾಗಿ ನುಗ್ಗಿದ ವಿವಿಧ ದೇಶಗಳ 30 ಪತ್ರಕರ್ತರು ಇದೀಗ ಆಫ್ಘನ್‌ ಬುಡಕಟ್ಟು ಜನರ ಒತ್ತೆಯಾಳುಗಳು. ಭಾರತದ ಪತ್ರಕರ್ತರೂ ಇರುವ ಈ ಪತ್ರಕರ್ತರ ಬಳಗದ ಬಿಡುಗಡೆಗೆ ಬುಡಕಟ್ಟು ಜನ ಕೇಳುತ್ತಿರುವ ಹಣ 1 ಸಾವಿರ ಡಾಲರ್‌!

ಉಜ್ಬೇಕಿಸ್ತಾನದ ಗಡಿಯ ಮೂಲಕ ತಾಲಿಬಾನ್‌ ವಿರೋಧಿ ಉತ್ತರ ಮೈತ್ರಿಕೂಟ ವ್ಯಾಪ್ತಿಯ ಪ್ರದೇಶ ಹಾದು ಕಾಬೂಲ್‌ನ ಉತ್ತರ ಭಾಗದಲ್ಲಿ ಹೆಲಿಕಾಫ್ಟರ್‌ ಇಳಿಯುತ್ತಿದ್ದಂತೆ, ತಾಲಿಬಾನ್‌ ರಕ್ಷಣಾ ವಲಯದ ಬುಡಕಟ್ಟು ಜನರು ಪತ್ರಕರ್ತರನ್ನು ಸೆರೆಹಿಡಿದರು.

ಭಾರತ, ಅಮೆರಿಕಾ, ಬ್ರಿಟನ್‌, ಜರ್ಮನಿ, ಬಲ್ಗೇರಿಯಾ, ರಷ್ಯಾ, ಫ್ರಾನ್ಸ್‌ ಮತ್ತು ಮಧ್ಯಪ್ರಾಚ್ಯ ದೇಶಗಳ 30 ಪತ್ರಕರ್ತರು ಮುಷ್ಟಿಯಲ್ಲಿ ಜೀವ ಹಿಡಿದು ಕುಂತಿದ್ದಾರೆ. ಬಲ್ಗೇರಿಯಾದ ಪತ್ರಕರ್ತ ಕಚೇರಿಯನ್ನು ಸಂಪರ್ಕಿಸಿದ್ದು, ಒತ್ತೆಯಾಳಾಗಿರುವ ಪತ್ರಕರ್ತರ ಸ್ಥಿತಿ ತೀರಾ ಕೆಟ್ಟದಾಗಿದೆ ಎಂದು ತಿಳಿಸಿದ್ದಾರೆ. 1 ಸಾವಿರ ಡಾಲರ್‌ ಕೊಟ್ಟಲ್ಲಿ ಮಾತ್ರ ಪತ್ರಕರ್ತರನ್ನು ಬಿಡುಗಡೆ ಮಾಡುವುದಾಗಿ ಬುಡಕಟ್ಟು ಜನ ಪಟ್ಟು ಹಿಡಿದಿದ್ದಾರೆ.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+