Get Updates
Get notified of breaking news, exclusive insights, and must-see stories!

ರಾಜ್ಯದಲ್ಲಿ 7 ಸಾವಿರ ಮಾಹಿತಿ ಕೇಂದ್ರ ಸ್ಥಾಪನೆ: ಪ್ರೊ.ಬಿಕೆಸಿ

ಬೆಂಗಳೂರು : ಶೈಕ್ಷಣಿಕ, ಆರೋಗ್ಯ ಮಾಹಿತಿ ಮತ್ತು ರಾಜ್ಯ ಸರಕಾರದ ಯೋಜನೆಗಳ ವಿವರಗಳನ್ನು ಸಾರ್ವಜನಿಕರಿಗೆ ಮುಟ್ಟಿಸಲು ರಾಜ್ಯಾದ್ಯಂತ ಏಳು ಸಾವಿರ ಮಾಹಿತಿ ಕೇಂದ್ರಗಳನ್ನು ಸರಕಾರ ಸ್ಥಾಪಿಸಲಿದೆ. ಈ ವಿಷಯವನ್ನು ರಾಜ್ಯ ಮಾಹಿತಿ ತಂತ್ರಜ್ಞಾನ ಸಚಿವ ಪ್ರೊ. ಬಿ.ಕೆ. ಚಂದ್ರಶೇಖರ್‌ ತಿಳಿಸಿದ್ದಾರೆ.

ಪ್ರಸಕ್ತ ಸನ್ನಿವೇಶದಲ್ಲಿ ರಾಜ್ಯ ಸರಕಾರದ ಯೋಜನೆಗಳ ಬಗ್ಗೆ ಸಾರ್ವಜನಿಕರಿಗೆ ಸೂಕ್ತ ಮಾಹಿತಿ ದೊರಕುತ್ತಿಲ್ಲ. ಮಾಹಿತಿಯ ಕೊರತೆಯಿಂದ ಸರಕಾರದ ಹಲವು ಯೋಜನೆಗಳ ಸಂಪೂರ್ಣ ಲಾಭ ಜನರಿಗೆ ಸಿಗುತ್ತಿಲ್ಲ. ಹೀಗಾಗಿ ಆಸ್ಪತ್ರೆ- ಆರೋಗ್ಯ, ಶಿಕ್ಷಣ, ರೈತರಿಗೆ ಸರಕಾರ ನೀಡುವ ಸವಲತ್ತುಗಳೇ ಮೊದಲಾದ ಮಾಹಿತಿಗಳನ್ನು ಈ ಕೇಂದ್ರಗಳು ಒದಗಿಸಲಿವೆ ಎಂದರು.

ಸರಕಾರ ಸ್ಥಾಪಿಸಲುದ್ದೇಶಿಸಿರುವ ಮಾಹಿತಿ ಕೇಂದ್ರಗಳು ಕೇವಲ ನಗರ ಪ್ರದೇಶಕ್ಕಷ್ಟೇ ಸೀಮಿತವಾಗಿರುವುದಿಲ್ಲ. ಪಟ್ಟಣ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲೂ ಮಾಹಿತಿ ಕೇಂದ್ರ ಸ್ಥಾಪಿಸಲಾಗುವುದು ಎಂದು ಪ್ರೊ. ಬಿ.ಕೆ. ಚಂದ್ರಶೇಖರ್‌ ವಿವರಿಸಿದರು.

ಸ್ಟಾಟಿಸ್ಟಿಕಲ್‌ ಡಾಟಾ ಸಂಸ್ಥೆಯ ಮ್ಯಾಪ್‌ ಕ್ಯೂ ಹೆಸರಿನ ಬೆಂಗಳೂರು ನಕಾಶೆ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಅವರು, ಈ ನಕಾಶೆ ಕನ್ನಡ ಭಾಷೆಯಲ್ಲಿದ್ದಿದ್ದರೆ, ಮತ್ತಷ್ಟು ಅನುಕೂಲಕರವಾಗಿರುತ್ತಿತ್ತು ಎಂದು ಅಭಿಪ್ರಾಯಪಟ್ಟರು.

ಸಮಾರಂಭದಲ್ಲಿ ಸ್ಟಾಟಿಸ್ಟಿಕಲ್‌ ಡಾಟಾ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಡಾ. ಎಸ್‌. ರಾಜಗೋಪಾಲನ್‌, ವರದಾಚಾರಿ ಮೊದಲಾದವರು ಪಾಲ್ಗೊಂಡಿದ್ದರು.

(ಇನ್‌ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+