ಎರಡು ಮತ್ತೊಂದು ಉಪಗ್ರಹದೊಂದಿಗೆ ಅಂತರಿಕ್ಷಕ್ಕೆ ‘ಪಿಎಸ್‌ಎಲ್‌ವಿ-ಸಿ3’

ಶ್ರೀಹರಿಕೋಟ : ಪೋಲಾರ್‌ ಸ್ಯಾಟಲೈಟ್‌ ಲಾಂಚ್‌ ವೆಹಿಕಲ್‌(ಪಿಸ್‌ಎಲ್‌ವಿ) ಸರಣಿಗೆ ಸೇರಿದ ‘ಪಿಎಸ್‌ಎಲ್‌ವಿ-ಸಿ3’ ಯನ್ನು ಸೋಮವಾರ ಯಶಸ್ವಿಯಾಗಿ ಅಂತರಿಕ್ಷಕ್ಕೆ ಉಡಾಯಿಸಲಾಯಿತು.

ಶ್ರೀಹರಿಕೋಟಾದ ಉಪಗ್ರಹ ಹಾರಿಸುವ ನೆಲೆಯಿಂದ ಸೋಮವಾರ ಬೆಳಗ್ಗೆ 10.22 ನಿಮಿಷಕ್ಕೆ ಪಿಎಸ್‌ಎಲ್‌ವಿ-ಸಿ3 ಯಶಸ್ವೀ ಉಡಾವಣೆ ನಡೆಯಿತು. ಸೆ.11 ರಂದು ಅಮೆರಿಕಾದ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ ಘಟನೆಯ ಹಿನ್ನೆಲೆಯಲ್ಲಿ ಪಿಎಸ್‌ಎಲ್‌ವಿ-ಸಿ3 ಉಡಾವಣೆ ಪ್ರಕ್ರಿಯೆಗಳನ್ನು ಅತ್ಯಂತ ಗೋಪ್ಯವಾಗಿಡಲಾಗಿತ್ತು . ಪ್ರತಿಷ್ಠಿತ ಜಿಎಸ್‌ಎಲ್‌ವಿ ಉಡಾವಣೆಯ ಆರು ತಿಂಗಳ ನಂತರ ಭಾರತದ ಬಾಹ್ಯಾಕಾಶ ವಿಜ್ಞಾನಿಗಳು ಸಾಧಿಸಿರುವ ಮಹತ್ತರ ಸಾಧನೆ ಇದಾಗಿದೆ.

44 ಮೀಟರ್‌ ಎತ್ತರದ ವಾಹನ, ಭಾರತದ ‘ರಿಮೋಟ್‌ ಸೆನ್ಸಿಂಗ್‌ ಟೆಕ್ನಾಲಜಿ ಎಕ್ಸ್‌ಪರಿಮೆಂಟ್‌ ಸ್ಯಾಟಲೈಟ್‌’ ಸೇರಿದಂತೆ ಒಟ್ಟಾರೆ ಮೂರು ಉಪಗ್ರಹಗಳನ್ನು ಅಂತರಿಕ್ಷ ಕಕ್ಷೆಗೆ ಹೊತ್ತೊಯ್ದಿದೆ. ಇದರಲ್ಲಿ ಬೆಲ್ಜಿಯಂನ ‘ಫೋಬಾ’ ಹಾಗೂ ಜರ್ಮನಿಯ ‘ಬರ್ಡ್‌’ ಸೇರಿದೆ. ವಾಣಿಜ್ಯ ಉದ್ದೇಶಗಳಿಗಾಗಿ ವಿದೇಶಿ ಉಪಗ್ರಹಗಳನ್ನು ಪಿಎಸ್‌ಎಲ್‌ವಿ ಹೊತ್ತೊಯ್ಯುತ್ತಿರುವುದು ಇದು ಎರಡನೇ ಬಾರಿ.

(ಏಜೆನ್ಸೀಸ್‌)

ಮುಖಪುಟ / ಇವತ್ತು... ಈ ಹೊತ್ತು...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+