ಬೆಂಕಿ ಆಕಸ್ಮಿಕ :ಧಾರವಾಡದ ನೆಹರೂ ನಗರದ ದಂಪತಿಗಳ ಸಾವು
ಹುಬ್ಬಳ್ಳಿ : ಆಕಸ್ಮಿಕ ಬೆಂಕಿ ಅನಾಹುತದಲ್ಲಿ ದಂಪತಿಗಳು ಮೃತ ಪಟ್ಟಿರುವ ಘಟನೆ ಧಾರಾವಾಡದ ನೆಹರೂ ನಗರದಿಂದ ವರದಿಯಾಗಿದೆ.
ಮೃತಪಟ್ಟಿರುವ ನತದೃಷ್ಟರನ್ನು ಫಕ್ರೂದ್ದೀನ್ ಜಂಖದರ್ (22) ಹಾಗೂ ಆತನ ಪತ್ನಿ ಖತೂಜಾ ಬೇಗಂ (20) ಎಂದು ಗುರುತಿಸಲಾಗಿದೆ. ಖತೂಜಾ ಎಂದಿನಂತೆ ಶನಿವಾರ ಸ್ಟೋವ್ ಹಚ್ಚಿದಾಗ, ಭಗ್ಗನೆದ್ದ ಜ್ವಾಲೆ ಆಕೆಯ ಬಟ್ಟೆಗೆ ತಾಗಿತು. ಬಗಲಲ್ಲೇ ಒಣ ಜೋಳದ ಕಡ್ಡಿಗಳು ಇದ್ದದ್ದರಿಂದ ಅದಕ್ಕೂ ಬೆಂಕಿ ಹರಡಿಕೊಂಡು ಖತೂಜಾ ಬೆಂಕಿಯುಂಡೆಯಂತಾದರು. ಆಕೆಯನ್ನು ಕಾಪಾಡಲು ನುಗ್ಗಿದ ಫಕ್ರೂದ್ದೀನ್ ಕೂಡ ಅಗ್ನಿ ಹೊಂಡದಲ್ಲಿ ಸಿಲುಕಿದ. ತೀವ್ರವಾಗಿ ಗಾಯಗೊಂಡಿದ್ದ ಗಂಡ- ಹೆಂಡತಿ ಇಬ್ಬರನ್ನೂ ಧಾರಾವಾಡದ ಸಾರ್ವಜನಿಕ ಆಸ್ಪತ್ರೆಗೆ ಸೇರಿಸಲಾಯಿತು. ನಂತರ ಕಿಮ್ಸ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅಷ್ಟು ಹೊತ್ತಿಗೆ ದಂಪತಿಗಳು ಮೃತಪಟ್ಟಿದ್ದರು ಎಂದು ಪೊಲೀಸರು ತಿಳಿಸಿದರು.
(ಇನ್ಫೋ ವಾರ್ತೆ)












Click it and Unblock the Notifications