Get Updates
Get notified of breaking news, exclusive insights, and must-see stories!

ಅಮೆರಿಕಕ್ಕೆ ಆಫ್ಘಾನಿಸ್ತಾನವೇ ರುದ್ರಭೂಮಿ ಆಗಲಿದೆ : ಹಕ್ಕಾನಿ

Talibans key military commander Jallaluddin Haqqaniಇಸ್ಲಾಮಾಬಾದ್‌ : ಅಮೆರಿಕ ವಿರುದ್ಧ ಗೆರಿಲ್ಲಾ ಯುದ್ಧ ಮಾಡಿ, ಆಫ್ಘಾನಿಸ್ತಾನ ಗೆದ್ದೇ ತೀರುತ್ತದೆ ಎಂದು ತಾಲಿಬಾನ್‌ನ ಹಿರಿಯ ಮಿಲಿಟರಿ ಕಮಾಂಡರ್‌ ಮೌಲ್ವಿ ಜಲಾಲುದ್ದೀನ್‌ ಹಕ್ಕಾನಿ ಶನಿವಾರ ಹೇಳಿದ್ದಾರೆ. ಅಮೆರಿಕಕ್ಕೆ ಆಫ್ಘಾನಿಸ್ತಾನವೇ ರುದ್ರಭೂಮಿ ಆಗಲಿದೆ ಎಂದೂ ಅವರು ‘ದಿ ನ್ಯೂಸ್‌’ ದೈನಿಕಕ್ಕೆ ನೀಡಿರುವ ಸಂದರ್ಶನದಲ್ಲಿ ಎಚ್ಚರಿಕೆ ನೀಡಿದ್ದಾರೆ.

ಒಂದೊಮ್ಮೆ ಅಮೆರಿಕ ನೇತೃತ್ವದ ಪಡೆಗಳು ಆಫ್ಘಾನಿಸ್ತಾನದ ನಗರಗಳನ್ನು ವಶಪಡಿಸಿಕೊಂಡು, ಹೊಸ ಸರಕಾರ ರಚಿಸಿದ್ದೆ ಆದಲ್ಲಿ, ಅದನ್ನು ತಾವು ಒಪ್ಪಿಕೊಳ್ಳುವುದಿಲ್ಲ ಎಂದು ಅವರು ಹೇಳಿದ್ದಾರೆ. ಅಂಥ ಸನ್ನಿವೇಶ ಎದುರಾದರೆ, ನಾವು ಬೆಟ್ಟಗುಡ್ಡಗಳಲ್ಲಿ ಅಡಗಿಕೊಂಡು, ರಷ್ಯಾ ಮೇಲೆ ಮಾಡಿದಂತೆಯೇ ದೀರ್ಘಕಾಲದ ಗೆರಿಲ್ಲಾ ಯುದ್ಧ ಮಾಡಿ, ತಮ್ಮ ತಾಯ್ನಾಡನ್ನು ಮರಳಿ ಪಡೆಯುವುದಾಗಿ ಅವರು ಘೋಷಿಸಿದರು.

ಸಾವಿರಾರು ಸಂಖ್ಯೆಯ ಸೋವಿಯತ್‌ ಯೋಧರನ್ನು ಬಲಿತೆಗೆದುಕೊಂಡ 1979ರಿಂದ 89ರವರೆಗಿನ ಹೋರಾಟವನ್ನು ಸ್ಮರಿಸಿದ ಅವರು, ಆಫ್ಘಾನಿಸ್ತಾನ ಅಮೆರಿಕೆಗೆ ಕೂಡ ಸ್ಮಶಾನ ಆಗಲಿದೆ ಎಂದರು. ಹಕ್ಕಾನಿ ತಾಲಿಬಾನ್‌ನ ದಕ್ಷಿಣ ಪಾಂತ್ರದಲ್ಲಿ ಹೊಣೆಹೊತ್ತಿರುವ ಹಕ್ಕಾನಿಗೆ ಒಸಮಾ ಬಿನ್‌ ಲಾಡೆನ್‌ನ ಸುರಕ್ಷತೆಯ ಹೆಚ್ಚುವರಿ ಜವಾಬ್ದಾರಿಯನ್ನೂ ವಹಿಸಿಕೊಡಲಾಗಿದೆ ಎಂದು ದಿ ನ್ಯೂಸ್‌ ಹೇಳಿದೆ.

ಆಫ್ಘಾನಿಸ್ತಾನದ ಮೇಲೆ ಅಕ್ಟೋಬರ್‌ 7ರಂದು ಆರಂಭವಾದ ಅಮೆರಿಕದ ವಾಯುದಾಳಿ, ತಾಲಿಬಾನ್‌ ಸೇನೆಯನ್ನು ನಾಶಪಡಿಸುವಲ್ಲಿ ವಿಫಲವಾಗಿದೆ ಎಂದೂ ಅವರು ಹೇಳಿದ್ದಾರೆ. ಕಳೆದ 12ದಿನಗಳಲ್ಲಿ ತಾಲಿಬಾನ್‌ನ ಯಾವೊಬ್ಬ ಪ್ರಮುಖ ನಾಯಕ ಅಥವಾ ಸೇನಾ ಮುಖಂಡನನ್ನು ಕೊಲ್ಲಲೂ ಅಮೆರಿಕೆಗೆ ಸಾಧ್ಯವಾಗಿಲ್ಲ ಎಂದು ಅವರು ಜಂಭ ಕೊಚ್ಚಿಕೊಂಡಿದ್ದಾರೆ.

ಮುಲ್ಲಾ ಮೊಹಮ್ಮದ್‌ ಓಮರ್‌, ಒಸಾಮಾ ಬಿನ್‌ ಲಾಡೆನ್‌ ಸೇರಿದಂತೆ ತಾಲಿಬಾನ್‌ನ ಎಲ್ಲ ಸೇನಾ ಮುಖಂಡರೂ ಕ್ಷೇಮವಾಗಿದ್ದು, ತಮ್ಮ ಕರ್ತವ್ಯ ಮುಂದುವರಿಸುತ್ತಿದ್ದಾರೆ ಎಂದು ಅವರು, ಈ ವರೆಗೆ 25 ತಾಲಿಬಾನ್‌ ಸೈನಿಕರು ಮಾತ್ರ ವೀರಮರಣ ಹೊಂದಿದ್ದಾರೆ ಎಂದರು.

(ಎ.ಎಫ್‌.ಪಿ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+