ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭೂಯುದ್ಧಕ್ಕೆ ನಾವು ರೆಡಿ,ಅಮೆರಿಕ ಪಡೆಗಳಿಗೆಕಾಯುತ್ತಿದ್ದೇವೆ-ತಾಲಿಬಾನ್‌

By Staff
|
Google Oneindia Kannada News

ಕಾಬೂಲ್‌ : ಅಮೆರಿಕಾ ಸೇನೆಯಾಂದಿಗೆ ಭೂಯುದ್ಧಕ್ಕೆ ತಾಲಿಬಾನ್‌ ಪಡೆಗಳು ಸಂಪೂರ್ಣ ಸಿದ್ಧವಾಗಿದ್ದು , ಬಾಂಬ್‌ದಾಳಿಯ ಅನಾಹುತದ ಸೇಡನ್ನು ತೀರಿಸಿಕೊಳ್ಳಲು ಅವಕಾಶಕ್ಕಾಗಿ ಕಾಯುತ್ತಿವೆ ಎಂದು ತಾಲಿಬಾನ್‌ ಅಧಿಕಾರಿಯಾಬ್ಬರು ಶುಕ್ರವಾರ ತಿಳಿಸಿದ್ದಾರೆ.

ನಾವು ಅಮೆರಿಕ ಸೇನೆಯ ಬರುವಿಗಾಗಿ ಕಾಯುತ್ತಿದ್ದೇವೆ. ನಾವು ಹೋರಾಟವನ್ನೇನೂ ಬಯಸುತ್ತಿಲ್ಲ . ಆದರೆ, ಬಾಂಬ್‌ದಾಳಿಗಿಂತ ನೆಲಯುದ್ಧಕ್ಕೇ ನಮ್ಮ ಒಲವು ಎಂದು ತಾಲಿಬಾನ್‌ ಬಖ್ತರ್‌ ಇನ್‌ಫರ್ಮೇಶನ್‌ ಏಜೆನ್ಸಿಯ ಅಬ್ದುಲ್‌ ಹನನ್‌ ಹೆಮಟ್‌ ಅವರು ತಿಳಿಸಿದ್ದಾರೆ. ಕಾಂದಹಾರ್‌ ಸಮೀಪಕ್ಕೆ ಅಮೆರಿಕ ಸೇನೆ ಧಾವಿಸಿದೆ ಎನ್ನುವ ವರದಿಗಳನ್ನು ಖಚಿತಪಡಿಸಲು ಅವರು ನಿರಾಕರಿಸಿದರು.

ಕಳೆದ 25 ವರ್ಷಗಳಲ್ಲಿ ರಣರಂಗದಲ್ಲಿ ತಾಲಿಬಾನ್‌ ತನ್ನ ಪ್ರಾಬಲ್ಯವನ್ನು ಸಾಬೀತುಪಡಿಸಿದೆ. ಕಳೆದ ಇಪ್ಪತ್ತೆೈದು ವರ್ಷಗಳಲ್ಲಿ ಜನಿಸಿರುವ ಪ್ರತಿಯಾಬ್ಬ ತಾಲಿಬಾನಿಗೂ ಸೆಣಸುವುದು ಹೇಗೆಂಬುದು ಗೊತ್ತು . ಆಪ್ಘನ್ನರು ಜಿಹಾದ್‌ಗೆ ಸಿದ್ಧವಾಗಿದ್ದಾರೆ ಎಂದು ಹನನ್‌ ತಿಳಿಸಿದರು.

(ಪಿಟಿಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X