Get Updates
Get notified of breaking news, exclusive insights, and must-see stories!

ಆಫ್ಘನ್ನಿನ ಈಶಾನ್ಯ ದಿಕ್ಕಿನ ಜಲಶಿಲೆ ಗುಹೆಯಲ್ಲಿದ್ದಾನೆ ಒಸಾಮ!

ಲಂಡನ್‌ : ಆಫ್ಘನ್ನಿನ ಈಶಾನ್ಯ ದಿಕ್ಕಿನ ಬಂಡೆಗಲ್ಲಿನ ಗವಿಯಾಂದರಲ್ಲಿ ಅಡಗಿದ್ದಾನೆ ಒಸಾಮ ಎಂದು ಅಮೆರಿಕೆಯ ಭೂಗರ್ಭಶಾಸ್ತ್ರಜ್ಞ ಜಾನ್‌ ಫೋರ್ಡ್‌ ಶ್ರೋಡರ್‌ ನಂಬಿದ್ದಾರೆ.

ಟೈಮ್ಸ್‌ ಪತ್ರಿಕೆಯ ಅಕ್ಟೋಬರ್‌ 19ನೇ ತಾರೀಖಿನ ಸಂಚಿಕೆ ಈ ವಿಷಯ ಪ್ರಕಟಿಸಿದೆ. ಸೆಪ್ಟೆಂಬರ್‌ 11ರಂದು ಅಮೆರಿಕಾ ಮೇಲೆ ಉಗ್ರರ ದಾಳಿ ನಡೆದ ನಂತರ ಟಿವಿ ಚಾನೆಲ್‌ಗಳಲ್ಲಿ ಪ್ರಸಾರವಾದ ವಿಡಿಯೋದಲ್ಲಿ ಒಸಾಮ ನಿಂತಿದ್ದ ಸ್ಥಳವನ್ನು ಶ್ರೋಡರ್‌ ಗಂಭೀರವಾಗಿ ಗಮನಿಸಿದ್ದಾರೆ. ಅಲ್ಲಿ ಒಸಾಮನ ಹಿಂದೆ ಬಂಡೆಗಲ್ಲುಗಳು ಇದ್ದವು.

ಆಫ್ಘಾನಿಸ್ತಾನದಲ್ಲಿ ಕೆಲವು ವರ್ಷಗಳನ್ನು ಕಳೆದಿರುವ ಶ್ರೋಡರ್‌ನೆಬ್ರಾಸ್ಕ ವಿಶ್ವವಿದ್ಯಾಲಯದಲ್ಲಿ ಪ್ರೊಫೆಸರ್‌. ಒಸಾಮ ನಿಂತಿದ್ದ ಜಾಗೆಯಲ್ಲಿದ್ದುದು ಜಲಶಿಲೆ ಅಥವಾ ಪದರು ಗಲ್ಲು. ಇಂಥಾ ಶಿಲೆಗಳು ಆಫ್ಘನ್ನಿನ ಪಾಕ್ಟಿಯಾ ಹಾಗೂ ಪಕ್ಟಿಕಾ ಪ್ರದೇಶಗಳಲ್ಲಿ ಮಾತ್ರ ಲಭ್ಯ. ಶ್ರೋಡರ್‌ ಹೆಂಡತಿ ಟಿವಿಯಲ್ಲಿ ಒಸಾಮನ ಚಹರೆ ನೋಡುತ್ತಿದ್ದರೆ, ಶ್ರೋಡರ್‌- ‘ಗೊತ್ತಾಯ್ತು ! ಇವನು ಎಲ್ಲಿದ್ದಾನೆ ಅನ್ನೋದು ನನಗೆ ಗೊತ್ತಾಯ್ತು’ ಅಂತ ಕುಣಿದಾಡಿದರು.

ಆ ಪ್ರದೇಶಗಳಲ್ಲಿ ಪಶ್ತೂನರು ವಾಸವಾಗಿದ್ದಾರೆ ಎಂದು ಶ್ರೋಡರ್‌ ಹೇಳಿದ್ದಾರೆ. ಅವರ ಲೆಕ್ಕಾಚಾರವನ್ನು ಬ್ರಿಟಿಷ್‌ ಭೂಗರ್ಭಶಸ್ತ್ರಜ್ಞ ಅಲನ್‌ ರೋಜರ್ಸ್‌ ಕೂಡ ಸಮರ್ಥಿಸಿದ್ದಾರೆ. ಇದೀಗ ಮಿಲಿಟರಿ ಪಡೆಗಳಿಗೆ ಶ್ರೋಡರ್‌ ಮಾತನ್ನು ಗಂಭೀರವಾಗಿ ತೆಗೆದುಕೊಳ್ಳುವಂತೆ ಸೂಚಿಸಲಾಗುತ್ತಿದೆಯಂತೆ.

(ಎಎಫ್‌ಪಿ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+