Get Updates
Get notified of breaking news, exclusive insights, and must-see stories!

ಪಾಕಿಸ್ತಾನ ಕಪಟಿಯಲ್ಲ ಎಂದು ಅಮೆರಿಕಾ ಖಾತ್ರಿ ಮಾಡಲಿ-ಅಡ್ವಾಣಿ

ನವದೆಹಲಿ : ಭಯೋತ್ಪಾದಕತೆ ನಿರ್ನಾಮಕ್ಕೆ ಟೊಂಕ ಕಟ್ಟಿರುವ ದೇಶಗಳ ಪೈಕಿ ಒಂದಾಗಿರುವ ಪಾಕಿಸ್ತಾನ ಕಪಟ ನಾಟಕವಾಡುತ್ತಿಲ್ಲ ಎಂಬುದನ್ನು ಖಾತ್ರಿ ಪಡಿಸುವಂತೆ ಗೃಹ ಸಚಿವ ಎಲ್‌.ಕೆ.ಅಡ್ವಾಣಿ ಅಮೆರಿಕವನ್ನು ಆಗ್ರಹಿಸಿದ್ದಾರೆ.

ಉಗ್ರರ ಜಾಲಗಳನ್ನು ಬುಡ ಸಮೇತ ಕಿತ್ತೆಸೆಯಲು ಭಾರತ ಅಮೆರಿಕಾಗೆ ಪ್ರಾಮಾಣಿಕ ಬೆಂಬಲ ಸೂಚಿಸುತ್ತದೆ. ಆದರೆ ಪಾಕಿಸ್ತಾನದ ಕೆಲವು ಹುನ್ನಾರಗಳು ಅದರ ನಿಲುವಿನ ಬಗ್ಗೆ ಪ್ರಶ್ನೆಗಳನ್ನು ಹುಟ್ಟಿಸುತ್ತಿವೆ. ಒಸಾಮನನ್ನು ಸಲಹುತ್ತಿರುವ ತಾಲಿಬಾನ್‌ಗೆ ಪಾಕಿಸ್ತಾನದ ಐಎಸ್‌ಐ ಉಗ್ರರ ಬೆಂಬಲವಿದೆ. ಇದೇ ಸಂಘಟನೆ ಜಮ್ಮು- ಕಾಶ್ಮೀರ ಭಯೋತ್ಪಾದಕತೆಯ ರೂವಾರಿ ಎಂಬುದನ್ನು ನಾವು ಮರೆಯುವಂತಿಲ್ಲ ಎಂದು ಅಡ್ವಾಣಿ ಶುಕ್ರವಾರ ಸುದ್ದಿಗಾರರಿಗೆ ಹೇಳಿದರು.

ಭಯೋತ್ಪಾದಕತೆ ವಿರುದ್ಧ ಯುದ್ಧ ಹೂಡಲು ಮುಂದಾಗಿರುವ ದೇಶಗಳು ತಮ್ಮ ಬಳಗದಲ್ಲಿನ ದೇಶ ಆಡುವ ಮಾತಿಗೆ ಬದ್ಧವಾಗಿದ್ದು, ಉಗ್ರರಿಗೆ ನೀರೆರೆಯುತ್ತಿಲ್ಲವಷ್ಟೆ ಎಂಬುದನ್ನು ಗಂಭೀರವಾಗಿ ಅವಲೋಕಿಸಿ ಮುನ್ನಡೆಯಬೇಕು. ಇಲ್ಲವಾದರೆ ಉಗ್ರರ ಹೇಷಾರವ ಅಡಗಿಸುವುದು ಅಸಾಧ್ಯವಾದೀತು. ಅಮೆರಿಕಾ ಬೆಂಬಲವನ್ನೇ ಬಂಡವಾಳವಾಗಿಸಿಕೊಂಡು ಭಾರತದಲ್ಲಿ ಸೇನೆ ಬಿಡುವ ದುಸ್ಸಾಹಸಕ್ಕೆ ಪಾಕಿಸ್ತಾನ ಕೈಹಾಕದಂತೆ ನೋಡಿಕೊಳ್ಳಬೇಕು ಎಂದು ಅಡ್ವಾಣಿ ಎಚ್ಚರಿಕೆ ನೀಡಿದ್ದಾರೆ.

(ಎಎಫ್‌ಪಿ)

Post your views

ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+