ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಾಜಪೇಯಿ ಸ್ವಾಗತಕ್ಕೆ ಕಾತರಿಸುತ್ತಿರುವ ಬುಷ್‌- ವೈಟ್‌ಹೌಸ್‌

By Staff
|
Google Oneindia Kannada News

ವಾಷಿಂಗ್ಟನ್‌: ಅಮೆರಿಕಾದೊಂದಿಗೆ ವಿಶಾಲ ತಳಹದಿಯ ಮೇಲೆ ಭಾರತದ ಸಂಬಂಧ ರೂಪುಗೊಳ್ಳುವ ನಿರೀಕ್ಷೆಯ ಹಿನ್ನೆಲೆಯಲ್ಲಿ ಅಮೆರಿಕಾದ ಅಧ್ಯಕ್ಷ ಜಾರ್ಜ್‌ ಡಬ್ಲ್ಯೂ ಬುಷ್‌ ಭಾರತದ ಪ್ರಧಾನಿ ವಾಜಪೇಯಿ ಅವರ ಭೇಟಿಗೆ ಕಾತರಿಸುತ್ತಿರುವುದಾಗಿ ವೈಟ್‌ಹೌಸ್‌ ತಿಳಿಸಿದೆ. ಅಮೆರಿಕಾದ ವಿದೇಶಾಂಗ ಕಾರ್ಯದರ್ಶಿ ಕಾಲಿನ್‌ ಪೊವೆಲ್‌ರ ಯಶಸ್ವೀ ನವದೆಹಲಿ ಭೇಟಿಯ ನಂತರದ ಬೆಳವಣಿಗೆಯಿದು.

ನವಂಬರ್‌ 9 ರಂದು ವಾಜಪೇಯಿ ವಾಷಿಂಗ್ಟನ್‌ಗೆ ಅಧಿಕೃತ ಭೇಟಿ ನೀಡಲಿದ್ದಾರೆ. ಈ ಸಂದರ್ಭದಲ್ಲಿ ಅಂತರರಾಷ್ಟ್ರೀಯ ಭಯೋತ್ಪಾದಕತೆ ವಿರುದ್ಧದ ಆಂದೋಲನ ಕುರಿತು ಬುಷ್‌ ಹಾಗೂ ವಾಜಪೇಯಿ ಚರ್ಚಿಸುವರು ಎಂದು ವೈಟ್‌ಹೌಸ್‌ ವಕ್ತಾರ ಆಲಿ ಫ್ಲಿಶರ್‌ ತಿಳಿಸಿದ್ದಾರೆ.

ಸಮಾನಾವಕಾಶ ಕ್ಷೇತ್ರಗಳಲ್ಲಿ ಉಭಯ ದೇಶಗಳು ಒಟ್ಟಿಗೆ ದುಡಿಯಲು ವಾಜಪೇಯಿ ಅವರ ಭೇಟಿ ಅನುವು ಮಾಡಿಕೊಡುತ್ತದೆ. ರಕ್ಷಣೆ ಹಾಗೂ ಆರ್ಥಿಕ ವಿಷಯಗಳಿಗೆ ಸಂಬಂಧಿಸಿದ ಚರ್ಚೆಯೂ ಈ ಸಂದರ್ಭದಲ್ಲಿ ನಡೆಯಲಿದೆ ಎಂದು ಫ್ಲಿಶರ್‌ ಹೇಳಿದ್ದಾರೆ.

(ಪಿಟಿಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X