Get Updates
Get notified of breaking news, exclusive insights, and must-see stories!

ಲಷ್ಕರ್‌-ಇ-ತೊಯಿಬಾಗೆ ಪಾಕ್‌ ಇಂಟೆಲಿಜೆನ್ಸಿ ಹಾಗೂ ಒಸಾಮ ಬೆಂಬಲ

ಲಂಡನ್‌: ಕಾಶ್ಮೀರ ಕೊಳ್ಳದಲ್ಲಿ ಭಯೋತ್ಪಾದಕತೆಯನ್ನು ಸೃಷ್ಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಲಷ್ಕರ್‌-ಇ-ತೊಯಿಬಾ ಉಗ್ರರ ಸಂಘಟನೆಗೆ ಪಾಕಿಸ್ತಾನ ಮಿಲಿಟರಿ ಇಂಟೆಲಿಜೆನ್ಸ್‌ ಹಾಗೂ ಅಂತರರಾಷ್ಟ್ರೀಯ ಪಾತಕಿ ಒಸಾಮ ಬಿನ್‌ ಲ್ಯಾಡೆನ್‌ ಬೆಂಬಲ ಘೋಷಿಸಿರುವ ವಿಷಯ ಬಹಿರಂಗಗೊಂಡಿದೆ.

ಪ್ರಖ್ಯಾತ ತಂತ್ರ ಅಧ್ಯಯನ ಸಂಸ್ಥೆ (institute for strategic studies)ಯ ವರದಿ ಈ ವಿಷಯ ತಿಳಿಸಿದೆ. ಗುರುವಾರ ಬೆಳಗ್ಗೆ ಬಿಡುಗಡೆ ಮಾಡಲಾದ ಸಂಸ್ಥೆಯ ಇತ್ತೀಚಿನ ವರದಿ- ದಿ ಮಿಲಿಟರಿ ಬ್ಯಾಲೆನ್ಸ್‌ 2001-2002, ಕಾಶ್ಮೀರ ಕೊಳ್ಳದಲ್ಲಿನ ಲಷ್ಕರ್‌-ಇ-ತೊಯಿಬಾದ ಗೆರಿಲ್ಲಾ ಮಾದರಿಯ ಚಟುವಟಿಕೆಗಳಿಗೆ ಪಾಕಿಸ್ತಾನದ ಇಂಟೆಲಿಜೆನ್ಸ್‌ ಬೆಂಬಲ ನೀಡುತ್ತಿರುವುದನ್ನು ಸ್ಪಷ್ಟ್ಟಪಡಿಸಿದೆ.

ಜಮ್ಮು ಮತ್ತು ಕಾಶ್ಮೀರದಲ್ಲಿನ ಸ್ಥಳೀಯ ಜನತೆ ಶಾಂತಿ ಬಯಸುತ್ತಿರುವುದರಿಂದ, ಉಗ್ರರಿಗೆ ಸ್ಥಳೀಯ ಬೆಂಬಲ ದೊರಕುವುದು ಕಡಿಮೆಯಾಗುತ್ತಿದೆ. ಭಾರತದೊಟ್ಟಿಗೆ ಶಾಂತಿಯಿಂದ ಬಾಳಬೇಕೆಂದು ಬಯಸುವ ಮುಸ್ಲಿಂರ ಸಂಖ್ಯೆಯೂ ಗಣನೀಯ ಪ್ರಮಾಣದಲ್ಲಿ ಹೆಚ್ಚುತ್ತಿದೆ ಎಂದು ವರದಿ ತಿಳಿಸಿದೆ.

ಆಗ್ರಾ ಶೃಂಗಸಭೆ ಸಂದರ್ಭದಲ್ಲಿ ಭಾರತದ ಪ್ರಧಾನಿ ವಾಜಪೇಯಿ ಹಾಗೂ ಪಾಕಿಸ್ತಾನದ ಅಧ್ಯಕ್ಷ ಮುಷರ್ರಫ್‌ ಅವರು ಉಂಟು ಮಾಡಿದ ನಿರೀಕ್ಷೆ ದೊಡ್ಡದು, ಆದರೆ ಫಲಿತಾಂಶ ಮಾತ್ರ ನಿರಾಶೆ ಉಂಟು ಮಾಡುವಷ್ಟು ಕಡಿಮೆಯದು ಎಂದು 320 ಪುಟಗಳ ವರದಿ ಅಭಿಪ್ರಾಯಪಟ್ಟಿದೆ.

(ಪಿಟಿಐ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+