ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೀದರ್‌ನ ಎನಮ್ಹಂಚಿಗಳಾ ಹಳ್ಳಿಯಲ್ಲಿ ಗೋಡೆ ಕುಸಿದು ಇಬ್ಬರ ಸಾವು

By Staff
|
Google Oneindia Kannada News

ಬೀದರ್‌: ಇಲ್ಲಿನ ಎನಮ್ಹಂಚಿಗಳಾ ಹಳ್ಳಿಯಲ್ಲಿ ಮನೆಯಾಂದು ಕುಸಿದು ಬಿದ್ದುದರಿಂದ ಇಬ್ಬರು ವ್ಯಕ್ತಿಗಳು ಮೃತರಾಗಿರುವ ದುರ್ಘಟನೆ ಗುರುವಾರ ವರದಿಯಾಗಿದೆ.

ಮೃತ ಪಟ್ಟ ವ್ಯಕ್ತಿಗಳನ್ನು ಗಣಪತಿ ಮತ್ತು ಭಾರತಿ ಯಲ್ಲಪ್ಪ ಹರಿಜನ್‌ ಎಂದು ಗುರುತಿಸಲಾಗಿದೆ. ಎನಮ್ಹಂಚಿಗಳಾ ಹಳ್ಳಿಗೆ ಆಗಮಿಸಿದ್ದ ಗಣಪತಿ ಮೂಲತಃ ರೊಲ್ಲಿ ತಾಲ್ಲೂಕಿನ ನಿವಾಸಿ. ಊರಿಗೆ ಹೋಗುವ ಬಸ್ಸು ತಪ್ಪಿದ್ದರಿಂದ ತನ್ನ ಬಂಧುಗಳ ಮನೆಯಲ್ಲಿ ಉಳಿದುಕೊಳ್ಳಬೇಕಾಯಿತು. ಅಂದು ಮಧ್ಯರಾತ್ರಿ, ಮನೆಯ ಗೋಡೆ ಕುಸಿಯಿಲಾರಂಭಿಸಿತು. ಮನೆಯಾಕೆ ಭಾರತಿ, ಗಣಪತಿಯನ್ನು ಎಬ್ಬಿಸಿ ಹೊರಕ್ಕೆ ಬರುವಂತೆ ಹೇಳುತ್ತಿದ್ದಂತೆಯೇ ಕುಸಿದ ಗೋಡೆಯಡಿ ಇಬ್ಬರೂ ಸಮಾಧಿಯಾದರು.

ಮನೆಯಲ್ಲಿ ವಾಸಿಸುತ್ತಿದ್ದ ಭಾರತಿಯ ತಾಯಿ ಹಾಗೂ ಇಬ್ಬರು ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ. ಜಿಲ್ಲಾ ಎಸ್ಪಿ ಎಚ್‌. ಎನ್‌. ಸಿದ್ದಣ್ಣ , ಡೆಪ್ಯುಟಿ ಎಸ್ಪಿ ಪೂಂಗಮ್‌ ಘಟನೆ ನೀಡಿದ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಸ್ಥಳೀಯ ಪೊಲೀಸ್‌ ಸ್ಟೇಷನ್‌ನಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X