Get Updates
Get notified of breaking news, exclusive insights, and must-see stories!

ಒಸಾಮ ಬಿನ್‌ ಲ್ಯಾಡೆನ್‌ಗೆ ಸಿಎನ್‌ಎನ್‌ಕಳುಹಿಸಿರುವ 6 ಪ್ರಶ್ನೆಗಳು....

ನ್ಯೂಯಾರ್ಕ್‌ : ಒಸಾಮ ಬಿನ್‌ ಲ್ಯಾಡೆನ್‌ ಬಗ್ಗೆ ಇಷ್ಟೆಲ್ಲಾ ಸದ್ದು ಗದ್ದಲಗಳಾಗುತ್ತಿರುವಾಗ ಅವನದೊಂದು ಅಪರೂಪದ ಸಂದರ್ಶನ ಪಡೆದರೆ? ಈ ನಿಟ್ಟಿನಲ್ಲಿ ಮಾಧ್ಯಮಗಳು ಯೋಚಿಸಿ, ವಿಫಲ ಯತ್ನಗಳನ್ನು ನಡೆಸದೇ ಇದ್ದಿರುವುದಿಲ್ಲ. ಆದರೆ ಅವನು ಅಡಗಿರುವ ಅತಳ ಸುತಳ ಪಾತಾಳ ಹೊಕ್ಕು, ಕೆಣಕಿ- ಕೆದಕಿ, ಕಿಚಾಯಿಸಿ ಜೀವಸಹಿತ ಬಂದೇ ಬರಬಲ್ಲೆನೆಂಬ ಧೈರ್ಯ ಎಷ್ಟು ಜನಕ್ಕೆ ಇದ್ದೀತು? ಅಮೆರಿಕಾ ಮೇಲೆ ಉಗ್ರರ ದಾಳಿ ಆದಾಗಿನಿಂದ ಆಫ್ಘನ್‌ ನೆತ್ತಿ ಮೇಲೆ ಸರಬರ ವಿಮಾನಗಳು ಹಾರುತ್ತಾ ಬಾಂಬ್‌ ಉಗಿಯುತ್ತಿರುವ ಕ್ಷಣ ಕ್ಷಣದ ಚಿತ್ರಗಳ ಕಟ್ಟಿಕೊಡುತ್ತಿರುವ ಸಿಎನ್‌ಎನ್‌ಗೆ ಬಯಸದೇ ಇಂಥಾ ಅವಕಾಶ ಸಿಕ್ಕಿದೆ.

ವಾಷಿಂಗ್ಟನ್‌ ಪೋಸ್ಟ್‌ ವರದಿ ಮಾಡಿರುವಂತೆ ತನ್ನದೊಂದು ಸಂದರ್ಶನ ಪಡೆಯುವಂತೆ ಒಸಾಮನೇ ಇಷಾರೆ ಕೊಟ್ಟಿದ್ದಾನೆ. ಒಸಾಮನ ಸಂಘಟನೆ ಅಲ್‌- ಕ್ವೈದಾ ತನ್ನೊಡೆಯನ ಬಯಕೆಯನ್ನು ಅರಬ್‌ ಟೆಲಿವಿಷನ್‌ ಜಾಲ ಅಲ್‌- ಜರಿkುೕರಾ ಮುಖಾಂತರ ಸಿಎನ್‌ಎನ್‌ಗೆ ಮುಟ್ಟಿಸಿದೆ. ಇದೀಗ ಸಿಎನ್‌ಎನ್‌ 6 ಪ್ರಶ್ನೆಗಳ ಚೀಟಿಯಾಂದನ್ನು ಒಸಾಮನಿಗೆ ಕಳುಹಿಸಿ ಕೊಟ್ಟಿದೆ.

ಒಸಾಮನಿಗೆ ಸಿಎನ್‌ಎನ್‌ ಕಳುಹಿಸಿಕೊಟ್ಟಿರುವ ಪ್ರಶ್ನಾವಳಿಗಳು ಇಂತಿವೆ...

ಸೆಪ್ಟೆಂಬರ್‌ 11ರ ವಿಮಾನ ಅಪಹರಣ ಮತ್ತು ಈಚಿಗಿನ ಆ್ಯಂಥ್ರಾಕ್ಸ್‌ ದಾಳಿಯಲ್ಲಿ ನಿಮ್ಮ ಹಾಗೂ ಅಲ್‌- ಕ್ವೈದಾ ಪಾತ್ರವೇನು?

ಹೈಜಾಕರ್‌ಗಳಿಗೆ ಅಲ್‌- ಕ್ವೈದಾ ನೆರವು ನೀಡಿದ್ದು ಯಾವ ರೀತಿಯಲ್ಲಿ ? ಹಣ ಕೊಟ್ಟಿತೋ ಅಥವಾ ತರಪೇತಿ ನೀಡಿತೋ?

ನಿಮ್ಮ ಹಾಗೂ ನಿಮ್ಮ ಸಹಚರರ ಬಳಿ ರಾಸಾಯನಿಕ, ಅಣು ಅಥವಾ ಜೈವಿಕ ಶಸ್ತ್ರಗಳೇನಾದರೂ ಇವೆಯಾ? ಅದನ್ನು ಬಳಸುವ ಯೋಚನೆ ಇದೆಯಾ?

ಇಸ್ಲಾಂ ಧರ್ಮದಲ್ಲಿ ದಾಳಿಗಳನ್ನು ಸಮರ್ಥಿಸಿಕೊಳ್ಳುವಂಥಾ ಯಾವುದೇ ಉಲ್ಲೇಖ ಇಲ್ಲ ಎಂದು ಮುಸ್ಲಿಂ ಮತ್ತು ಅರಬ್‌ ನಾಯಕರು ಅಭಿಪ್ರಾಯ ಪಟ್ಟಿದ್ದಾರೆ. ಇದಕ್ಕೆ ನಿಮ್ಮ ಪ್ರತಿಕ್ರಿಯೆ ಏನು?

ಎಷ್ಟೊಂದು ಅಮಾಯಕರನ್ನು ನೀವು ಮತ್ತು ನಿಮ್ಮ ಅನುಯಾಯಿಗಳು ಕೊಂದಿದ್ದೀರಿ. ಅದಕ್ಕೆ ಸಮರ್ಥನೆ ಇದೆಯಾ?

ಈ ಪ್ರಶ್ನೆಗಳಿಗೆ ಲ್ಯಾಡೆನ್‌ ವಿಡಿಯೋ ಕೆಸೆಟ್‌ ಮೂಲಕ ಉತ್ತರ ಕೊಡಲಿದ್ದಾನೆ ಎಂದು ಸಿಎನ್‌ಎನ್‌ ಹೇಳಿಕೊಂಡಿದೆ ಎಂದು ವಾಷಿಂಗ್ಟನ್‌ ಪೋಸ್ಟ್‌ ಪ್ರಕಟಿಸಿದೆ.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+