ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಗ್ರಾದ ತಾಜ್‌ಮಹಲಿನಲ್ಲಿ ವಿದೇಶೀ ಪ್ರವಾಸಿಗರಗಲಗಲ ಸದ್ದಿಲ್ಲ

By Staff
|
Google Oneindia Kannada News

Tajmahalಆಗ್ರಾ: ಪ್ರತಿವರ್ಷವೂ ಅಕ್ಟೋಬರ್‌ ತಿಂಗಳಿನಲ್ಲಿ ವೀಕ್ಷಕರಿಂದ ಗಿಜಿಗುಡುತ್ತಿದ್ದ ತಾಜ್‌ಮಹಲ್‌ನಲ್ಲಿ ಈ ಬಾರಿ ವೀಕ್ಷಕರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ.

ಪ್ರವಾಸೋದ್ಯಮ ಇಲಾಖೆಯ ಆಗ್ರಾ ವರದಿ ಪ್ರಕಾರ ಅಮೆರಿಕನ್ನರು ಆಫ್ಘಾನಿಸ್ತಾನದ ಮೇಲೆ ಬಾಂಬ್‌ ದಾಳಿ ಆರಂಭಿಸಿದ ನಂತರ ತಾಜ್‌ ಮಹಲಿಗೆ ಬರುವ ಪ್ರವಾಸಿಗರ ಸಂಖ್ಯೆ ಮೂರನೇ ಎರಡರಷ್ಟು ಕಡಿಮೆಯಾಗಿದೆ. ಸಾಮಾನ್ಯವಾಗಿ ಅತ್ತ ಮಳೆಗಾಲವೂ ಅಲ್ಲದ ಇತ್ತ ಸುಡು ಬಿಸಿಲ ಕಾಲವೂ ಅಲ್ಲದ ಅಕ್ಟೋಬರ್‌ನಲ್ಲಿ ಅತೀ ಹೆಚ್ಚು ಮಂದಿ ಪ್ರವಾಸಿಗರು ತಾಜ್‌ಮಹಲ್‌ನೋಡಲು ಬರುತ್ತಾರೆ. ಆದರೆ ಈ ವರ್ಷ ತಾಜ್‌ನಗರದಲ್ಲಿ ಪ್ರವಾಸಿಗರ ಸಂಖ್ಯೆ ತೀರಾ ಕಡಿಮೆಯಾಗಿದೆ ಎಂದು ಆಗ್ರಾದ ಪ್ರಮುಖ ವಸತಿಗೃಹ ಕಾಂತ್‌ ಹೋಟೆಲ್ಸ್‌ನ ಮಾಲಿಕ ಅತುಲ್‌ ಕಾಂತ್‌ ಗುಪ್ತಾ ಹೇಳುತ್ತಾರೆ.

ತಾಜ್‌ಮಹಲಿಗೆ ಬರುವ ಪ್ರವಾಸಿಗರಲ್ಲಿ ಹೆಚ್ಚಿನವರು ವಿದೇಶೀಯರು. ಅವರೆಲ್ಲ ಮುಂಚಿತವಾಗಿಯೇ ವಸತಿಗೃಹಗಳನ್ನು ಬುಕ್‌ ಮಾಡಿ ಆಗ್ರಾಕ್ಕೆ ಬರುತ್ತಿದ್ದರು. ಅಮೆರಿಕಾ ದಾಳಿಯ ಪರಿಣಾಮವಾಗಿ ಆಗ್ರಾಕ್ಕೆ ಆಗಮಿಸಬೇಕಿದ್ದ ಶೇ 65 ವಿದೇಶಿ ಪ್ರವಾಸಿಗರು ಹೋಟೆಲ್‌ ಬುಕಿಂಗ್‌ನ್ನು ಕ್ಯಾನ್ಸಲ್‌ ಮಾಡಿಸಿಕೊಂಡಿರುವುದಾಗಿ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳು ಹೇಳುತ್ತಾರೆ.

ರಾಜಧಾನಿ ದೆಹಲಿಗೆ 200 ಕಿಲೋಮೀಟರ್‌ ದೂರಲ್ಲಿರುವ ಆಗ್ರಾದಲ್ಲಿ ಶಹಜಹಾನ್‌ನ ಪ್ರೇಮ ದ್ಯೋತಕ ತಾಜ್‌ಮಹಲ್‌ ಮಾತ್ರವಲ್ಲದೆ, ಇನ್ನೆರಡು ವಿಶ್ವ ಸ್ಮಾರಕಗಳಿವೆ. ಅವು ಆಗ್ರಾ ಕೋಟೆ ಮತ್ತು ಫತ್ತೇಪುರ್‌ ಸಿಕ್ರಿ. ಸುಮಾರು 8 ಲಕ್ಷ ಪ್ರವಾಸಿಗರು ಈ ಸ್ಥಳಗಳಿಗೆ ಭೇಟಿ ಕೊಡುತ್ತಾರೆ. ಈ ಮೂಲಕ ಪ್ರವಾಸೋದ್ಯಮ ಇಲಾಖೆಗೆ ಅಂದಾಜು 32 ಬಿಲಿಯನ್‌ ರೂಪಾಯಿ ಲಾಭ ದಕ್ಕುತ್ತಿತ್ತು.

ಆಫ್ಘಾನಿಸ್ತಾನದ ವಿಮಾನಗಳು ತಾಜ್‌ಮಹಲ್‌ಮೇಲೆ ಬಾಂಬ್‌ ಹಾಕಬಹುದೆನ್ನುವ ಭೀತಿ ಆಗ್ರಾದ ಹೋಟೆಲಿಗರನ್ನು ಕಾಡುತ್ತಿದೆ. ಮನಸ್ಸಿನಲ್ಲಿ ಮತ್ತು ದೇಶದಲ್ಲಿ ಶಾಂತಿಯಿದ್ದಾಗ ಮಾತ್ರ ಪ್ರವಾಸೋದ್ಯಮ ಬೆಳೆಯುತ್ತದೆ. ಪ್ರವಾಸೋದ್ಯಮ ಕ್ಷೇತ್ರವೆಂಬುದೇ ಅತ್ಯಂತ ಸೂಕ್ಷ್ಮ ಉದ್ಯಮ ಎಂದು ಆಗ್ರಾದ ವಿದೇಶೀ ಪ್ರವಾಸ ಮತ್ತು ಮಾರಾಟ ವ್ಯವಹಾರಗಳ ಸಂಘಟನೆಯ ಸಂಯೋಜಕ ಪ್ರಹ್ಲಾದ್‌ ಅಗರವಾಲ್‌ ಅಭಿಪ್ರಾಯಪಡುತ್ತಾರೆ.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X