ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೈದರಾಬಾದ್‌ ಕರ್ನಾಟಕದಲ್ಲಿ ಮಕ್ಕಳ ಸಾಹಿತ್ಯ ಕಮ್ಮಟ

By Staff
|
Google Oneindia Kannada News

ಪುತ್ತೂರು : ಹೈದರಾಬಾದ್‌ ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ಮಕ್ಕಳ ಸಾಹಿತ್ಯ ಕಮ್ಮಟವನ್ನು ಏರ್ಪಡಿಸಲು ಕರ್ನಾಟಕ ಸಾಹಿತ್ಯ ಅಕಾಡೆಮಿ ನಿರ್ಧರಿಸಿದೆ.

ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಡಾ. ಗುರುಲಿಂಗ ಕಾಪಸೆ ಗುರುವಾರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು. ಗಡಿನಾಡಿನಲ್ಲಿ ನಡೆಯುವ ಈ ಕಾರ್ಯಕ್ರಮದ ಉದ್ದೇಶ ಭಾಷೆ ಮತ್ತು ಸಂಸ್ಕೃತಿಯ ವಿನಿಮಯ. ಇದೇ ದೃಷ್ಟಿಯಿಟ್ಟುಕೊಂಡು ಗಡಿ ಪ್ರದೇಶಗಳಲ್ಲಿ ಮಲಯಾಳಂ, ತೆಲುಗು, ಮರಾಠಿ ಭಾಷಾ ಸಾಹಿತ್ಯಿಕ ಚಟುವಟಿಕೆಗಳನ್ನೂ ನಡೆಸುವ ಉದ್ದೇಶ ಅಕಾಡೆಮಿಗಿದೆ.

ಇದಲ್ಲದೆ 20ನೇ ಶತಮಾನದ ಸಾಹಿತ್ಯದ ಕುರಿತು 8 ಸಂಪುಟಗಳ ಗ್ರಂಥವೊಂದನ್ನು ಬಿಡುಗಡೆ ಮಾಡಲು ಅಕಾಡೆಮಿ ಎಲ್ಲ ಸಿದ್ಧತೆಗಳನ್ನೂ ನಡೆಸುತ್ತಿದೆ. ಕನ್ನಡ ಸಾಹಿತ್ಯ ಅಕಾಡೆಮಿ ಜನತೆಯ ಅಕಾಡೆಮಿಯಾಗಬೇಕು. ಈ ನಿಟ್ಟಿನಲ್ಲಿ ನಾವು ಕಾರ್ಯಪ್ರವೃತ್ತರಾಗಿದ್ದೇವೆ ಎಂದು ಕಾಪಸೆ ಅಭಿಪ್ರಾಯಪಟ್ಟರು.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X