Get Updates
Get notified of breaking news, exclusive insights, and must-see stories!

ಒಸಾಮನ ಶಿಕಾರಿಗೆ ಎರಡು ವರ್ಷ ಬೇಕಾಗಬಹುದು- ಬುಷ್‌

ಒಸಾಮ ಹಾಗೂ ಆತನ ಉಗ್ರಗಾಮಿ ಜಾಲವನ್ನು ಮಟ್ಟ ಹಾಕಲು ಇನ್ನು ಒಂದು ಅಥವಾ ಎರಡು ವರ್ಷದ ಅವಧಿ ಬೇಕಾದೀತು. ಆದರೆ ಕಳೆದ ಐದು ದಿನಗಳಿಂಗ ಆಫ್ಘಾನಿಸ್ತಾನದ ಮೇಲೆ ನಾವು ಬಾಂಬ್‌ ದಾಳಿ ನಡೆಸಿರುವುದು ಒಸಾಮನನ್ನು ಮಟ್ಟ ಹಾಕುವ ಹಾದಿಯಲ್ಲಿ ಸಾಕಷ್ಟು ಉಪಯುಕ್ತವಾಗಿದೆ ಎಂದು ಅಮೆರಿಕಾ ಅಧ್ಯಕ್ಷ ಜಾರ್ಜ್‌ ಡಬ್ಲ್ಯು ಬುಷ್‌ ಶುಕ್ರವಾರ ತಿಳಿಸಿದ್ದಾರೆ.

ಸೆಪ್ಟೆಂಬರ್‌ 11ರ ನಂತರ ಇದೇ ಮೊದಲ ಬಾರಿಗೆ ಶ್ವೇತಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ಬುಷ್‌, ಒಸಾಮ ಬದುಕಿದ್ದಾನೋ, ಸತ್ತಿದ್ದಾನೋ ಗೊತ್ತಿಲ್ಲ. 5 ಸಾವಿರ ಅಮಾಯಕರ ಸಾವಿಗೆ ಕಾರಣವಾಗಿದ್ದಾನೆ ಎಂದು ನಂಬಲಾಗಿರುವ ಆ ಪಾತಕಿಯನ್ನು ನ್ಯಾಯಾಂಗಕ್ಕೆ ಒಪ್ಪಿಸುವುದು ನಮ್ಮ ಉದ್ದಿಶ್ಯ ಎಂದರು.

ಪ್ರಾಯಶಃ ಇನ್ನು ನಮ್ಮ ಮೇಲೆ ದಾಳಿ ಮಾಡುವ ದುಸ್ಸಾಹಸಕ್ಕೆ ಭಯೋತ್ಪಾದಕರು ಕೈಹಾಕುವುದಿಲ್ಲ. ಹಾಗಂತ ನಾವು ಸುಮ್ಮನೆ ಕೂತಿಲ್ಲ. ಪಾಪಿಗಳ ಮನಸ್ಸು ಸದಾ ಕೇಡು ಬಯಸುತ್ತದೆ. ನಮ್ಮ ಬೇಹುಗಾರಿಕಾ ದಳಗಳು ಮೈಯೆಲ್ಲಾ ಕಣ್ಣಾಗಿಸಿಕೊಂಡಿದ್ದು, ಯಾವುದಾದರೂ ಕಟ್ಟಡದ ಮೇಲೆ ದಾಳಿ ನಡೆಯುವ ಸೂಚನೆ ಸಿಕ್ಕಿದರೂ ನಾಗರಿಕರಿಗೆ ಸಂಪೂರ್ಣ ರಕ್ಷಣೆ ಒದಗಿಸುತ್ತೇವೆ ಎಂದು ಭರವಸೆ ಕೊಟ್ಟರು.

ಒಸಾಮ ಅಂಡ್‌ ಕಂಪನಿಯನ್ನು ಈಗಲೂ ನಮಗೆ ಒಪ್ಪಿಸಲಿ. ಆಗ ಆಫ್ಘಾನಿಸ್ತಾನದ ಮೇಲಿನ ದಾಳಿಯನ್ನು ನಿಲ್ಲಿಸುತ್ತೇವೆ. ತಾಲಿಬಾನ್‌ ಸರ್ಕಾರ ಪತನವಾಗುವ ದಿನ ಹತ್ತಿರಾಗುತ್ತಿದೆ. ಅಮೆರಿಕಾ ನೇತೃತ್ವದ ಮಿಲಿಟರಿ ದಾಳಿಯ ಉದ್ದಿಶ್ಯ ಈಡೇರಿದ ನಂತರ ವಿಶ್ವಸಂಸ್ಥೆ ಸಹಾಯದಿಂದ ಆಫ್ಘಾನಿಸ್ತಾನದಲ್ಲಿ ಹೊಸ ಸರ್ಕಾರ ರಚಿಸಲಾಗುವುದು. ಜೊತೆಗೆ ಅಲ್‌-ಖೈದಾ ಸಂಘಟನೆಗಳ ಜಾಗತಿಕ ಶೋಧ ನಡೆದಿದ್ದು, ಅವುಗಳನ್ನೂ ಮಟ್ಟಹಾಕಲಾಗುವುದು ಎಂದು ಬುಷ್‌ ಹೇಳಿದರು.

(ಏಜೆನ್ಸೀಸ್‌)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+