ಏಡ್ಸ್ಗೆ ಕಡಿವಾಣ : ಎಚ್ಐವಿ ಪ್ರಶ್ನೆಗೆ ಜಿಬಿ ವೈರಸ್ ಸಿ ಎಂಬ ಉತ್ತರ
ಉಡುಪಿ : ಏಡ್ಸ್ಗೆ ಕಾರಣವಾದ ಎಚ್ಐವಿ ಪ್ರಮಾಣ ತಗ್ಗಿಸಬಲ್ಲ ಇನ್ನೊಂದು ವೈರಸ್ ಇದೆ ಅನ್ನೋದು ನಿಮಗೆ ಗೊತ್ತೆ ? ಅದರ ಹೆಸರು ಜಿಬಿ ವೈರಸ್ ಸಿ.
ಯೂನಿವರ್ಸಿಟಿ ಆಫ್ ಇಯೋವಾ ಹಾಗೂ ಜರ್ಮನಿಯ ಹ್ಯಾನೋವರ್ ಮೆಡಿಕಲ್ ಸ್ಕೂಲ್ನಲ್ಲಿ ನಡೆಸಿರುವ ಹೊಸ ಅಧ್ಯಯನದಿಂದ ಎಚ್ಐವಿ ಪ್ರಮಾಣ ತಗ್ಗಿಸಲು ಸಾಧ್ಯವಿದೆ ಅನ್ನೋದು ಪತ್ತೆಯಾಗಿದೆ. ಈ ಎರಡೂ ಕಡೆ 560 ಏಡ್ಸ್ ಪೀಡಿತರ ದೇಹಕ್ಕೆ ಜಿಬಿ ವೈರಸ್ ಸಿ ಸೋಂಕು ತಗಲುವಂತೆ ಮಾಡಿದ ನಂತರ ಎಚ್ಐವಿ ಪ್ರಮಾಣ ಪ್ರತಿಶತ 99ರಷ್ಟು ಕಡಿಮೆಯಾಗಿದೆ!
ಹಳದಿ ಜ್ವರ, ಹೆಪಟೈಟಿಸ್ ಸಿ ಹಾಗೂ ಡೆಂಗ್ಯೂ ವರ್ಗಕ್ಕೇ ಸೇರುವ ಜಿಬಿ ವೈರಸ್ ಸಿ, ಏಡ್ಸ್ಗೆ ಕಾರಣವಾದ ವೈರಾಣುಗಳ ವೇಗಕ್ಕೆ ಕಡಿವಾಣ ಹಾಕಬಲ್ಲುದೇ ಎಂಬ ಸಂಶೋಧನೆಯೂ ಆಕಸ್ಮಿಕವಾಗಿಯೇ ನಡೆದದ್ದು. ಆದರೆ ಫಲಿತಾಂಶ ಒಳ್ಳೆಯದಾಗಿದೆ. ಜೊತೆಗೆ ಜಿಬಿ ವೈರಸ್ ಸಿಯಿಂದ ಬೇರೆ ಯಾವುದೇ ತೊಂದರೆಯಾಗುವುದಿಲ್ಲ ಎಂದೂ ತಿಳಿದುಬಂದಿದೆ.
ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ (ಮಾಹೆ) ನ ಉಪ ಕುಲಪತಿ ಹಾಗೂ ಹೆಸರಾಂತ ದೈಹಿಕ ತಜ್ಞ ಪ್ರೊ.ಬಿ.ಎಂ.ಹೆಗಡೆ ಉಡುಪಿಯಲ್ಲಿ ಇತ್ತೀಚೆಗೆ ಈ ಮಹತ್ವದ ವಿಷಯ ತಿಳಿಸಿದರು.
(ಇನ್ಫೋ ವಾರ್ತೆ)
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications