ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಕ್ಟೋಬರ್‌ 10ರಂದು ಕಾರಂತ ಜನ್ಮ ಶತಾಬ್ದಿ ವರ್ಷಾಚರಣೆ ಉದ್ಘಾಟನೆ

By Staff
|
Google Oneindia Kannada News

ಪುತ್ತೂರು: ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿ ದಿವಂಗತ ಡಾ. ಕೆ. ಶಿವರಾಮ ಕಾರಂತ ಅವರು ಜನಿಸಿ ಅಕ್ಟೋಬರ್‌ 10ಕ್ಕೆ ತೊಂಬತ್ತೊಂಬತ್ತು ವರ್ಷಗಳು ತುಂಬಲಿದ್ದು, ಈ ವರ್ಷವನ್ನು ಕಾರಂತ ಜನ್ಮಶತಾಬ್ದ ವರ್ಷವಾಗಿ ಆಚರಿಸಲು ಪುತ್ತೂರಿನ ವಿವೇಕಾನಂದ ಕಾಲೇಜು ಶಿವರಾಮ ಕಾರಂತ ಅಧ್ಯಯನ ಕೇಂದ್ರನಿರ್ಧರಿಸಿದೆ.

ಜನ್ಮ ಶತಾಬ್ದಿ ಸಮಾರಂಭವನ್ನು ಅಕ್ಟೋಬರ್‌ 10ರಂದು ವಿವೇಕಾನಂದ ಕಾಲೇಜು ಸಭಾಂಗಣದಲ್ಲಿ ಕವಿ ಡಾ। ಎನ್‌. ಎಸ್‌. ಲಕ್ಷ್ಮೀನಾರಾಯಣ ಭಟ್ಟ ಉದ್ಘಾಟಿಸುವರು. ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ। ಗುರುಲಿಂಗ ಕಾಪಸೆ ಅಧ್ಯಕ್ಷತೆ ವಹಿಸುವರು.
ಈ ಸಂದರ್ಭದಲ್ಲಿ ಕೇಂದ್ರದ ಪ್ರಕಟಣೆಗಳಾದ ಕುರಾಡಿ ಸೀತಾರಾಮ ಅಡಿಗರು ಬರೆದ ಕಾರಂತರ ಜೀವನ ಚರಿತ್ರೆ ‘ಬದ್ಧತೆಯ ಬದುಕು’ ಮತ್ತು ಬೋಳಂತಕೋಡಿ ಈಶ್ವರ ಭಟ್‌ ಸಂಪಾದಿಸಿದ ಕಾರಂತ ಕುರಿತ ಕವನ ಸಂಕಲನ ‘ಕಾವ್ಯಕಾರಂತ’ ಪುಸ್ತಕಗಳನ್ನು ಸಾಹಿತಿ ಡಾ। ಜಯಪ್ರಕಾಶ ಮಾವಿನಕುಳಿ ಅನಾವರಣಗೊಳಿಸಲಿದ್ದಾರೆ. ವನ್ಯಜೀವಿ ಛಾಯಾಗ್ರಾಹಕ ಮಂಜುನಾಥ ಹೆಗಡೆ ಹೊಸಬಾಳೆ ಅವರು ಸಂಪಾದಿಸಿರುವ ವನ್ಯಜೀವಿಗಳ ಭಾವಚಿತ್ರಗಳನ್ನೊಳಗೊಂಡ ‘‘ಶುಭಾಶಯಪತ್ರ’’ಗಳನ್ನು ಮಂಗಳೂರು ಎಲೋಸಿಯಸ್‌ ಕಾಲೇಜು ಪ್ರಾಂಶುಪಾಲ ರೆ।ಫಾ।ಡಾ। ಪ್ರಶಾಂತ್‌ ಮಾಡ್ತಾ ಬಿಡುಗಡೆಗೊಳಿಸುವರು.
ಕಾರಂತ ಭಾವಪ್ರಪಂಚ
ಅದೇ ದಿನದಂದು ಪುತ್ತೂರು ಟೌನ್‌ ಬ್ಯಾಂಕ್‌ ಸಭಾಂಗಣದಲ್ಲಿ ಛಾಯಾಗ್ರಾಹಕ ಯಜ್ಞ ಮಂಗಳೂರು ಕ್ಲಿಕ್ಕಿಸಿರುವ ಡಾ। ಕಾರಂತರ ಅಪೂರ್ವ ಭಾವಚಿತ್ರಗಳ ಪ್ರದರ್ಶನವನ್ನು ಮಂಜುನಾಥ ಹೆಗಡೆ ಹೊಸಬಾಳೆ ಉದ್ಘಾಟಿಸಲಿದ್ದಾರೆ. ಅಕ್ಟೋಬರ್‌ 10, 11 ಮತ್ತು 12ರಂದು ಈ ಪ್ರದರ್ಶನ ಸಾರ್ವಜನಿಕರಿಗಾಗಿ ತೆರೆದಿರುತ್ತದೆ.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X