• search
For Quick Alerts
ALLOW NOTIFICATIONS  
For Daily Alerts

  ಇದೋ ಬಂದಿದೆ! dot INFOdomain name

  By Staff
  |

  ನವದೆಹಲಿ : ಡೊಮೈನ್‌ ಹೆಸರುಗಳನ್ನು ನೋಂದಣಿ ಮಾಡಿಕೊಡುವಲ್ಲಿ ಭಾರತದಲ್ಲೇ ಮೊದಲ ಸ್ಥಾ ನದಲ್ಲಿರುವ ಹಾಗೂ ದಕ್ಷಿಣ ಏಷ್ಯಾದ ಏಕೈಕ ದೊಡ್ಡ ಡೊಮೈನ್‌ ನೇಮ್‌ ರಿಜಿಸ್ಟ್ರೇಷನ್‌ ಕಂಪನಿಯಾದ Net4India ಇದೀಗ ಡಾಟ್‌ಇನ್ಫೋ ಡೊಮೈನ್‌ ನೇಮ್‌( dot INFO domain name) ಸೇವೆಗಳನ್ನು (650 ರು.ಶುಲ್ಕದಲ್ಲಿ) ತನ್ನ ಗ್ರಾಹಕರಿಗೆ ಒದಗಿಸುವ ಮೂಲಕ ಮತ್ತೊಂದು ಮೈಲುಗಲ್ಲು ಸಾಧಿಸಿದೆ.

  ಡಾಟ್‌ಕಾಂ, ಡಾಟ್‌ನೆಟ್‌ ಹಾಗೂ ಡಾಟ್‌ಓಆರ್‌ಜಿಗಳ ನಂತರ ಇನ್ಫೋ ಮೇಲ್ದರ್ಜೆಯ ಡೊಮೈನ್‌ ಎನಿಸಿಕೊಂಡಿದೆ. ಕಂಪನಿಗಳು ಹಾಗೂ ವ್ಯಕ್ತಿಗಳಿಗೆ ಮಾಹಿತಿಯ ವರ್ಗೀಕರಣವನ್ನು ಬದಲಿಸುವಲ್ಲಿ ಇನ್ಫೋ ಅತ್ಯುಪಯುಕ್ತ. ಡಾಟ್‌ಕಾಂ, ಡಾಟ್‌ನೆಟ್‌ ಹಾಗೂ ಡಾಟ್‌ಓಆರ್‌ಜಿಗಳಲ್ಲಿ ಲಭ್ಯವಿಲ್ಲದ ಡೊಮೈನ್‌ಗಳನ್ನು ಬಯಸುವ ಕಾರ್ಪೊರೇಟ್‌ಗಳಿಗೂ, ಡೊಮೈನ್‌ಗಳನ್ನು ಬುಕ್‌ ಮಾಡಲು ಇನ್ಫೋ ಅವಕಾಶ ಕಲ್ಪಿಸಿದೆ. ಮೊದಲು ಬಂದವರಿಗೆ ಮೊದಲು ಎನ್ನುವ ಧೋರಣೆ ನೆಟ್‌4ಇಂಡಿಯಾದು. ಡಾಟ್‌ಬಿಜ್‌, ಡಾಟ್‌ನೇಮ್‌, ಡಾಟ್‌ಕೊ-ಆಪ್‌, ಡಾಟ್‌ಪ್ರೊ, ಡಾಟ್‌ಮ್ಯೂಸಿಯಂ ಹಾಗೂ ಡಾಟ್‌ಏರೋ ವಿಭಾಗಗಳಲ್ಲೂ ಡೊಮೈನ್‌ಗಳು ಲಭ್ಯ.

  ಕಂಪನಿಗಳಿಗೆ ಮಾತ್ರವಲ್ಲ ಗ್ರಾಹಕರಿಗೂ ಉಪಯೋಗಿ

  ಅಂತರ್ಜಾಲದ ನಂತರದ ಸಾಧ್ಯತೆಗಳ ಹಿನ್ನೆಲೆಯಲ್ಲಿ ಜಾಗತಿಕ ಗ್ರಾಹಕರಿಗೆ ಡಾಟ್‌ಇನ್ಫೋ ಒಂದು ಹೊಸ ಅವಕಾಶ ಎನ್ನುವುದು ನೆಟ್‌4ಇಂಡಿಯಾ ಸಿಇಓ ಜಸ್‌ಜಿತ್‌ ಸಹ್ವಾನಿ ಅಭಿಪ್ರಾಯ. ಇಂಟರ್ನೆಟ್‌ ವರ್ಗೀಕರಣದಲ್ಲಿ ಮಹತ್ವದ ಪಾತ್ರ ವಹಿಸುವ ಡಾಟ್‌ಇನ್ಫೋ ಮಾಹಿತಿಯನ್ನು ಹೊಂದುವಲ್ಲಿ ಗ್ರಾಹಕರಿಗೂ ಉಪಯುಕ್ತ . ಪ್ರಸಕ್ತ ವರ್ಷವೇ 2 ಲಕ್ಷ ಡೊಮೈನ್‌ ನೇಮ್‌ಗಳ ಕೋರಿಕೆಯ ನಿರೀಕ್ಷೆಯಿದ್ದು, ಅದರಲ್ಲಿ ಇನ್ಫೋ ಪಾಲು ಪ್ರತಿಶತ 15 ರಷ್ಟಿರುತ್ತದೆ.

  2001 ರ ಕೊನೆಯಲ್ಲಿ ವಿಶ್ವಾದ್ಯಂತ 40 ಮಿಲಿಯನ್‌ ಡೊಮೈನ್‌ ನೇಮ್‌ಗಳ ಬೇಡಿಕೆ ಒದಗುವ ಸಾಧ್ಯತೆಯಿದೆ. ವೆಬ್‌ನಲ್ಲಿ ತಮ್ಮ ಬ್ರಾಂಡ್‌ಗಳನ್ನು ರಕ್ಷಿಸಿಕೊಳ್ಳಲು ಎರಡು ಡೊಮೈನ್‌ಗಳನ್ನು ಕಂಪನಿಗಳು ಪಡೆಯುತ್ತಿರುವ ವಿಷಯ ಕೂಡ ಈ ನಿರೀಕ್ಷೆಗೆ ಪೂರಕವಾಗಿಯೇ ಇದೆ. ಏಳು ನೂತನ ಟಿಎಲ್‌ಡಿಗಳನ್ನು ಐಸಿಎಎನ್‌ಎನ್‌ ಮಂಜೂರು ಮಾಡಿದೆ ಎನ್ನುತ್ತಾರೆ ಜಸ್‌ಸಿತ್‌.

  ಕ್ಲಿಕ್ಕಿಸಿ, ಅರ್ಜಿ ತುಂಬಿ

  ಇನ್ಫೋ 2 ವರ್ಷಗಳ ಅವಧಿಗೆ ಬುಕ್‌ ಮಾಡಲಾಗುತ್ತದೆ. www.net4domains.com ನಲ್ಲಿ ಆನ್‌ಲೈನ್‌ ಅರ್ಜಿಯನ್ನು ತುಂಬುವ ಮೂಲಕ ಬುಕ್‌ ಮಾಡಬಹುದು. ಈ ಪ್ರಕ್ರಿಯೆ 24 ಗಂಟೆ ತೆಗೆದುಕೊಳ್ಳುತ್ತದೆ. ಅಂದಹಾಗೆ, ನೆಟ್‌4ಇಂಡಿಯಾ, ಯುಕೆ ಮೂಲದ ಸೆಹ್ವಾನಿ ಗ್ರೂಪ್‌ ಆಫ್‌ ಕಂಪನಿಗಳಲ್ಲಿ ಒಂದಂಗ. 1999 ರಲ್ಲಿ ಭಾರತಕ್ಕೆ ಕಾಲಿಟ್ಟ ಈ ಕಂಪನಿ ಬೆಂಗಳೂರು ಸೇರಿದಂತೆ ದೆಹಲಿ, ಮುಂಬಯಿ, ಚೆನ್ನೈ, ಪುಣೆ ಹಾಗೂ ಹೈದರಾಬಾದ್‌ಗಳಲ್ಲೂ ತನ್ನ ಜಾಲವನ್ನು ಹೊಂದಿದೆ.

  ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ-
  Mr. Uday Sodhi

  Net4India
  B4/47 Safdurjung Enclave
  New Delhi
  Ph:0116104227/ 6104252
  Uday.s@net4india.com

  Ms. Suchitra/Shveta
  20:20 MEDIA
  B4/45 Safdurjung Enclave
  New Delhi
  Ph:0116196144
  Suchitra@2020india.com

  (ಇನ್ಫೋ ವಾರ್ತೆ)

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more