Get Updates
Get notified of breaking news, exclusive insights, and must-see stories!

ಲಾಡೆನ್‌ ವಿರುದ್ಧದ ಹೋರಾಟಕ್ಕೆ ನೆಲೆ ನೀಡಲು ಪಾಕ್‌, ಸೌದಿ ಸಿದ್ಧ

ವಾಷಿಂಗ್ಟನ್‌ : ಅಮೆರಿಕದ ಮೇಲೆ ಸೆ.11ರಂದು ನಡೆದ ದಾಳಿಯ ಪ್ರಮುಖ ಶಂಕಿತ ಆರೋಪಿ ಒಸಾಮಾ ಬಿನ್‌ ಲಾಡೆನ್‌ ವಿರುದ್ಧದ ಅಮೆರಿಕಾ ಹೋರಾಟದಲ್ಲಿ ತನ್ನ ನೆಲೆ ಬಳಸಿಕೊಳ್ಳಲು ಪಾಕ್‌ ಒಪ್ಪಿಗೆ ನೀಡಿದೆ. ಆದರೆ, ಭಾರಿ ಸಂಖ್ಯೆಯ ಅಮೆರಿಕ ಪಡೆಗಳು ತನ್ನ ನೆಲದ ಮೇಲೆ ಇಳಿಯಲು ಅವಕಾಶ ನೀಡುವುದಿಲ್ಲ ಎಂದು ಅದು ಹೇಳಿದೆ ಎಂದು ಶುಕ್ರವಾರ ವರದಿಯಾಗಿದೆ.

ಪಾಕ್‌ ಪ್ರಧಾನಿ ಪರ್ವೇಜ್‌ ಮುಷ್ರಫ್‌ ಸಂಪೂರ್ಣ ಬೆಂಬಲದ ಮಾತನಾಡಿದ್ದರೂ, ಭಯೋತ್ಪಾದನೆ ವಿರುದ್ಧದ ಅಮೆರಿಕಾ ಹೋರಾಟಕ್ಕೆ ಅದು ಸೀಮಿತ ನೆರವನ್ನಷ್ಟೇ ನೀಡುತ್ತಿದೆ ಎಂದು ವಾಲ್‌ ಸ್ಟ್ರೀಟ್‌ ಜರ್ನಲ್‌ ಹೇಳಿದೆ.

ದುಬೈ ವರದಿ: ಒಸಾಮಾ ಬಿನ್‌ ಲಾಡೆನ್‌ ವಿರುದ್ಧದ ಅಮೆರಿಕಾ ಹೋರಾಟದಲ್ಲಿ ತನ್ನ ವಾಯುನೆಲೆ ಬಳಸಿಕೊಳ್ಳಲು ಸೌದಿ ಅರೇಬಿಯಾ ಕೂಡ ಸಮ್ಮತಿ ನೀಡಿದೆ. ಈ ವಿಷಯವನ್ನು ಗಲ್ಫ್‌ನ ರಾಜತಾಂತ್ರಿಕರೊಬ್ಬರು ಶುಕ್ರವಾರ ತಿಳಿಸಿದ್ದಾರೆ.

ನೆರೆಯ ಖತಾರ್‌ ಕೂಡ ಅಮೆರಿಕದ ವಾಯುಪಡೆಗೆ ನೆರವಾಗಲು ನಿರ್ಧರಿಸಿದೆ. ಪ್ರಿನ್ಸ್‌ ಸುಲ್ತಾನ್‌ ವಾಯುನೆಲೆಯ ಸೌಲಭ್ಯ ಬಳಸಿಕೊಳ್ಳಲು ತನ್ನ ಅಭ್ಯಂತರ ಏನಿಲ್ಲ ಎಂದು ಸೌದಿ ಅರೇಬಿಯಾ ಹೇಳಿದೆ. ಲಾಡೆನ್‌ ವಿರುದ್ಧದ ಹೋರಾಟಕ್ಕೆ ಅಮೆರಿಕಾ ಪಡೆಗಳಿಗೆ ಸೌದಿ ಪ್ರವೇಶಾವಕಾಶ ನೀಡಲು ಒಪ್ಪಿದೆ ಎಂದು ವಾಷಿಂಗ್ಟನ್‌ ಪೋಸ್ಟ್‌ ವರದಿ ಮಾಡಿದೆ.

ಈ ಮಧ್ಯೆ ತಾನು ಕಟ್ಟಾ ಇಸ್ಲಾಮ್‌ ಧರ್ಮೀಯನಾಗಿದ್ದು, ಇಸ್ಲಾಮ್‌ ವಿರೋಧಿಗಳ ವಿರುದ್ಧ ಹೋರಾಟ ಮುಂದುವರಿಸುವುದಾಗಿ ಲಾಡೆನ್‌ ಹೇಳಿದ್ದಾನೆ ಎಂದು ವರದಿಯಾಗಿದೆ.

  • ಅಂತಾರಾಷ್ಟ್ರೀಯ ಭಯೋತ್ಪಾದಕ ಬಿನ್‌ ಲಾಡೆನ್‌ನ್ನು ಅಮೆರಿಕಕ್ಕೆ ಒಪ್ಪಿಸುವಂತೆ ತಾಲಿಬಾನ್‌ ಮನವೊಲಿಸಲು ಪಾಕ್‌ನ ಧಾರ್ಮಿಕ ಮುಖಂಡರ ನಿಯೋಗ ಕಂದಹಾರ್‌ಗೆ ಶುಕ್ರವಾರ ತೆರಳಿ ಮಾತುಕತೆ ನಡೆಸುತ್ತಿದೆ. ಲಾಡೆನ್‌ ಒಪ್ಪಿಸಿ, ಇಲ್ಲ ಯುದ್ಧ ಎದುರಿಸಿ ಎಂದು ನಿಯೋಗ ಅಂತಿಮ ಎಚ್ಚರಿಕೆ ನೀಡಲಿದೆ.
  • ಶಂಕಿತ ಭಯೋತ್ಪಾದಕ ಸಂಘಟನೆಗಳ ಬ್ಯಾಂಕ್‌ ಖಾತೆಗಳ ಬಗ್ಗೆ ತನಿಖೆ ನಡೆಸಲು ಅಮೆರಿಕಾ ಹಾಗೂ ಇನ್ನಿತರ ಪ್ರಮುಖ ರಾಷ್ಟ್ರಗಳ ಉನ್ನತ ಮಟ್ಟದ ಗುಪ್ತದಳದ ಅಧಿಕಾರಿಗಳು ಶೀಘ್ರವೇ ಪಾಕ್‌ಗೆ ಆಗಮಿಸಲಿದ್ದಾರೆ.
  • ಸೆ.11ರಂದು ಅಮೆರಿಕದ ಮೇಲೆ ನಡೆದ ಭಯೋತ್ಪಾದಕ ದಾಳಿಗೆ ಸಂಬಂಧಿಸಿದಂತೆ 19 ಶಂಕಿತ ಉಗ್ರರ ಭಾವಚಿತ್ರಗಳನ್ನು ಎಫ್‌.ಬಿ.ಐ. ಬಿಡುಗಡೆ ಮಾಡಿದೆ. ಈ ಶಂಕಿತ ಉಗ್ರರು ಒಸಾಮಾ ಬಿನ್‌ ಲಾಡೆನ್‌ ಹಾಗೂ ಅಲ್‌ ಕೊಯಿದಾ ಉಗ್ರಗಾಮಿ ಸಂಘಟನೆಯಾಂದಿಗೆ ನಿಕಟ ಸಂಪರ್ಕ ಹೊಂದಿದ್ದಾರೆಂದು ಎಫ್‌ಬಿಐ ಹೇಳಿದೆ
  • ಪಾಕಿಸ್ತಾನದ ಐ.ಎಸ್‌.ಐ.ನೊಂದಿಗೆ ಸಂಪರ್ಕ ಹೊಂದಿರುವ ಭಾರತ ವಿದ್ಯಾರ್ಥಿ ಇಸ್ಲಾಮಿಕ್‌ ಚಳವಳಿ (ಸಿಮಿ) ಯನ್ನು ಭಾರತದಲ್ಲಿ ನಿಷೇಧಿಸಲಾಗಿದೆ. ಸಂಘಟನೆ ಅಧ್ಯಕ್ಷ ಹಾಗೂ ಮೂವರು ಕಾರ್ಯಕರ್ತರನ್ನು ಬಂಧಿಸಲಾಗಿದೆ.
  • ಭಯೋತ್ಪಾದನೆ ವಿರುದ್ಧ ಅಮೆರಿಕ ಸಾರಿರುವ ಸಮರ ಸಿದ್ಧತೆಗಳು ತೀವ್ರಗೊಳ್ಳುತ್ತಿದ್ದು, ಶಂಕಿತ ಉಗ್ರರ ವಿರುದ್ಧ ಉಗ್ರ ಕ್ರಮ ಕೈಗೊಳ್ಳುವಂತೆ ಹಾಗೂ ಅವರಿಗೆ ಆರ್ಥಿಕ ನಿರ್ಬಂಧ ವಿಧಿಸುವಂತೆ ವಿಶ್ವಸಂಸ್ಥೆಯು ತನ್ನ ಸದಸ್ಯ ರಾಷ್ಟ್ರಗಳಿಗೆ ಸೂಚಿಸಿದೆ.
  • ಲಾಡೆನ್‌ ಎಲ್ಲೇ ಅಡಗಿದ್ದರೂ, ಅವನನ್ನು ಹೊರಗೆಳೆದು ಪ್ರತೀಕಾರ ತೀರಿಸಿಕೊಳ್ಳುವುದಾಗಿ ಅಮೆರಿಕಾ ಘೋಷಿಸಿದೆ. ಆದರೆ, ಲಾಡೆನ್‌ ಎಲ್ಲಿದ್ದಾನೆ ಎಂದು ನಮಗೆ ಗೊತ್ತಿಲ್ಲ ಎಂದು ಪೋವೆಲ್‌ ಹೇಳಿದ್ದಾರೆ.
  • ಪಾಕಿಸ್ತಾನದಲ್ಲಿ ಜನತಂತ್ರ ಆಡಳಿತ ಇನ್ನೂ ಪುನರ್‌ ಸ್ಥಾಪನೆಯಾಗದಿರುವಾಗ ಹಾಗೂ ಕಾಶ್ಮೀರದಲ್ಲಿ ಭಯೋತ್ಪಾದನೆಗೆ ಪಾಕ್‌ ಮಿಲಿಟರಿ ಸರಕಾರ ಕುಮ್ಮಕ್ಕು ನೀಡುತ್ತಿರುವಾಗ ಆ ದೇಶದ ಮೇಲಿನ ದಿಗ್ಭಂದನ ತೆರವುಗೊಳಿಸಿದ್ದು, ಸೂಕ್ತವಲ್ಲ ಎಂದು ಅಮೆರಿಕದ ಕಾನೂನು ತಜ್ಞ ಫ್ರಾಂಕ್‌ ಪಾಲೋನ್‌ ಅಭಿಪ್ರಾಯಪಟ್ಟಿದ್ದಾರೆ.
  • ಸಿಮಿ (ಸ್ಯೂಡೆಂಟ್‌ ಇಸ್ಲಾಮಿಕ್‌ ಮೂಮೆಂಟ್‌ ಆಫ್‌ ಇಂಡಿಯಾ) ಕಾರ್ಯಕರ್ತರು ಅಂತಾರಾಷ್ಟ್ರೀಯ ಭಯೋತ್ಪಾದಕರ ಜೊತೆ ಸಂಪರ್ಕ ಹೊಂದಿದ್ದಾರೆ ಎಂಬ ಶಂಕೆಯ ಹಿನ್ನೆಲೆಯಲ್ಲಿ ಮುಂಬೈನಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಮಹಾರಾಷ್ಟ್ರದಲ್ಲಿ ಸುಮಾರು 70ಕ್ಕೂ ಹೆಚ್ಚು ಸಿಮಿ ಕಾರ್ಯಕರ್ತರನ್ನು ಬಂಧಿಸಲಾಗಿದೆ.
  • ಗುಜರಾತ್‌ನಲ್ಲಿ ಸಿಮಿ ಕಚೇರಿಯನ್ನು ಪೊಲೀಸರು ವಶಪಡಿಸಿಕೊಂಡು ಬೀಗಮುದ್ರೆ ಹಾಕಿದ್ದಾರೆ.
  • ಅಮೆರಿಕದಲ್ಲಿ ನಡೆದ ಉಗ್ರರ ದಾಳಿ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಬೇಕಾಗಿದ್ದ ಕಾಮನ್ವೆಲ್ತ್‌ ಶೃಂಗಸಭೆಯನ್ನು ಮುಂದೂಡಲಾಗಿದೆ. ಪ್ರಮುಖ ರಾಷ್ಟ್ರಗಳು ಗೈರುಹಾಜರಾಗಲು ನಿರ್ಧರಿಸಿದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
  • ಬಿನ್‌ ಲಾಡೆನ್‌ ವಿರುದ್ಧದ ಹೋರಾಟಕ್ಕೆ ಅಮೆರಿಕ 16 ಸಾವಿರಕ್ಕೂ ಹೆಚ್ಚು ಸೈನಿಕರ ತಂಡವನ್ನು ಸಜ್ಜು ಗೊಳಿಸಿದೆ. ಉತ್ತರ ಮೈತ್ರಿಕೂಟದ ದಾಳಿ ದಿನೇ ದಿನೇ ತೀವ್ರಗೊಳ್ಳುತ್ತಿದೆ.
  • ಬೆಟ್ಟಗುಡ್ಡ ಪರ್ವತಗಳ ನಾಡಾದ ಆಫ್ಘಾನಿಸ್ತಾನದಲ್ಲಿ ಭೂಸೇನಾ ದಾಳಿ ಸೂಕ್ತವಲ್ಲ ಎಂದು ಅಮೆರಿಕಾದ ಸೇನಾಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ. ಅಮೆರಿಕಾ ಕಾರ್ಯಾಚರಣೆಗೆ ಜಪಾನ್‌ ತನ್ನ ಬೆಂಬಲ ಸೂಚಿಸಿದೆ.
(ಪಿ.ಟಿ.ಐ./ಇನ್‌ಫೋ ವಾರ್ತೆ)
More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+