ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬರುತ್ತಿದೆ.. ಕನ್ನಡದ ಮೊಟ್ಟಮೊದಲ ಬ್ರೆೃಲ್‌ ಲಿಪಿಯ ಮಾಸಪತ್ರಿಕೆ

By Staff
|
Google Oneindia Kannada News

ಬೆಂಗಳೂರು: ಕನ್ನಡದ ಮೊಟ್ಟ ಮೊದಲ ಬ್ರೆೃಲ್‌ ಲಿಪಿಯ ಮಾಸಪತ್ರಿಕೆಯನ್ನು ಕರ್ನಾಟಕ ಅಂಧರ ಕ್ಷೇಮಾಭ್ಯುದಯ ಟ್ರಸ್ಟ್‌ ಹೊರ ತರುತ್ತಿದ್ದು , ಸೆಪ್ಟಂಬರ್‌ 17 ರಂದು ನಗರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪತ್ರಿಕೆ ಹೊರಬೀಳುತ್ತಿದೆ.

ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಎಸ್‌.ಪಿ.ಮೂರ್ತಿ ಈ ವಿಷಯವನ್ನು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ದೃಷ್ಟಿಹೀನತೆ ಹೊಂದಿರುವ ಮೂರ್ತಿ ಅವರು ಕವಿ ಹಾಗೂ ಆಂಗ್ಲ ಉಪನ್ಯಾಸಕರು. ಪತ್ರಿಕೆಯ ಬಿಡುಗಡೆ ಸಂದರ್ಭದಲ್ಲಿ ರಾಜ್ಯಮಟ್ಟದ ಅಂಧರ 4 ನೇ ಕವಿಗೋಷ್ಠಿಯನ್ನು ಸಂಸ್ಥೆ ಹಮ್ಮಿಕೊಂಡಿದೆ.

ಅಂಧರಿಗೆ ಕಂಪ್ಯೂಟರ್‌ ತರಬೇತಿ ಹಾಗೂ ಯೋಗಾಸನ ನೀಡುವ ಕಾರ್ಯಕ್ರಮಗಳನ್ನು ಕೂಡ ಸಂಸ್ಥೆ ಹಮ್ಮಿಕೊಂಡಿದ್ದು , ಈ ಕಾರ್ಯಕ್ರಮಗಳ ಉದ್ಘಾಟನೆ ಕೂಡ ಸೆ.27 ರಂದು ನಡೆಯಲಿದೆ. ಮೂರ್ತಿ ಅವರು ರಚಿಸಿರುವ ಒಲವಿನ ಹಲವು ಮುಖಗಳು ಕವನ ಸಂಕಲನದ ಬಿಡುಗಡೆ ಹಾಗೂ ಅಂಧ ಸಂಗೀತ ನಿರ್ದೇಶಕ ಎಸ್‌.ಚಂದ್ರಕುಮಾರ್‌ ಸಂಗೀತ ಸಂಯೋಜಿಸಿರುವ ಗೀತ ಗಾಯನ ಕಾರ್ಯಕ್ರಮವೂ ನಡೆಯಲಿದೆ. ಇದೊಂದು ಅಪರೂಪದ ಕಾರ್ಯಕ್ರಮ, ಒಳಗಣ್ಣುಳ್ಳವರಿಗೆ ಹಾಗೂ ಸಹೃದಯರಿಗಾಗಿ ಮಾತ್ರ.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X