ವಿದ್ಯುತ್ ಕ್ಷೇತ್ರದಲ್ಲಿ ಬೆಳಕಿಗೆ ನಬಾರ್ಡ್‌ನಿಂದ 64.74 ಕೋಟಿ ರು.ನೆರವು
ಬೆಂಗಳೂರು : ರಾಜ್ಯದ ವಿದ್ಯುತ್ ವಲಯದಲ್ಲಿ 47 ಸುಧಾರಿತ ಯೋಜನೆಗಳನ್ನು ಜಾರಿಗೊಳಿಸಲು 64.74 ಕೋಟಿ ರುಪಾಯಿಗಳ ನೆರವನ್ನು ಒದಗಿಸಲು ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್(ನಬಾರ್ಡ್) ಮುಂದಾಗಿದೆ.
ರಾಜ್ಯದ 15 ಜಿಲ್ಲೆಗಳಲ್ಲಿ 2001-2003 ನೇ ಇಸವಿಯ ಅವಧಿಯಲ್ಲಿ ಈ ಯೋಜನೆಗಳನ್ನು ಅನುಷ್ಠಾನಕ್ಕೆ ತರಲಾಗುವುದು ಎಂದು ನಬಾರ್ಡ್‌ನ ಬೆಂಗಳೂರು ಪ್ರಾದೇಶಿಕ ಕಚೇರಿಯ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಎಸ್.ಎಂ.ಮೆಹ್ತಾ ಸುದ್ದಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಬಾರ್ಡ್ ನೆರವಿನಿಂದ ಪೂರ್ಣಗೊಳ್ಳುವ ಈ ಯೋಜನೆಗಳಿಂದ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ (ಕೆಪಿಟಿಸಿಎಲ್) 352.43 ಲಕ್ಷ ಯುನಿಟ್‌ಗಳನ್ನು ಉಳಿತಾಯ ಮಾಡಬಹುದಾಗಿದ್ದು, ಹೆಚ್ಚುವರಿಯಾಗಿ 1559.33 ಲಕ್ಷ ಯುನಿಟ್ ವಿದ್ಯುತ್ ಮಾರಾಟ ಮಾಡಲು ಸಾಧ್ಯವಾಗಲಿದೆ. ಹಳ್ಳಿಗಳಲ್ಲಿನ ವೋಲ್ಟೇಜ್ ಗುಣಮಟ್ಟ ಕೂಡ ಉತ್ತಮವಾಗಲಿದ್ದು , ಹೆಚ್ಚುವರಿ 20 ಸಾವಿರ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಪೂರೈಸಬಹುದಾಗಿದೆ ಎಂದು ಮೆಹ್ತಾ ತಿಳಿಸಿದ್ದಾರೆ.
(ಪಿಟಿಐ)












Click it and Unblock the Notifications