ಲೋ ಫ್ಲೋರ್ ಬಸ್:ಗೊಂದಲನಗರಿ ರಸ್ತೆಗಳಲ್ಲಿ ಜನವರಿಯಿಂದ ಪ್ರತ್ಯಕ್ಷ
ಬೆಂಗಳೂರು : ವೃದ್ಧರಿಂದ ಹಿಡಿದು ಪುಟಾಣಿಗಳವರೆಗೆ ಪ್ರಯಾಣಕ್ಕೆ ಅನುಕೂಲವಾದ ಲೋ ಫ್ಲೋರ್ ಬಸ್‌ಗಳನ್ನು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಬರುವ ಜನವರಿಯಿಂದ ಓಡಿಸಲಿದೆ.
ಈಗಾಗಲೇ ಲೋ ಫ್ಲೋರ್ ಬಸ್‌ಗಳ ಪ್ರಾಯೋಗಿಕ ಸಂಚಾರವನ್ನು ಪ್ರಾರಂಭಿಸಿದ್ದು , ಈ ಬಸ್ಸುಗಳು ನಗರ ಸಂಚಾರಕ್ಕೆ ಹೇಳಿ ಮಾಡಿಸಿದ ಬಸ್ಸುಗಳಾಗಿವೆ ಎಂದು ಶನಿವಾರ ಜರುಗಿದ ಬೆಂಗಳೂರು ಅಜೆಂಡಾ ಟಾಸ್ಕ್‌ಪೋರ್ಸ್‌ನ ಸಭೆಯಲ್ಲಿ ಬಿಎಂಟಿಸಿ ನಿರ್ದೇಶಕ ಪ್ರದೀಪ್‌ಸಿಂಗ್ ಕರೋಲಾ ಹೇಳಿದರು.
ಲೋ ಪ್ಲೋರ್ ಬಸ್‌ಗಳು ಏರ್ ಇಂಜಿನ್ ಹೊಂದಿದ್ದು , ವೃದ್ಧರಿಗೆ ಹಾಗೂ ಮಕ್ಕಳಿಗೆ ಹತ್ತಲು ಇಳಿಯಲು ಅನುಕೂಲವಾಗಿವೆ. ನಗರದಲ್ಲಿ 17 ಡಿಪೋಗಳ ವ್ಯಾಪ್ತಿಯಲ್ಲಿ 25 ಲೋ ಫ್ಲೋರ್ ಬಸ್ಸುಗಳ ಸಂಚಾರವನ್ನು ಆರಂಭಿಸಲಾಗುವುದು ಎಂದು ಕರೋಲಾ ಹೇಳಿದರು. ಬಿಎಂಟಿಸಿ ಮುಂದಿರುವ ಭವಿಷ್ಯದ ಯೋಜನೆಗಳನ್ನು ಅವರು ಸಭೆಯ ಮುಂದಿಟ್ಟರು.(ಇನ್ಫೋ ವಾರ್ತೆ)












Click it and Unblock the Notifications