ಸೆ. 24ರಂದು ವಾಜಪೇಯಿ ಅಮೆರಿಕಾ ಭೇಟಿ, ಬುಷ್ ಜೊತೆ ಮಾತುಕತೆ
ನವದೆಹಲಿ : ಪ್ರಧಾನ ಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರು ಸೆಪ್ಟೆಂಬರ್ 24ರಂದು ಅಮೆರಿಕಾದ ಅಧ್ಯಕ್ಷ ಜಾ. ಡಬ್ಲ್ಯೂ ಬುಷ್ ಅವರನ್ನು ಭೇಟಿಯಾಗಲಿದ್ದಾರೆ. ನಂತರ ಅವರುಪಾಕಿಸ್ಥಾನದ ಅಧ್ಯಕ್ಷ ಜನರಲ್ ಪರ್ವೇಜ್ ಮುಷರ್ರಫ್ ಅವರನ್ನೂ ಭೇಟಿಯಾಗಲಿದ್ದಾರೆ.
ಬುಷ್ ಹಾಗೂ ವಾಜಪೇಯಿ ನಡುವಿನ ಭೇಟಿಯ ಸಮಯ ಮತ್ತು ಜಾಗಗಳ ಬಗೆಗೆ ಅಂತಿಮ ತೀರ್ಮಾನವಾಗಿಲ್ಲ. ಆದರೆ ಭೇಟಿಯ ಸಂದರ್ಭದಲ್ಲಿ ಪ್ರಾದೇಶಿಕ ಮತ್ತು ಅಂತರರಾಷ್ಟ್ರೀಯ ವಿಷಯಗಳ ಬಗ್ಗೆ ಚರ್ಚೆ ನಡೆಸಲಾಗುವುದು. ಪೊಕ್ರಾಣ್ ಅಣುಬಾಂಬ್ ಸ್ಫೋಟಕ್ಕೆ ಸಂಬಂಧಿಸಿ ಭಾರತದ ಮೇಲೆ ವಿಧಿಸಲಾಗಿದ್ದ ದಿಗ್ಭಂಧನಗಳನ್ನು ತೆಗೆಯಬೇಕೆಂಬ ಒತ್ತಡ ಬುಷ್ ಮೇಲಿದ್ದು ಈ ಕುರಿತೂ ಮಾತುಕತೆ ನಡೆಯಬಹುದು ಎಂದು ನಿರೀಕ್ಷಿಸಲಾಗಿದೆ. ಅಲ್ಲದೆ ಮುಂದಿನ ವರ್ಷ ಜಾರ್ಜ್ ಬುಷ್ ಅವರು ಭಾರತಕ್ಕೆ ಭೇಟಿ ನೀಡುವ ಸಾಧ್ಯತೆಯೂ ಇದೆ.
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications