ತಮಿಳು ಮಾನಿಲ ಕಾಂಗ್ರೆಸ್ ಸಂಸ್ಥಾಪಕ ಜಿ.ಕೆ.ಮೂಪನಾರ್ ಇನ್ನಿಲ್ಲ
ಚೆನ್ನೈ : ದೀರ್ಘ ಕಾಲ ಅಸ್ವಸ್ಥರಾಗಿದ್ದ ಟಿಎಂಸಿ ಸಂಸ್ಥಾಪಕ ಜಿ.ಕೆ.ಮೂಪನಾರ್ ಗುರುವಾರ ಮುಂಜಾನೆ 6 ಗಂಟೆಗೆ ನಿಧನರಾಗಿದ್ದಾರೆ. ಅವರಿಗೆ 71 ವರ್ಷ ವಯಸ್ಸಾಗಿತ್ತು.
ಮೃತರು ಪತ್ನಿ, ಒಬ್ಬ ಮಗ ಹಾಗೂ ಒಬ್ಬ ಮಗಳನ್ನು ಅಗಲಿದ್ದಾರೆ. ಸಣ್ಣದೊಂದು ಶಸ್ತ್ರಚಿಕಿತ್ಸೆಗಾಗಿ ಜುಲೈ 31ರಂದು ಶ್ರೀರಾಮಚಂದ್ರ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಅವರನ್ನು ಸೇರಿಸಲಾಗಿತ್ತು. ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿದ್ದ ಅವರು ಚೇತರಿಸಿಕೊಳ್ಳಲಿಲ್ಲ. ಮೂರು ಅವಧಿಯಲ್ಲಿ ಅವರು ರಾಜ್ಯ ಸಭಾ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.
(ಯುಎನ್‌ಐ)












Click it and Unblock the Notifications