Get Updates
Get notified of breaking news, exclusive insights, and must-see stories!

ರಾಜ್ಯದ 174 ತಾಲ್ಲೂಕುಗಳಲ್ಲಿ ಕಂಪ್ಯೂಟರೈಸ್ಡ್‌ ರಕ್ತ ಪರೀಕ್ಷಾ ಕೇಂದ್ರ

ಹುಬ್ಬಳ್ಳಿ : ರಾಜ್ಯದ ಎಲ್ಲ 174 ತಾಲ್ಲೂಕುಗಳಲ್ಲಿ ಕಂಪ್ಯೂಟರೈಸ್ಡ್‌ ರಕ್ತ ಪರೀಕ್ಷಾ ಕೇಂದ್ರಗಳನ್ನು ಸದ್ಯದಲ್ಲಿಯೇ ಆರಂಭಿಸಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಯೋಜನಾ ಸಚಿವ ಡಾ. ಎ. ಬಿ. ಮಲಕ ರೆಡ್ಡಿ ಹೇಳಿದ್ದಾರೆ.

ಅವರು ಭಾನುವಾರ ಜಿಲ್ಲೆಯ ಪಲ್ಸ್‌ ಪೋಲಿಯೋ ವಿಮರ್ಶಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಈ ಪರೀಕ್ಷಾ ಕೇಂದ್ರದಲ್ಲಿ ಎಲ್ಲಾ ರೀತಿಯ ರಕ್ತ ಪರೀಕ್ಷೆಗಳನ್ನು ನಡೆಸುವ ವ್ಯವಸ್ಥೆ ಮಾಡಲಾಗುವುದು. ಸರಕಾರಿ ಮತ್ತು ಖಾಸಗಿ ವಲಯದ ಸಹಯೋಗದೊಂದಿಗೆ ಈ ಪರೀಕ್ಷಾ ಕೇಂದ್ರಗಳನ್ನು ನಿರ್ವಹಿಸಲಾಗುವುದು ಎಂದರು.

ಗ್ರಾಮೀಣ ಪ್ರದೇಶದಲ್ಲಿ ಕೆಲಸ ಮಾಡುವ ವೈದ್ಯರ ಕೊರತೆಯನ್ನು ನಿಭಾಯಿಸಲು ರಾಜ್ಯಸರಕಾರವು ಮೂರು ವರ್ಷಗಳ ಡಿಪ್ಲೊಮಾ ಕೋರ್ಸನ್ನು ಆರಂಭಿಸಲು ನಿರ್ಧರಿಸಿದೆ. ಐದು ವರ್ಷಗಳಲ್ಲಿ ಎಂಬಿಬಿಎಸ್‌ ಕೋರ್ಸಿನಲ್ಲಿ ಕಲಿಸಲಾಗುವ ಎಲ್ಲ ವಿಷಯಗಳನ್ನೂ ಮೂರು ವರ್ಷದ ಡಿಪ್ಲೊಮಾ ಕೋರ್ಸಿನಲ್ಲಿ ಕಲಿಸಲಾಗುವುದು. ಇದರಿಂದಾಗಿ ರಾಜ್ಯದ ಗ್ರಾಮೀಣ ಪ್ರದೇಶದಲ್ಲಿ ಖಾಲಿ ಬಿದ್ದಿರುವ 550 ಹುದ್ದೆಗಳನ್ನು ಭರ್ತಿ ಮಾಡುವುದು ಸುಲಭವಾಗುತ್ತದೆ ಎಂದು ರೆಡ್ಡಿ ತಿಳಿಸಿದರು.

ಆರೋಗ್ಯ ಇಲಾಖೆಯಲ್ಲಿ ಸುಮಾರು 2 ಸಾವಿರ ಉದ್ಯೋಗಗಳು ಖಾಲಿಯಿವೆ. ಈ ಹುದ್ದೆಗಳನ್ನು ಭರ್ತಿ ಮಾಡಲು ಆಯಾ ಜಿಲ್ಲಾಧಿಕಾರಿಗಳಿಗೇ ಅಧಿಕಾರ ನೀಡಲಾಗಿದೆ. 560 ಪ್ರಾಥಮಿಕ ಆರೋಗ್ಯ ಕೇಂದ್ರಗಳು, 1,300 ಮಹಿಳಾ ಮತ್ತು ಮಕ್ಕಳ ಕಲ್ಯಾಣ ಕೇಂದ್ರಗಳಿಗೆ ಸದ್ಯದಲ್ಲೇ ಕಟ್ಟಡಗಳನ್ನು ಒದಗಿಸಲಾಗುವುದು ಎಂದು ಮಲಕ ರೆಡ್ಡಿ ಹೇಳಿದರು.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+