ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿ.ಸಿ.ಸಿ.ಯ ‘ಸರಳ ಖಾತಾ ಯೋಜನೆ’ ಭಾನುವಾರಕ್ಕೆ ವಿಸ್ತರಣೆ

By Staff
|
Google Oneindia Kannada News

ಬೆಂಗಳೂರು : ನಾಗರಿಕರ ಒತ್ತಾಯದ ಮೇರೆಗೆ ಆಗಸ್ಟ್‌ 25 (ಶನಿವಾರ) ರಂದು ಕೊನೆಗೊಳ್ಳಬೇಕಿದ್ದ ‘ಸರಳ ಖಾತಾ ಯೋಜನೆ’ಯನ್ನು ಬೆಂಗಳೂರು ಮಹಾನಗರ ಪಾಲಿಕೆ ಭಾನುವಾರ(ಆ.26)ದವರೆಗೆ ವಿಸ್ತರಿಸಿದೆ.

ಈ ಕುರಿತು ಪಾಲಿಕೆಯ ಆಯುಕ್ತ ಅಶೋಕ್‌ ದಳವಾಯಿ ಶುಕ್ರವಾರ ಪ್ರಕಟಣೆ ಹೊರಡಿಸಿದ್ದು, ಎಲ್ಲ 45 ವಿಶೇಷ ಖಾತಾ ಕ್ಯಾಂಪ್‌ಗಳು ಹಾಗೂ 28 ವಲಯ ಕಚೇರಿಗಳು ಭಾನುವಾರ ಕೂಡ ಕಾರ್ಯ ನಿರ್ವಹಿಸಲಿವೆ ಎಂದು ತಿಳಿಸಿದ್ದಾರೆ. ಸಾರ್ವಜನಿಕರು ಈ ಸೌಲಭ್ಯವನ್ನು ಬಳಸಿಕೊಳ್ಳಲು ದಳವಾಯಿ ಕೋರಿದ್ದಾರೆ.

ಸರಳ ಖಾತಾ ಯೋಜನೆಗೆ ಈವರೆಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು , ಮಹಾನಗರ ಪಾಲಿಕೆ ಸುಮಾರು 10 ಲಕ್ಷ ರುಪಾಯಿಗಳ ಆದಾಯ ಸಂಗ್ರಹಿಸಿದೆ. ಈ ಯೋಜನೆಯಡಿ ಹೊಸ ಬಡಾವಣೆಗಳಲ್ಲಿನ ಸುಮಾರು 60 ಸಾವಿರ ಆಸ್ತಿಗಳಿಗೆ ಖಾತೆಗಳನ್ನು ವಿತರಿಸಲು ಪಾಲಿಕೆ ಉದ್ದೇಶಿಸಿದೆ ಎಂದು ಪಾಲಿಕೆಯ ಮೂಲಗಳು ತಿಳಿಸಿವೆ.

ಹೆಚ್ಚಿನ ವಿವರಗಳಿಗೆ ಪಾಲಿಕೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಅವರನ್ನು ದೂರವಾಣಿ ಸಂಖ್ಯೆ 080-2237315 ರಲ್ಲಿ ಸಂಪರ್ಕಿಸಬಹುದು. ಮಾಹಿತಿ ಒದಗಿಸುವ ಇತರ ದೂರವಾಣಿ ಸಂಖ್ಯೆಗಳು : ಸಹಾಯವಾಣಿ - 2227822, ಉಪ ಆಯುಕ್ತರು ಪೂರ್ವ - 5582247, ಉಪ ಆಯುಕ್ತರು ಪಶ್ಚಿಮ - 3361704, ಉಪ ಆಯುಕ್ತರು ದಕ್ಷಿಣ - 2223197.

(ಇನ್ಫೋ ವಾರ್ತೆ)

ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X