ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಾಗತಿಕ ಐಟಿ ಮಾರ್ಕೆಟ್‌ನಲ್ಲಿ ಭಾರತದ್ದು ಸಾಸಿವೆಯಷ್ಟು ಸಾಧನೆ-ತಜ್ಞರು

By Staff
|
Google Oneindia Kannada News

ಬೆಂಗಳೂರು : ಮಾಹಿತಿ ತಂತ್ರಜ್ಞಾನದ ಜಾಗತಿಕ ಮಾರುಕಟ್ಟೆಯನ್ನು ಪರಿಣಾಮಕಾರಿಯಾಗಿ ಹಾಗೂ ಪೂರ್ಣ ಪ್ರಮಾಣದಲ್ಲಿ ಪ್ರವೇಶಿಸಲು ಭಾರತ ವಿಫಲವಾಗಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಅಗಾಧ ಪ್ರಮಾಣದ ಸಾಮರ್ಥ್ಯವನ್ನು ಹೊಂದಿದ್ದರೂ ಜಾಗತಿಕ ಐಟಿ ಕ್ಷೇತ್ರದಲ್ಲಿ ಭಾರತದ ಪಾಲು ಅತ್ಯಂತ ಅಲ್ಪ ಪ್ರಮಾಣದ್ದು . ಮಾರುಕಟ್ಟೆ ಹಾಗೂ ಉತ್ಪಾದನಾ ಕ್ಷೇತ್ರದಲ್ಲಿ ಭಾರತ ಇನ್ನಷ್ಟು ಗಣನೀಯ ಸಾಧನೆ ಮಾಡಬೇಕಾಗಿದೆ ಎಂದು ಶುಕ್ರವಾರ ರಾತ್ರಿ ಮಾಹಿತಿ ತಂತ್ರಜ್ಞಾನ ಮಾರುಕಟ್ಟೆಗೆ ಸಂಬಂಧಿಸಿದಂತೆ ‘ಬಿಜಿನೆಸ್‌ ಟುಡೆ’ ಆಯೋಜಿದ್ದ ಗುಂಪು ಚರ್ಚೆಯಲ್ಲಿ ತಜ್ಞರು ಅಭಿಪ್ರಾಯ ಪಟ್ಟರು.

ಸಾಗಿರುವುದು ಬಹಳಷ್ಟು , ಸಾಗಬೇಕಾದ್ದು ಇನ್ನೂ ಬಹಳಷ್ಟು
ಜಾಗತಿಕ ಮಟ್ಟದಲ್ಲಿ ಮಾರಾಟ ಹಾಗೂ ಮಾರುಕಟ್ಟೆ ನಿರ್ವಹಣೆಯಲ್ಲಿ ಭಾರತ ಹಿಂದೆ ಬಿದ್ದಿದೆ. ಉತ್ಪಾದಕತೆಯಲ್ಲೂ ನಮ್ಮ ಸಾಧನೆ ಹೇಳಿಕೊಳ್ಳುವಂತದ್ದೇನೂ ಅಲ್ಲ . ಬೆಳವಣಿಗೆಯ ದರದಲ್ಲಿ ಪ್ರತಿಶತ 300 ರ ಪೈಕಿ ನಮಗೆ ಸಾಧಿಸಲು ಸಾಧ್ಯವಾಗಿರುವುದು ಶೇ.200 ರಷ್ಟು ಮಾತ್ರ ಎಂದು 32 ಬಿಲಿಯನ್‌ ರುಪಾಯಿಗಳ ವಿಫ್ರೋ ಕಾರ್ಪೊರೇಷನ್‌ನ ಒಂದಂಗವಾದ 01markets ಮುಖ್ಯಸ್ಥೆ ಮೈಥಿಲಿ ರಮೇಶ್‌ ಅಭಿಪ್ರಾಯಪಟ್ಟರು.

ಮೈಥಿಲಿ ಅವರ ಅಭಿಪ್ರಾಯವನ್ನು ಸಮರ್ಥಿಸಿದ indya.Com ನ ಸಿಇಓ ಸುನಿಲ್‌ ಲಲ್ಲಾ ಅವರು, ನಾವು ಅತ್ಯುತ್ತಮ ಮಾರ್ಕೆಟರ್‌ಗಳನ್ನು ಹೊಂದಿಲ್ಲ . ಅವಕಾಶ ದೊಡ್ಡದಿದ್ದು ಸಾಗಬೇಕಾದ ಹಾದಿ ದೂರವಿದೆ ಎಂದರು. ದೇಶದಾಚೆ ಗುಣಮಟ್ಟದ ಬ್ರಾಂಡ್‌ ರೂಪಿಸುವಲ್ಲಿ ಹಾಗೂ ತಮ್ಮ ಉತ್ಪನ್ನಗಳನ್ನು ಮನೆ ಮಾತಾಗಿ ಪರಿವರ್ತಿಸುವಲ್ಲಿ ಭಾರತದ ಐಟಿ ಕಂಪನಿಗಳು ಸೋತಿವೆ ಎಂದು ಲಲ್ಲಾ ಹೇಳಿದರು.

ಛಡ್ಡಾ ಕಂಪನಿಯ ಕಾರ್ಯ ನಿರ್ವಾಹಕ ನಿರ್ದೇಶಕ ಧರೇನ್‌ ಛಡ್ಡಾ ಅವರು, ಚೀನಾ ಮಾದರಿಯಲ್ಲಿ ಭಾರತ ಮಾರುಕಟ್ಟೆಯ ಮೇಲೆ ದಾಳಿ ನಡೆಸಬೇಕಿದೆ ಎಂದರು. ಬ್ರಾಂಡ್‌.ಕಾಂನ ಸಿಇಓ ಆರ್‌.ಶ್ರೀಧರ್‌ ಅವರ ಅಭಿಪ್ರಾಯವೂ ಇದಕ್ಕೆ ವ್ಯತಿರಿಕ್ತವಾಗಿರಲಿಲ್ಲ . ವಿದೇಶಗಳಲ್ಲಿ ಅಭಿವೃದ್ಧಿ ಕೇಂದ್ರಗಳನ್ನು ತೆರೆಯುವ ಮೂಲಕ ತಮ್ಮ ಉತ್ಪನ್ನಗಳನ್ನು ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುವತ್ತ ಭಾರತದ ಐಟಿ ಕಂಪನಿಗಳು ಕಾರ್ಯೋನ್ಮುಖವಾಗಬೇಕು ಎಂದು ಅವರು ಅಭಿಪ್ರಾಯಪಟ್ಟರು.

(ಪಿಟಿಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X