ರಾಜ್ಯದಲ್ಲಿ ಗೌರಿ-ಗಣೇಶ ಹಬ್ಬದ ಸಂಭ್ರಮ ಸಡಗರ
ಬೆಂಗಳೂರು : ಇಂದು ಭಾದ್ರಪದ ಶುಕ್ಲ ತದಿಗೆ. ಲಯಕರ್ತನಾದ ಶಿವನ ಸತಿ ಮಂಗಳಗೌರಿ ತವರಿಗೆ ಬರುವ ದಿನ. ಈ ಬಾರಿ ಭೀಕರ ಬರದ ಕರಿನೆರಳಿನ ಮುಸುಕಲ್ಲೂ ಗೌರಮ್ಮ - ಗಣಪತಿ ಹಬ್ಬದ ಸಂಭ್ರಮ ರಾಜ್ಯದಲ್ಲಿ ಕಂಡು ಬರುತ್ತಿದೆ.
ಬೆಂಗಳೂರಿನಲ್ಲಂತೂ ಸೋಮವಾರ ಎಲ್ಲ ಬಡಾವಣೆಗಳೂ ಗಿಜಿಗುಡುತ್ತಿದ್ದವು. ಹೂವು, ಹಣ್ಣು, ಬಾಳೆ ಕಂದು, ಮಾವಿನಸೊಪ್ಪು, ಗರಿಕೆ, ಪತ್ರೆ, ಅರಿಶಿನ ಕುಂಕುಮ ಮಾರುವ ವ್ಯಾಪಾರಿಗಳಿಂದ ಹಾಗೂ ಗ್ರಾಹಕರಿಂದ ಪಾದಚಾರಿ ರಸ್ತೆಗಳು ತುಂಬಿ ಹೋಗಿದ್ದವು.
ಸೋಮವಾರ ರಾತ್ರಿಯಿಂದಲೇ ಮನೆಯ ಮುಂದೆ ಸಾರಿಸಿ, ಗುಡಿಸಿ, ಸುಂದರವಾದ ರಂಗೋಲೆ ಹಾಕಿ, ಮನೆಯನ್ನು ತಳಿರು ತೋರಣಗಳಿಂದ ಮಾನಿನಿಯರು ಅಲಂಕರಿಸುತ್ತಿದ್ದರೆ, ಗಣಪನಿಗೆ ಹಾಗೂ ಗೌರಿಗೆ ಸುಂದರ ಮಂಟಪವನ್ನು ಸಿದ್ಧಪಡಿಸುವ ಕಾಯಕದಲ್ಲಿ ಗಂಡಸರು ತಲ್ಲೀನರಾಗಿದ್ದು ಸಾಮಾನ್ಯ ದೃಶ್ಯವಾಗಿತ್ತು.
ಗಣೇಶೋತ್ಸವ ಆಚರಿಸುವ ಸಮಿತಿಗಳು ವೇದಿಕೆ ಹಾಗೂ ರಸ್ತೆಯಂಚಿನಲ್ಲಿ ಕಂಬಗಳನ್ನು ನೆಡಿಸಿ, ದೀಪಾಲಂಕಾರ ಮಾಡಿಸುವ ಕಾಯಕದಲ್ಲಿ ನಿರತರಾಗಿದ್ದರು. ಮಂಗಳವಾರ ಬೆಳಗ್ಗೆಯೇ ಎದ್ದು ಹೊಸ ಬಟ್ಟೆ ತೊಟ್ಟ ಪುಟ್ಟ ಹೆಣ್ಣು ಮಕ್ಕಳು, ರೇಷ್ಮೆ ಸೀರೆಯಲ್ಲಿ ಕರ್ನಾಟಕದ ಸಂಪ್ರದಾಯವನ್ನು ಬಿಂಬಿಸುವಂತೆ ಲಗುಬಗೆಯಿಂದ ಓಡುಡುತ್ತಿದ್ದ ಮಾನಿನಿಯರು ಮರದ ಜೊತೆ ಹಿಡಿದುಕೊಂಡು ಬಾಗಿನ ಕೊಡಲು ಸಜ್ಜಾಗಿ ಹೊರಟಿದ್ದರು. ಮನೆ ಮನೆಗಳಲ್ಲೂ ಗಂಟಾನಾದ ಮೊಳಗುತ್ತಿತ್ತು.
ಬೆಲೆ ಏರಿಕೆ ಬಿಸಿ : ಪ್ರತಿ ವರ್ಷದಂತೆ ಈ ವರ್ಷವೂ ಬೆಲೆ ಏರಿಕೆ ಬಿಸಿ ಗ್ರಾಹಕರಿಗೆ ತಟ್ಟಿತ್ತು. ಮೂಸಂಬಿ ಹಣ್ಣಿನ ಬೆಲೆ ಕೊಂಚ ಇಳಿದಿದೆಯಾದರೂ, ಬಾಳೆ ಹಣ್ಣು, ತೆಂಗಿನಕಾಯಿ, ಸೇಬು, ಸೀತಾಫಲ... ಇತ್ಯಾದಿಯ ಬೆಲೆ ಗಗನಕ್ಕೇರಿದೆ. ಹೂವಿನ ಬೆಲೆಯನ್ನು ಕೇಳುವ ಅಗತ್ಯವೇ ಇಲ್ಲ ಬಿಡಿ. ಬೆಲೆ ಹೆಚ್ಚಾದರೂ ಹಬ್ಬ ಮಾಡದಿರಲು ಸಾಧ್ಯವೇ? ಹೀಗಾಗಿ ಹೂವು, ಹಣ್ಣಿಗೆ ಬೇಡಿಕೆಯೇನೂ ಕಡಿಮೆ ಆದಂತೆ ಕಾಣಲಿಲ್ಲ.
ಪ್ಲಾಸ್ಟರ್ ಆಫ್ ಪ್ಯಾರೀಸ್ ಗಣಪ : ರಸ್ತೆಯಂಚಿನಲ್ಲಿ ಇಟ್ಟು ಮಾರುತ್ತಿರುವ ಬಗೆ ಬಗೆಯ ಆಕಾರದ ಗಣಪ ಹಾಗೂ ಗೌರಮ್ಮನ ಮಣ್ಣಿನ ವಿಗ್ರಹಗಳ ವ್ಯಾಪಾರದ ಭರಾಟೆಯೂ ಭರ್ಜರಿಯಾಗಿತ್ತು. ಆರು ಅಂಗುಲದ ಗಣಪನಿಂದ ಆರೂ ವರೆ ಅಡಿ ಎತ್ತರದ ಮಣ್ಣಿನ ಗಣಪನ ವಿಗ್ರಹಗಳು ಎಲ್ಲ ಬಡಾವಣೆಯ ಮಾರುಕಟ್ಟೆಗಳಲ್ಲೂ ರಾರಾಜಿಸುತ್ತಿದ್ದವು.
ಡೊಳ್ಳು ಹೊಟ್ಟೆಯ ಮಣ್ಣಿನ ಗಣಪ ಎತ್ತರಕ್ಕನುಗುಣವಾಗಿ 10 ರುಪಾಯಿಯಿಂದ ಸಾವಿರಾರು ರುಪಾಯಿವರೆಗೆ ಮಾರಾಟವಾಗುತ್ತಿದ್ದರೆ, ಪ್ಲಾಸ್ಟರ್ ಆಫ್ ಪ್ಯಾರೀಸ್‌ನಿಂದ ಮಾಡಿದ 4-5 ಅಡಿಯ ಟೊಳ್ಳು ಗಣಪ ಕೇಲವ 150 ರುಪಾಯಿಗೆ ಬಿಕರಿಯಾಗುತ್ತಿದ್ದಾನೆ. ಹೊಸ ವಸ್ತ್ರ ಕೊಳ್ಳುವವರಿಂದ ಬಟ್ಟೆಯಂಗಡಿಗಳು ಗಿಜಿ ಗಿಜಿ ಎನ್ನುತ್ತಿವೆ. ಸ್ವೀಟ್ ಸ್ಟಾಲ್‌ಗಳ ವ್ಯಾಪಾರ ಇಮ್ಮುಡಿಯಾಗಿದೆ. ಮೈಕಾಸುರನ ಅಬ್ಬರ ಮುಗಿಲು ಮುಟ್ಟಿದೆ.
ಶಿವಪಾರ್ವತಿ ಹಾಗೂ ಗಣಪನ ದೇವಾಲಯಗಳು ತಳಿರು ತೋರಣ ಹಾಗೂ ದೀಪಾಲಂಕಾರದಿಂದ ಕಂಗೊಳಿಸುತ್ತಿವೆ. ವಿಶೇಷ ಪೂಜೆಗಳು ನಡೆಯುತ್ತಿವೆ. ಹರಿಕಥೆ, ಭಜನೆ, ವಾದ್ಯಗೋಷ್ಠಿಯ ಕಾರ್ಯಕ್ರಮದ ಸಿದ್ಧತೆಗಳು ಭರದಿಂದ ಸಾಗಿವೆ. ಎಲ್ಲಕ್ಕಿಂತ ಮಿಗಿಲಾಗಿ ಹೋಳಿಗೆ, ಕಡುಬು ಇತ್ಯಾದಿ ಭಕ್ಷ್ಯಗಳ ಸುವಾಸನೆ ಮೂಗಿಗೆ ಬಡಿಯುತ್ತಿದೆ.
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications