Get Updates
Get notified of breaking news, exclusive insights, and must-see stories!

‘ಮತಿಗೆಟ್ಟ ಗಣಿಗಾರಿಕೆ,ಕುದುರೆಮುಖ ನಿರಂತರ ದಮನ’-ಸಾಕ್ಷ್ಯಚಿತ್ರ

ಉಡುಪಿ : ‘ಮತಿಗೆಟ್ಟ ಗಣಿಗಾರಿಕೆ,ಕುದುರೆಮುಖ ನಿರಂತರ ದಮನ’ ಎಂಬ ಸಾಕ್ಷ್ಯಚಿತ್ರವನ್ನು ಕುದುರೆಮುಖ ವನ್ಯಜೀವಿ ಫೌಂಡೇಶನ್‌ ತಯಾರಿಸಿದೆ. ಕುದುರೆ ಮುಖ ಗಣಿಗಾರಿಕೆಯಿಂದಾಗಿ ಉಂಟಾಗುವ ಪರಿಸರ ನಾಶವನ್ನು ಸಾಕ್ಷ್ಯಚಿತ್ರ ಸಮಗ್ರವಾಗಿ ಚಿತ್ರಿಸಿದೆ ಎಂದು ಫೌಂಡೇಶನ್‌ನ ಪ್ರಕಟಣೆ ತಿಳಿಸಿದೆ.

ಮಂಗಳೂರು, ಚಿಕ್ಕಮಗಳೂರು, ಉಡುಪಿ, ಮಡಿಕೇರಿ, ಶಿವಮೊಗ್ಗ, ಪುತ್ತೂರು, ಕಾರ್ಕಳ, ಮೂಡಬಿದರೆ, ಮೂಡಿಗೆರೆ, ಅಲ್ದೂರು ಹಾಗೂ ಮಣಿಪಾಲ್‌ನಲ್ಲಿ , ಕೇಬಲ್‌ ಜಾಲದ ಮೂಲಕ ಸಂಜೆಯ ಸಿನಿಮಾ ಪ್ರದರ್ಶನಕ್ಕೆ ಪೂರ್ವಭಾವಿಯಾಗಿ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲಾಗುವುದು.

ಭದ್ರಾನದಿಯ ದಂಡೆ ಪ್ರದೇಶದಲ್ಲಿ ಒಂದು ದಶಕದಿಂದ ವಾಸಿಸುತ್ತಿರುವ, ಸಂಸೆ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಶಾಂತಪ್ಪಗೌಡ ಅವರ ಜೀವನ ಅನುಭವ ಸೇರಿದಂತೆ ಹಲವರ ಅಭಿಪ್ರಾಯಗಳನ್ನು ಚಿತ್ರದಲ್ಲಿ ದಾಖಲಿಸಲಾಗಿದೆ. ಗಣಿಗಾರಿಕೆಯನ್ನು ನಿಲ್ಲಿಸುವ ಮೂಲಕ ನೈಸರ್ಗಿಕ ಸಮತೋಲನವನ್ನು ರಕ್ಷಿಸಬೇಕೆಂಬುದು ಸಾಕ್ಷ್ಯಚಿತ್ರದ ಆಶಯ ಎಂದು ವನ್ಯಜೀವಿ ಫೌಂಡೇಶನ್‌ನ ಸಮನ್ವಯಾಧಿಕಾರಿ ನಿರೇನ್‌ ಜೈನ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+