ಮಂಗನಿಂದ ಧ್ವಜಾರೋಹಣ!ಗಣೇಶನಿಗೆ ಗಾಂಧಿ ಟೋಪಿ!!
ಬೆಂಗಳೂರು : ರಾಜ್ಯದ ಬಹುತೇಕ ಪ್ರದೇಶಗಳಲ್ಲಿ ತುಂತುರು ಮಳೆಯ ಪ್ರಭಾತ ಭೇರಿಯ ನಡುವೆ ನಡೆದ 55 ನೇ ಸ್ವಾತಂತ್ರ್ಯೋತ್ಸವದ ಆಚರಣೆ ಹಲವಾರು ಮೋಜು- ವಿಶೇಷಗಳಿಗೂ ಎಡೆ ಮಾಡಿಕೊಟ್ಟಿತ್ತು . ಪ್ರತಿಭಟನೆಗಳನ್ನು ಹೊರತುಪಡಿಸಿದ ಕೆಲವು ಮೋಜು-ಗೋಜು ನಿಮ್ಮ ಗಮನಕ್ಕೆ :
- ಕಂಪ್ಲಿ ಸಮೀಪದ ಮುದ್ದಾಪುರದಲ್ಲಿ ನಡೆದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ಮಾಡಿದ್ದು ಒಂದು ಕೋತಿ! ಧ್ವಜಾರೋಹಣ ಸಮಯದಲ್ಲಿ ಎಲ್ಲಿಂದಲೋ ಧಾವಿಸಿ ಬಂದ ಕೋತಿ ಹಗ್ಗವನ್ನು ಎಳೆದೇಬಿಟ್ಟಿತು. ಪಾಪ, ಧ್ವಜಾರೋಹಣಕ್ಕೆ ಸಿದ್ಧರಾಗಿ ನಿಂತಿದ್ದ ಅತಿಥಿಗಳು ಕಂಗಾಲು. ಸಭಿಕರು ಮಾತ್ರ ಕೋತಿ ಮಾಡಿದ ಧ್ವಜಾರೋಹಣವನ್ನು ಒಪ್ಪಿಕೊಂಡು ರಾಷ್ಟ್ರಗೀತೆ ಹಾಡಿದರು.
- ಸ್ವಾತಂತ್ರ್ಯೋತ್ಸವ ದೇವ ದೇವತೆಗಳನ್ನೂ ಬಿಡದೆಂಬುದಕ್ಕೆ ಬೆಂಗಳೂರಿನ ಮಲ್ಲೇಶ್ವರಂನಲ್ಲಿನ ಬಡಾವಣೆಯಾಂದರ ಗಣಪತಿಯೇ ಸಾಕ್ಷಿ . ಈ ಗಣಪತಿಗೆ ಸ್ವಾತಂತ್ರ್ಯೋತ್ಸವದ ಅಂಗವಾಗಿ ತ್ರಿವರ್ಣ ಧ್ವಜದಿಂದ ಅಲಂಕರಿಸಲಾಗಿತ್ತು . ತಲೆಗೆ ಗಾಂಧಿ ಟೋಪಿ ! ಜೈ ಗಣೇಶ. ಅಂದಹಾಗೆ, ಗೌರಿ- ಗಣೇಶ ಹೊಸಿತಿಲಲ್ಲಿದ್ದಾರೆ. ಸ್ವಾಗತಕ್ಕೆ ಸಿದ್ಧವಾಗಿದ್ದೀರಾ!
- ಕುಷ್ಟಗಿ ಪುರಸಭೆಯಲ್ಲಿ ನಡೆದ ಸ್ವಾತಂತ್ರ್ಯೋತ್ಸವ ಆಚರಣೆಯಲ್ಲಿ ಧ್ವಜ ಬಿಚ್ಚಿಕೊಳ್ಳದೆ ಹಟ ಹಿಡಿಯಿತು. ಕೊನೆಗೆ ವಿದ್ಯಾರ್ಥಿಯಾಬ್ಬ ಸರಸರ ಕಂಬವೇರಿ, ತೊಡಕು ಬಿಡಿಸಿದಾಗಲೇ ಬಾವುಟ ಪಟಪಟ ಹಾರಾಡಿದ್ದು , ಸಭಿಕರು ನಿರಾಳವಾದದ್ದು . ಕಳೆದ ವರ್ಷ ಕೂಡ ಧ್ವಜ ಇದೇ ರೀತಿ ಹಟ ಹಿಡಿದಿತ್ತಂತೆ. ಏನಿದು ಮಾಯೆ!
- ಹಳೆ ಹುಬ್ಬಳ್ಳಿಯಲ್ಲಿನ ಭಾರತೀಯ ಸ್ಟೇಟ್ ಬ್ಯಾಂಕ್ ಶಾಖೆಯಲ್ಲಿ ತ್ರಿವರ್ಣ ಧ್ವಜ ತಲೆ ಕೆಳಗಾಗಿ ಹಾರುತ್ತಿತ್ತು . ಧ್ವಜಾರೋಹಣ ಸರಿಯಾಗಿಯೇ ಇತ್ತು . ಆನಂತರ ಬಾವುಟ ಕುಸಿಯಿತು. ಮಕ್ಕಳು ಮರು ಹಾರಿಸಿದಾಗ ಈ ಅಚಾತುರ್ಯ ಸಂಭವಿಸಿದೆ ಎನ್ನುತ್ತಾರೆ ಕೆಲವರು. ಅಚಾತುರ್ಯ ಬಹಳ ಕಾಲ ಮುಂದುವರಿದುದು ಮಾತ್ರ ಸತ್ಯ.
ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...
More From
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications